Hair Care Tips : ಮಿರ ಮಿರ ಮಿಂಚುವ ಉದ್ದ ಕೂದಲು ನಿಮ್ಮದಾಗಬೇಕೇ? ಈ ಎಣ್ಣೆ ಹಚ್ಚಿರಿ ಕಮಾಲ್ ನೋಡಿ!
ಪ್ರತಿಯೊಬ್ಬರಿಗೂ ಉದ್ದನೆಯ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಕೂದಲು ಹೆಂಗಳೆಯರ ಅಂದವನ್ನೂ ಹೆಚ್ಚಿಸುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹೇಗೆಂದರೆ, ಕೂದಲು ಉದ್ದವಾಗಿ, ಸುಂದರವಾಗಿ ಹೊಳೆಯುತ್ತಿದ್ದರೆ ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ. ಮಹಿಳೆಯರು ಹೆಚ್ಚಾಗಿ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ವಿವಿಧ ರೀತಿಯ ವಸ್ತುಗಳನ್ನು ಬಳಸುತ್ತಾರೆ. ಕೂದಲಿನ ವಿಷಯಕ್ಕೆ ಬಂದ್ರೆ, ಕೂದಲು ಉದ್ದವಾಗಿ ಬೆಳೆಯಲು, ಮೃದುವಾಗಲು ಹಲವರು ಶ್ಯಾಂಪು, ಕಂಡೀಷನರ್ ಬಳಸುತ್ತಾರೆ. ಆದರೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂಡ ಕೂದಲು ಪೋಷಣೆ, ಬೆಳವಣಿಗೆಗೆ ಸಹಕಾರಿ.
ಹಿಂದಿನ ಕಾಲದಲ್ಲಿನ ಜನರಿಗೆ ಉದ್ದನೆಯ ಜಡೆ ಇತ್ತಂತೆ. ಬಲಿಷ್ಠವಾಗಿ, ಸುಂದರವಾಗಿ ಇತ್ತು. ಕಾರಣ, ಅವರು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚುತ್ತಿದ್ದರು. ಈಗಲೋ ಕೇಳುವುದೇ ಬೇಡ, ಫ್ಯಾಶನ್ ನೆಪದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದಿಲ್ಲ. ಇದರಿಂದ ಕೂದಲು ಹೆಚ್ಚು ತುಂಡಾಗಿ ಹೋಗುತ್ತವೆ. ಕೂದಲಿಗೆ ಪೋಷಕಾಂಶ ಸಿಗದೆ ಬೆಳವಣಿಗೆ ಕುಂಠಿತವಾಗುತ್ತದೆ. ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಇದನ್ನು ಹೋಗಲಾಡಿಸಲು ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ. ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಹೆಚ್ಚಾಗಿ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುತ್ತಾರೆ. ಆದರೆ ರೋಸ್ಮರಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಉದ್ದನೆಯ ಕೂದಲು ಪಡೆಯಬಹುದು. ಹೇಗೆ ಹಚ್ಚುವುದು ? ಇದರ ಪ್ರಯೋಜನ ಏನು ? ತಿಳಿಯೋಣ.
ರೋಸ್ಮರಿ ಸಾರಭೂತ ತೈಲವನ್ನು ರೋಸ್ಮರಿ ಸಸ್ಯದಿಂದ ಹೊರ ತೆಗೆಯಲಾಗುತ್ತದೆ. ಇದು ಸೂಜಿಯಂತಹ ಎಲೆಗಳು ಮತ್ತು ಮರದ ಪರಿಮಳವನ್ನು ಹೊಂದಿರುವ ನಿತ್ಯಹರಿದ್ವರ್ಣದ ಪೊದೆ. ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತಜ್ಞರ ಪ್ರಕಾರ, ರೋಸ್ಮರಿ ಎಣ್ಣೆಯು ಕೂದಲಿಗೆ ಸಂಬಂಧಿಸಿದ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗಿದೆ. ಕೂದಲಿಗೆ ರೋಸ್ಮರಿ ಸಾರಭೂತ ತೈಲವನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮಾತ್ರವಲ್ಲದೆ ಕೂದಲು ಉದುರುವಿಕೆಯನ್ನೂ ತಡೆಯುತ್ತದೆ.
ವಿಧಾನ : ಒಂದು ಬಟ್ಟಲಿನಲ್ಲಿ ರೋಸ್ಮರಿ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕೆ ಕೆಲವು ಹನಿ ಕ್ಯಾಸ್ಟರ್ ಆಯಿಲ್ ಸೇರಿಸಿ, ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಎಣ್ಣೆಯನ್ನು ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಬೇಕು. ಎಣ್ಣೆ ಹಚ್ಚಿ, ಅರ್ಧ ಗಂಟೆಯ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಆಗುತ್ತದೆ.
ರೋಸ್ಮರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಮಾತ್ರವಲ್ಲದೆ, ಒಣ ತಲೆಹೊಟ್ಟು ಮತ್ತು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೂ ತಲೆಬುರುಡೆಯಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಇನ್ನು ಕ್ಯಾಸ್ಟರ್ ಆಯಿಲ್ ಕೂಡ ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಹಾಗಾಗಿ ಈ ಎರಡು ಎಣ್ಣೆಗಳ ಮಿಶ್ರಣವು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.