Astro Tips : ಈ ದಿನದಂದು ಗಡ್ಡ, ಕೂದಲು ಕತ್ತರಿಸಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ!!!

ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಗಡ್ಡ ಮತ್ತು ಕೂದಲನ್ನು ಎಲ್ಲಾ ಸಮಯದಲ್ಲೂ ಕತ್ತರಿಸಬಾರದು. ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಶುಭಕರವಾದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕೆಲವು ತಿಥಿಗಳಲ್ಲಿ, ವಿಶೇಷವಾದ ವಾರಗಳಲ್ಲಿ ದಿನದ ಎಲ್ಲಾ ಸಮಯದಲ್ಲಿ ಗಡ್ಡ ಹಾಗೂ ಕೂದಲನ್ನು ಕತ್ತರಿಸಿಕೊಳ್ಳುವ ಕೆಲಸಗಳನ್ನು ಮಾಡಬಾರದು. ಅದು ಅಪಶಕುನದ ಸಂಕೇತ. ಶುಭ ಸಂದರ್ಭದಲ್ಲಿ ಹೀಗೆ ಮಾಡಿದರೆ ಅಪಶಕುನ ಉಂಟಾಗುವುದು. ಭವಿಷ್ಯದಲ್ಲಿ ನಕಾರಾತ್ಮಕ ಸಂಗತಿ ಉದ್ಭವಿಸುವುದು ಎಂದು ಹೇಳಲಾಗುತ್ತದೆ. ಇನ್ನು ಯಾವ ದಿನ ಕೂದಲು ಹಾಗೂ ಗಡ್ಡ ಕತ್ತರಿಸಬಾರದು ಎಂದು ನೋಡೋಣ.

ಸೋಮವಾರ: ಹಿಂದೂ ಧರ್ಮದ ಪ್ರಕಾರ ಸೋಮವಾರವನ್ನು ಶಿವನಿಗೆ ಹಾಗೂ ಚಂದ್ರನಿಗೆ ಅರ್ಪಿತವಾದ ದಿನ ಎಂದು ಪರಿಗಣಿಸಲಾಗುವುದು. ಚಂದ್ರನು ಮನುಷ್ಯನ ಮನಸ್ಸಿನ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತಾನೆ. ಹಾಗಾಗಿ ಸೋಮವಾರದಂದು ಗಡ್ಡ ಮತ್ತು ಕೂದಲನ್ನು ಕತ್ತರಿಸಬಾರದು. ಇಲ್ಲದಿದ್ದರೆ, ಅದರ ದುಷ್ಪರಿಣಾಮ ಆರೋಗ್ಯ, ಮನಸ್ಸು, ಶಿಕ್ಷಣ ಮತ್ತು ಮಕ್ಕಳ ಮೇಲೆ ಬೀಳುತ್ತದೆ. ಹಾಗೂ ಇದರ ಪರಿಣಾಮವಾಗಿ ವ್ಯಕ್ತಿಯ ಮಾನಸಿಕ ಆರೋಗ್ಯವು ಹದಗೆಡುವುದು. ಜೊತೆಗೆ ತೀವ್ರವಾದ ನಕಾರಾತ್ಮಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುವ ಸಂದರ್ಭ ಒದಗಿ ಬರುತ್ತದೆ. ಅಲ್ಲದೆ, ಈ ದಿನ ಉಗುರುಗಳನ್ನು ಸಹ ಕತ್ತರಿಸಬಾರದು.

ಮಂಗಳವಾರ: ಸಾಮಾನ್ಯವಾಗಿ ಹಲವರು ಮಂಗಳವಾರದಂದು ತಮ್ಮ ಕೂದಲು ಮತ್ತು ಗಡ್ಡವನ್ನು ಕತ್ತರಿಸುವುದಿಲ್ಲ. ಮಂಗಳವಾರದಂದು ಕೂದಲು ಕತ್ತರಿಸುವುದರಿಂದ ಗ್ರಹಗಳ ದುಷ್ಪರಿಣಾಮಗಳು ನಿಮ್ಮ ಮನಸ್ಸಿನ ಮೇಲೆ ಬೀಳುತ್ತವೆ ಎಂದು ನಂಬಲಾಗಿದೆ. ಅಲ್ಲದೇ, ಹಣದ ಕೊರತೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ದಿನ ಕೂದಲನ್ನು ಕತ್ತರಿಸಬಾರದು. ಅಲ್ಲದೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವಾರದಂದು ಕೂದಲು ಅಥವಾ ಗಡ್ಡವನ್ನು ತೆಗೆಸುವುದು ವ್ಯಕ್ತಿಯ ವಯಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಬುಧವಾರ: ಬುಧವಾರವನ್ನು ಕೃಷ್ಣ ವಾರ, ಬುಧನ ಪ್ರಭಾವದ ವಾರವೆಂದು ಪರಿಗಣಿಸಲಾಗುತ್ತದೆ. ಈ ವಾರ ಉಗುರು ಮತ್ತು ಕೂದಲು ಕಟ್ ಮಾಡಿದರೆ ಯಾವುದೇ ನಕಾರಾತ್ಮಕ ಪರಿಣಾಮ ಆಗುವುದಿಲ್ಲ. ಹಾಗಾಗಿ ಈ ವಾರ ಅತಿ ಸೂಕ್ತವಾದ ವಾರ. ಅಲ್ಲದೆ, ಬುಧವಾರ ಕೂದಲು ಮತ್ತು ಗಡ್ಡ ಕತ್ತರಿಸುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ಹೇಳಲಾಗುತ್ತದೆ. ವ್ಯಾಪಾರದಲ್ಲಿ ಲಾಭ ಲಭಿಸುತ್ತದೆ. ಹಾಗೇ ಹಣದ ಕೊರತೆ ಉಂಟಾಗುವುದಿಲ್ಲ. ಈ ದಿನ ಕ್ಷೌರ ಮಾಡಿದರೆ ಸಂಪತ್ತನ್ನು ಹೆಚ್ಚಾಗುತ್ತದೆ. ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಗುರುವಾರ: ಗುರುವಾರವು ಭಗವಾನ್ ವಿಷ್ಣು ಮತ್ತು ಗುರು ಗ್ರಹಕ್ಕೆ ಮೀಸಲಾದ ದಿನವಾಗಿರುತ್ತದೆ. ಈ ದಿನ ಅತ್ಯಂತ ಶುಭ ದಿನವಾಗಿದ್ದು, ಈ ವಾರದಂದು ಉಗುರು ಕತ್ತರಿಸುವುದು, ಗಡ್ಡ ಮತ್ತು ಕೂದಲನ್ನು ಕತ್ತರಿಸಿದರೆ ಲಕ್ಷ್ಮೀ ಮತ್ತು ವಿಷ್ಣು ದೇವರಿಗೆ ಅವಮಾನ ಮಾಡಿದಂತೆ. ಇದರಿಂದ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಜೊತೆಗೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ನೋವು ಹಾಗೂ ಅಡೆತಡೆಯನ್ನು ಎದುರಿಸಬೇಕಾಗುವುದು. ಅಲ್ಲದೆ, ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ. ಆರ್ಥಿಕ ಸಮಸ್ಯೆ, ಆರೊಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಶುಕ್ರವಾರ: ಶುಕ್ರವಾರವು ದುರ್ಗೆಯ ವಾರವಾಗಿದ್ದು, ಶುಕ್ರ ಗ್ರಹದ ಅಧಿಪತ್ಯದ ವಾರವೆಂದು ಪರಿಗಣಿಸಲಾಗುತ್ತದೆ. ಶುಕ್ರವಾರ ದಿನ ಕೂದಲನ್ನು ಕತ್ತರಿಸುವ ಮೂಲಕ, ಲಾಭ ಮತ್ತು ಖ್ಯಾತಿಯ ಹೆಚ್ಚಳ ಕಂಡುಬರುತ್ತದೆ‌. ಈ ದಿನದಂದು ಕೂದಲು ಕತ್ತರಿಸುವುದು, ಶೇವ್ ಮಾಡುವುದು ಅಥವಾ ಉಗುರುಗಳನ್ನು ಕತ್ತರಿಸುವುದು ಶುಭ ಸೂಚಕ. ಈ ದಿನ ಕೂದಲು ಕತ್ತರಿಸಿದರೆ ಜೀವನದಲ್ಲಿ ಕೀರ್ತಿ ಮತ್ತು ಸಂಪತ್ತು ಹೆಚ್ಚುತ್ತದೆ. ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗುತ್ತದೆ. ಹಾಗೇ ಹಣದ ಕೊರತೆ ಉಂಟಾಗುವುದಿಲ್ಲ.

ಶನಿವಾರ: ಶನಿವಾರವು ಶನಿ ದೇವ ಹಾಗೂ ಶನಿ ಗ್ರಹಕ್ಕೆ ಮೀಸಲಾದ ದಿನ. ಈ ದಿನದಂದು ಗಡ್ಡ ಮತ್ತು ಕೇಶ ರಾಶಿಯನ್ನು ಕತ್ತರಿಸಬಾರದು.
ಕೂದಲು-ಗಡ್ಡ, ಉಗುರುಗಳು ಶನಿ ದೇವರಿಗೆ ಸಂಬಂಧಿಸಿವೆ. ಹಾಗಾಗಿ ಕೂದಲು, ಗಡ್ಡ, ಉಗುರು ಕತ್ತರಿಸುವುದು ಶನಿದೇವನನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಆಪ್ತರು ಅಥವಾ ವ್ಯಕ್ತಿಯೇ ಅಕಾಲಿಕ ಮರಣ ಅಥವಾ ಹಠಾತ್ ರೋಗಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಲಾಗುವುದು‌. ಶನಿವಾರದಂದು ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದು ಹಣದ ನಷ್ಟ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಭಾನುವಾರ : ಭಾನುವಾರವು ಸೂರ್ಯ ದೇವನಿಗೆ ಮೀಸಲಾದ ದಿನ. ಈ ದಿನದಂದು ಕೂದಲು ಮತ್ತು ಉಗುರುಗಳನ್ನು ಕತ್ತರಿಸಿದರೆ ಅದು ಅತ್ಯಂತ ಅಶುಭ ದಿನ. ಭಾನುವಾರದಂದು ಉಗುರು ಮತ್ತು ಕೂದಲನ್ನು ಕತ್ತರಿಸಿಕೊಂಡರೆ ವ್ಯಕ್ತಿಯು ಸಂಪತ್ತು ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುವನು. ಇದು ಧರ್ಮದ ನಾಶವನ್ನು ಸೂಚಿಸುತ್ತದೆ. ಅಲ್ಲದೆ, ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಕೆಲಸಗಳಲ್ಲಿ ವೈಫಲ್ಯವಿದೆ. ಹಣಕಾಸಿನ ಕಷ್ಟ ಎದುರಾಗುತ್ತದೆ.

Leave A Reply

Your email address will not be published.