Beauty Tips : ಮೇಕಪ್ ತೆಗೆಯುವಾಗ ಈ ವಿಚಾರ ನೆನಪಿಟ್ಟುಕೊಳ್ಳಿ

ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್‌ಗಳು ಮಾತ್ರವೇ ಮೇಕಪ್‌ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್‌ ಕಿಟ್‌ ಇದ್ದೇ ಇರುತ್ತದೆ. ಆಧುನಿಕ ಯುಗದಲ್ಲಿ, ಅನೇಕ ಜನರು ಮೇಕಪ್ ಧರಿಸುತ್ತಾರೆ. ಕೇವಲ ಮಹಿಳಾಮಣಿಗಳಿಗಷ್ಟೇ ಸೀಮಿತವಾಗಿದ್ದ ಈ ಮೇಕಪ್‌ ಈಗ ಪುರುಷರನ್ನೂ ಬಿಟ್ಟಿಲ್ಲ. ನಟರು, ಟಿವಿ ನಿರೂಪಕರು, ಮಾಡೆಲ್‌ಗಳು ಸೇರಿದಂತೆ, ಟ್ರೆಂಡ್‌ ಬಗ್ಗೆ ಆಸಕ್ತಿ ಇರುವ ಎಲ್ಲಾ ಯುವಕರು ಮೇಕಪ್‌ ಹಚ್ಚಿಕೊಳ್ಳುತ್ತಾರೆ. ಮೇಕಪ್ ಏನೋ ಹಚ್ಚಿಕೊಳ್ಳುತ್ತಾರೆ, ಆದರೆ ಅದನ್ನು ತೆಗೆಯೋದಿಕ್ಕೂ ಗೊತ್ತಿರಬೇಕು. ತಪ್ಪಾದ ರೀತಿಯಲ್ಲಿ ತೆಗೆದರೆ ಚರ್ಮಕ್ಕೆ ಹಾನಿಯುಂಟಾಗುತ್ತದೆ.

ದೀರ್ಘ ಸಮಯಗಳ ಕಾಲ ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮದ ಮೇಲಿರುವ ರಂಧ್ರಗಳು ಮುಚ್ಚಿಬಿಡುತ್ತದೆ. ಚರ್ಮದಲ್ಲಿ ಇರುವ ತೇವಾಂಶಗಳನ್ನು ತೆಗೆದು ಶುಷ್ಕತೆಗೆ ಒಳಗಾಗುವಂತೆ ಮಾಡುವುದು. ಜೊತೆಗೆ ವಿವಿಧ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ಮಾಡುವುದು. ಹಾಗಾಗಿ ಮಲಗುವ ಮುನ್ನ ಮೇಕಪ್ ಅನ್ನು ತೆಗೆಯಬೇಕು. ಇನ್ನು ಮೇಕಪ್ ತೆಗೆಯಬೇಕಾದರೆ ಎಚ್ಚರದಿಂದಿರಬೇಕು. ಸರಿಯಾದ ರೀತಿಯಲ್ಲಿ ತೆಗೆಯಬೇಕು. ಅದಕ್ಕೂ ಒಂದು ವಿಧಾನವಿದೆ. ಮೇಕಪ್ ತೆಗೆಯಲು ಈ ಸುಲಭ ವಿಧಾನಗಳನ್ನು ಅನುಸರಿಸಿ. ಆಗ ಚರ್ಮಕ್ಕೆ ಯಾವುದೇ ಹಾನಿ ಉಂಟಾಗಲ್ಲ.

ಉಗುರು ಬೆಚ್ಚಗಿನ ನೀರು :

ಮೇಕಪ್ ತೆಗೆಯಲು ಬಿಸಿ ನೀರನ್ನು ಬಳಕೆ ಮಾಡಬೇಡಿ. ಯಾಕಂದ್ರೆ ನಿಮ್ಮ ಚರ್ಮವು ಸೂಕ್ಷ್ಮವಾಗಿರುತ್ತದೆ ಮತ್ತು ಬಿಸಿ ನೀರಿನಿಂದ ಮೇಕ್ಅಪ್ ತೆಗೆಯುವುದು ನಿಮ್ಮ ಚರ್ಮದ ತಡೆಗೋಡೆಗೆ ಹಾನಿ ಮಾಡುತ್ತದೆ. ಅದೇ ರೀತಿ ಮೇಕ್ಅಪ್ ತೆಗೆಯಲು ತಣ್ಣೀರು ಬಳಸುವುದು ಕೂಡ ಒಳ್ಳೆಯದಲ್ಲ. ನಿಮ್ಮ ಚರ್ಮವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಮತ್ತು ಅದರ ನೈಸರ್ಗಿಕ ತೈಲಗಳನ್ನು ಕಾಪಾಡಿಕೊಳ್ಳಲು ಉಗುರು ಬೆಚ್ಚಗಿನ ನೀರಿನಿಂದ ಮೇಕಪ್ ತೆಗೆಯುವುದು ಉತ್ತಮ.

ತುಟಿಯ ಮೇಕಪ್ ತೆಗೆಯುವುದು :

ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದರೇನೇ ಮುಖಕ್ಕೆ ಒಂದು ಹೊಳಪು ಬರೋದು. ಮುಖದ ಸೌಂದರ್ಯದಲ್ಲಿ ತುಟಿಯ ಪಾತ್ರ ಕೂಡ ಮಹತ್ತರವಾಗಿದೆ. ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿಲ್ಲವೆಂದ್ರೆ ಮೇಕಪ್ ಮಾಡಿ ಪ್ರಯೋಜನವಿಲ್ಲ. ಕೆಲವರಂತು ದಿನವಿಡಿ ಲಿಪ್ ಸ್ಟಿಕ್ ಹಚ್ಚಿಕೊಳ್ಳುವವರೂ ಇರುತ್ತಾರೆ. ಆದರೆ ಇದನ್ನು ತೆಗೆಯುವಾಗ ಕೆಲವು ವಿಧಾನ ಅನುಸರಿಸಬೇಕು. ಇಲ್ಲವಾದರೆ ಮೃದುವಾದ ತುಟಿಗಳಿಗೆ ಹಾನಿ ಉಂಟಾಗುತ್ತದೆ. ಕ್ಲೆನ್ಸರ್ ಅಥವಾ ಮೈಕೆಲ್ಲರ್ ನೀರಿಗೆ ಹತ್ತಿಯನ್ನು ಅದ್ದಿ ಅದರಿಂದ ತುಟಿಯನ್ನು ಸ್ವಚ್ಛಗೊಳಿಸಬೇಕು. ಅದ್ದಿದ ಹತ್ತಿಯನ್ನು ಕೆಲ ಸೆಕೆಂಡ್ ತುಟಿ ಮೇಲೆ ಇಟ್ಟು ನಂತ್ರ ಸ್ವಚ್ಛಗೊಳಿಸಬೇಕು. ಈ ರೀತಿಯಾಗಿ ತುಟಿಯ ಲಿಪ್ ಸ್ಟಿಕ್ ತೆಗೆಯಬೇಕು.

ಮುಖದ ಮೇಕಪ್ ತೆಗೆಯುವುದು :

ಮೇಕಪ್ ತೆಗೆಯದೆ ಹಾಗೆಯೇ ನಿದ್ರೆ ಮಾಡಿದರೆ ಅಥವಾ ದೀರ್ಘ ಸಮಯಗಳ ಕಾಲ ಮೇಕಪ್‍ಅನ್ನು ತೆಗೆಯದೆ ಇದ್ದರೆ ಚರ್ಮದ ರಂಧ್ರಗಳಲ್ಲಿ ಜಿಡ್ಡು, ಕೊಳೆ, ರಾಸಾಯನಿಕ ವಸ್ತುಗಳು ಸೇರಿಕೊಳ್ಳುತ್ತವೆ. ಅವು ಚರ್ಮ ಒಡೆಯುವುದು, ಮೊಡವೆ ಆಗುವುದು. ಹಾಗಾಗಿ ಮೇಕಪ್ ತೆಗೆಯಬೇಕು. ಅದು ಕೂಡ ಸರಿಯಾದ ಕ್ರಮದಲ್ಲಿ, ಮುಖದ ಮೇಕಪ್ ಸ್ವಚ್ಛಗೊಳಿಸಲು ಕ್ಲೆನ್ಸಿಂಗ್ ಬಾಮ್ ಬಳಸಬಹುದು. ಕೈನಲ್ಲಿ ಸ್ವಲ್ಪ ಕ್ಲೆನ್ಸಿಂಗ್ ಬಾಮ್ ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. ನಂತರ ಬಟ್ಟೆ ಅಥವಾ ಹತ್ತಿಯಿಂದ ಮುಖವನ್ನು ಒರೆಸಬೇಕು. ಬಳಿಕ ಫೇಸ್ ವಾಶ್ ಬಳಸಿ ಮುಖವನ್ನು ತೊಳೆಯಬೇಕು. ಮುಖವನ್ನು ಸ್ವಚ್ಛಗೊಳಿಸಿದ ನಂತರ ಟೋನರ್, ಮಾಯಿಶ್ಚರೈಸರ್ ಹಚ್ಚಿರಿ‌.

ಕಣ್ಣಿನ ಮೇಕಪ್ ತೆಗೆಯುವುದು :

ಕಣ್ಣಿನ ಮೇಕ್ಅಪ್ ಅನ್ನು ತೆಗೆಯಲು, ಹತ್ತಿಯ ಮೇಲೆ ಸ್ವಲ್ಪ ಕಣ್ಣಿನ ಮೇಕಪ್ ರಿಮೂವರ್ ಅನ್ನು ತೆಗೆದುಕೊಂಡು, ನಿಮ್ಮ ಕಣ್ಣಿನ ಮೇಕ್ಅಪ್ ಅನ್ನು ಮೇಲ್ಮುಖವಾಗಿ ತೆಗೆದುಹಾಕಿ. ಹಾಗೇ ಕಾಟನ್ ಪ್ಯಾಡ್‌ನಿಂದ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಮೇಕ್ಅಪ್ ಅನ್ನು ಒರೆಸುವ ಮೊದಲು, ಹತ್ತಿ ಸ್ವ್ಯಾಬ್ ಅನ್ನು ನಿಮ್ಮ ಕಣ್ಣುಗಳ ಮೇಲೆ 10-15 ಸೆಕೆಂಡುಗಳ ಕಾಲ ಇರಿಸಿ ಇದರಿಂದ ಅದು ನಿಮ್ಮ ಮೇಕ್ಅಪ್ ಅನ್ನು ತೆಗೆಯಲು ಸುಲಭವಾಗುತ್ತದೆ.

Leave A Reply

Your email address will not be published.