Best Smartphones : ನಿಮಗೆ ಗೊತ್ತಾ ? ಈ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗೋದೇ ಇಲ್ಲಾಂತೆ! ಯಾವುದೀ ಫೋನ್‌? ಇಲ್ಲಿದೆ ಹೆಚ್ಚಿನ ವಿವರ

ಸದಾ ನೆರಳಿನಂತೆ ನಮ್ಮೊಂದಿಗೆ ಇರೊ ಸ್ಮಾರ್ಟ್’ಫೋನ್ ಎಲ್ಲರಿಗೂ ಅಚ್ಚುಮೆಚ್ಚು. ಜಗತ್ತಿನಲ್ಲಿ ಬಹು ಬೇಡಿಕೆಯ ಸಾಧನ ಎಂದೇ ಹೇಳಬಹುದು. ಸಿನೆಮಾ ನೋಡಲು, ಮೆಸೇಜ್ ಮಾಡಲು, ಗೇಮ್ ಆಡಲು, ಜಾಲತಾಣಗಳ ಬಳಕೆಗೆ ಎಲ್ಲದಕ್ಕೂ ಮೊಬೈಲ್ ಒಂದಿದ್ದರೆ ಸಾಕು. ಆದರೆ ಇವೆಲ್ಲವುಗಳನ್ನು ಬಳಕೆ ಮಾಡಬೇಕಾದರೆ ಉತ್ತಮ ಗುಣಮಟ್ಟದ ಪ್ರೊಸೆಸರ್, ಆಪರೇಟಿಂಗ್ ಸಿಸ್ಟಮ್​ಗಳು ಮುಖ್ಯವಾಗಿರುತ್ತದೆ. ಹಾಗಿದ್ದರೆ ಮಾತ್ರ ಮೊಬೈಲ್ ಅನ್ನು ಯಾವುದೇ ಸಮಸ್ಯೆ ಇಲ್ಲದೆ ಉಪಯೋಗಿಸಬಹುದು. ಸಾಮಾನ್ಯವಾಗಿ ಮೊಬೈಲ್ ಉಪಯೋಗಿಸುವಾಗ ಹ್ಯಾಂಗ್ ಆಗೋ ಸಮಸ್ಯೆ ಇದ್ದೇ ಇರುತ್ತೆ. ನೀವು ಈ ರೀತಿ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಾದ್ರೆ ಇನ್ನು ಚಿಂತೆ ಬಿಡಿ. ನೀವು ದಿನದ 24 ಗಂಟೆ ಬಳಕೆ ಮಾಡಿದ್ರೂ ಕೂಡಾ ಹ್ಯಾಂಗ್ ಆಗದೇ ಇರುವಂತಹ ಸ್ಮಾರ್ಟ್​​ಫೋನ್​ಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.

ಒನ್​ಪ್ಲಸ್​ 10 ಪ್ರೋ ಸ್ಮಾರ್ಟ್​​ಫೋನ್​ :- ಒನ್‌ಪ್ಲಸ್‌ 10 ಪ್ರೋ ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ಯೂ ಹೆಚ್​ಡಿ+ ಲಿಕ್ವಿಡ್‌ ಅಮೋಲ್ಡ್​ ಡಿಸ್‌ಪ್ಲೇಯನ್ನು ಹೊಂದಿದ್ದು, 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 ಜೆನ್​ 1 ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯದೊಂದಿಗೆ ಈ ಸ್ಮಾರ್ಟ್​​​ಫೋನ್​ ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ ಓಎಸ್​ 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಒನ್​ಪ್ಲಸ್​ 10 ಪ್ರೋ ಸ್ಮಾರ್ಟ್​​ಫೋನ್​ ಆಕರ್ಷಕ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌ ಹೊಂದಿದೆ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್‌ಫೋನ್‌ :- 6.8 ಇಂಚಿನ ಕ್ಯೂಹೆಚ್​​ಡಿ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್ ಆಕ್ಟಾ ಕೋರ್ 4nm ಎಸ್​ಓಸಿ ಪ್ರೊಸೆಸರ್‌ ಬೆಂಬಲ ಪಡೆದಿದೆ. ಇದರಲ್ಲಿ 12 ಜಿಬಿ ರ್‍ಯಾಮ್ ವೇರಿಯಂಟ್​ ಆಯ್ಕೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 12 ಓಎಸ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​​ಫೋನ್ ಕ್ವಾಡ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಸಾಮರ್ಥ್ಯವನ್ನು ಪಡೆದಿರುವ ಬಲಿಷ್ಠ ಸ್ಮಾರ್ಟ್’ಫೋನ್ ಇದಾಗಿದೆ.

ರೆಡ್​ಮಿ ನೋಟ್​ 11 ಪ್ರೋ ಸ್ಮಾರ್ಟ್​ಫೋನ್​ :- ರೆಡ್​ಮಿ ನೋಟ್​ 11 ಪ್ರೋ ಸ್ಮಾರ್ಟ್​ಫೋನ್​ 6.67 ಇಂಚಿನ ಫುಲ್​​ ಹೆಚ್​ಡಿ+ ಡಿಸ್‌ಪ್ಲೇಯಿಂದ ಕೂಡಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್​​ನೊಂದಿಗೆ ರಕ್ಷಿಸಲಾಗಿದೆ. ಹಾಗೆಯೇ ಈ ಡಿಸ್‌ಪ್ಲೇ 1080×2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ನೀಡಲಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಅಲ್ಲದೆ, ಈ ಫೋನ್‌ನಲ್ಲಿ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಕೂಡ ಅಳವಡಿಸಲಾಗಿದೆ. ಉತ್ತಮ ಕಾರ್ಯಕ್ಷಮತೆಯಿಂದ ಕೂಡಿರುವ ಈ ಸ್ಮಾರ್ಟ್’ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರವು 108 ಮೆಗಾಪಿಕ್ಸೆಲ್​ ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಪಡೆದಿದ್ದು, 67W ವೇಗದ ಚಾರ್ಜಿಂಗ್ ಸಾಮರ್ಥ್ಯವಿದೆ.

ಅಸುಸ್​ ಆರ್​​ಓಜಿ ಫೋನ್ 5 ಸ್ಮಾರ್ಟ್​ಫೋನ್​​ :- ಅಸುಸ್​ ಆರ್​​ಓಜಿ ಫೋನ್ 5 ಸ್ಮಾರ್ಟ್​ಫೋನ್​​ 1,080 x 2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಿಂದ ಕೂಡಿದ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯಿಂದ ಕಂಗೊಳಿಸಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​​ಫೋನ್​ ಅತ್ಯಾಕರ್ಷಕ ಕ್ಯಾಮರ ಸೆಟ್ ಅಪ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.ಇದರ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೂ ಈ ಸ್ಮಾರ್ಟ್​​ಫೋನ್​ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಸ್ಮಾರ್ಟ್’ಫೋನ್ ಅನ್ನು ಅದ್ಭುತವೆಂದೆ ಹೇಳಬಹುದು.

Leave A Reply

Your email address will not be published.