Galaxy M33 5G: 50MP ಕ್ಯಾಮೆರಾ ಹೊಂದಿರುವ ಸ್ಯಾಮ್​ಸಂಗ್​ನ ಈ ಫೋನ್ ಕೇವಲ ಇಷ್ಟೊಂದು ಕಡಿಮೆ ಬೆಲೆಗೆ ಲಭ್ಯ ! ಅಮೆಜಾನ್‌ ನೀಡಿದೆ ಬಂಪರ್‌ ಆಫರ್‌ !

ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನೀವೇನಾದರೂ ಮೊಬೈಲ್  ಕೊಳ್ಳುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದುಕೊಂಡರೆ ಒಳ್ಳೆಯದು.

ಭಾರತದಲ್ಲಿ ಸ್ಯಾಮ್ಸಂಗ್ (Samsung) ಕಂಪನಿ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್ಫೋನ್ಗಳಿಗೆ ದೊಡ್ದ ಮಟ್ಟದ ಡಿಮ್ಯಾಂಡ್ ಇದ್ದು, ಇದೀಗ, ಹೆಚ್ಚಿನ ಡಿಸ್ಕೌಂಟ್ ಜೊತೆಗೆ  ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎಮ್​​33 5G (Galaxy M33 5G) ಮೊಬೈಲ್ ಅನ್ನು ಪಡೆದುಕೊಳ್ಳಲು ಸುವರ್ಣ ಅವಕಾಶ ನಿಮಗಾಗಿ ಎದುರು ನೋಡುತ್ತಿದೆ. ಮತ್ತೇಕೆ ತಡ!! ಮಿಸ್ ಮಾಡದೇ ಈ ಆಫರ್ ನ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ.

ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್​​ಫೋನ್​ಗಳಲ್ಲಿ ಸ್ಯಾಮ್​ಸಂಗ್ ತನ್ನ ಪಾರುಪತ್ಯ ಕಾಯ್ದುಕೊಂಡು ಎರಡನೆ ಸ್ಥಾನದಲ್ಲಿದೆ. ಸಹಜವಾಗಿ, ಗ್ಯಾಲಕ್ಸಿ ಹೊಸ ಆವೃತ್ತಿಯ ಫೋನ್ ಬಿಡುಗಡೆಯಾದ ಸಂದರ್ಭ ಹಿಂದಿನ ಆವೃತ್ತಿಯ  ಫೋನಿನ ಬೆಲೆಯಲ್ಲಿ ಇಳಿಕೆ ಕಂಡುಬರುತ್ತದೆ. ಇದೇ ರೀತಿ, ಈ ವರ್ಷದ ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿಯನ್ನು (Galaxy S23 Series) ಕಳೆದ ವಾರವಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದರ ಬೆನ್ನಲ್ಲೇ ಬಿಗ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಹೊಂದಿರುವ ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎಮ್​​33 5G (Galaxy M33 5G) ಮೊಬೈಲ್ ಅನ್ನು ಭರ್ಜರಿ ಡಿಸ್ಕೌಂಟ್ ಮೂಲಕ ಮಾರಾಟ ಮಾಡುತ್ತಿದೆ.  ಕೈಗೆ ಎಟಕುವ ದರದಲ್ಲಿ ಉತ್ತಮ ವೈಶಿಷ್ಟ್ಯತೆ ಹೊಂದಿರುವ ಮೊಬೈಲ್ ಪಡೆಯಲು ಇದು ನಿಮಗೆ ಉತ್ತಮ ಅವಕಾಶ.

ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್ಫೋನ್ ಒಟ್ಟು ಎರಡು ಸ್ಟೋರೆಜ್ ಮಾದರಿಯಲ್ಲಿ ರಿಲೀಸ್ ಮಾಡಿತ್ತು. ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್ಫೋನ್ 6.6 ಇಂಚಿನ ಫುಲ್ HD+ ಇನ್ಫಿನಿಟಿ V ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್​ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್ ಅಳವಡಿಕೆ ಮಾಡಲಾಗಿದ್ದು, ಆಂಡ್ರಾಯ್ಡ್ 12 UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಮೊಬೈಲ್ RAM ಪ್ಲಸ್ ಫೀಚರ್ಸ್ ಮೂಲಕ, RAM ಅನ್ನು ಅದರ 16GB ವರೆಗೆ ವಿಸ್ತರಿಸಬಹುದಾದ ಆಯ್ಕೆ ಒಳಗೊಂಡಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಮಾದರಿಗೆ 24,999 ರೂ. ಆಗಿದೆ. ಆದರೆ, ಇದೀಗ ನಿಮಗೆ ಭರ್ಜರಿ ಕೊಡುಗೆಯಾಗಿ, ಈ ಕಾಮರ್ಸ್ ವೆಬ್ ಸೈಟ್ ನಲ್ಲಿ  ಈ ಫೋನ್ ಮೇಲೆ ಶೇ. 32 ರಷ್ಟು ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಕೇವಲ 16,999 ರೂ. ಗೆ ಈ ಫೋನನ್ನು ಖರೀದಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇಷ್ಟೆ ಅಲ್ಲ ಕಣ್ರೀ!!  15,450 ರೂ. ವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಲಭ್ಯವಾಗಲಿದ್ದು, ಪ್ರೈಮ್ ಚಂದಾದಾರರಾಗಿದ್ದರೆ ಮತ್ತಷ್ಟು ಆಫರ್​ಗಳು ದೊರೆಯಲಿವೆ. ನೀವು ಬಜೆಟ್ ಬೆಲೆಗೆ ಒಂದೊಳ್ಳೆ ಫೋನ್ ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಇನ್ನು ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಜೊತೆಗೆ 120-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ.ದೀರ್ಘ ಸಮಯದ  ಬಾಳಿಕೆ ಹೊಂದಿರುವ  6000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲ ನೀಡುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್ ಮತ್ತು GPS ಅನ್ನು ಹೊಂದಿದೆ.ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಯನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ ಬಗ್ಗೆ ಗಮನ ಹರಿಸಿದರೆ,  ಬೊಕೆ ಎಫೆಕ್ಟ್, ಸಿಂಗಲ್ ಟೇಕ್, ಆಬ್ಜೆಕ್ಟ್ ಎರೇಸರ್ ಮತ್ತು ವೀಡಿಯೋ TNR ಮತ್ತು ವೀಡಿಯೋಗ್ರಫಿ ಮೊಡ್ ಗಳಿಗೆ ಸಪೋರ್ಟ್ ಮಾಡುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Leave A Reply

Your email address will not be published.