Save Money : ನಿಮ್ಮ ಪರ್ಸ್‌ನಲ್ಲಿ ಹಣ ಸದಾ ಇರಬೇಕೇ? ಈ ಟಿಪ್ಸ್‌ ಫಾಲೋ ಮಾಡಿ ನೋಡಿ, ಲಕ್ಷ್ಮೀ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ!

ವ್ಯಕ್ತಿಯು ತನ್ನ ಪರ್ಸ್ ಯಾವಾಗಲೂ ಹಣದಿಂದ ತುಂಬಿರಬೇಕೆಂದು ಬಯಸುತ್ತಾನೆ ಆದರೆ ಅನೇಕ ಬಾರಿ ಕೆಲವು ಪರಿಸ್ಥಿತಿಯು ಬಿಕ್ಕಟ್ಟನ್ನು ಎದುರಿಸುವಂತೆ ಮಾಡುತ್ತದೆ. ಕೆಲವು ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಪರಿಸ್ಥಿತಿಯನ್ನು ತಪ್ಪಿಸಲು ಮತ್ತು ಪರ್ಸ್ ಯಾವಾಗಲೂ ಹಣದಿಂದ ತುಂಬಿರಲು ಕೆಲವು ಸಲಹೆಗಳನ್ನು ನೀಡಲಾಗಿದೆ

 

  • ತಾಯಿ ಲಕ್ಷ್ಮಿಯ ಆಶೀರ್ವಾದ ಬೇಕಾದರೆ, ಕಮಲದ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಅನಾವಶ್ಯಕ ಖರ್ಚುಗಳಿಂದಲೂ ಪಾರಾಗಬಹುದು.
  • ನಿಮ್ಮ ಪರ್ಸಲ್ಲಿ ಲಕ್ಷ್ಮೀಯ ಫೋಟೋ ಇಟ್ಟುಕೊಳ್ಳುವುದರಿಂದ ಆರ್ಥಿಕವಾಗಿ ನಿಮಗೆ ಲಾಭವಾಗಲಿದೆ. ಅದರಲ್ಲೂ ಲಕ್ಷ್ಮೀ ಕೈನಿಂದ ನಾಣ್ಯ ಬೀಳಿಸುತ್ತಿರುವ ಫೋಟೋ ಇಟ್ಟುಕೊಳ್ಳಬೇಕು.
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಮ್ಮ ಪರ್ಸ್‌ನಲ್ಲಿ ಕೆಲವು ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳುವುದು ನಿಮಗೆ ಮಂಗಳಕರವಾಗಿರುತ್ತದೆ. ವರ್ಷವಿಡೀ ನಿಮ್ಮ ಪರ್ಸ್‌ನಲ್ಲಿ ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳುವುದರಿಂದ, ಮಾತೆ ಲಕ್ಷ್ಮಿಯು ನಿಮ್ಮಿಂದ ಪ್ರಸನ್ನಳಾಗುತ್ತಾಳೆ.
  • ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್​ನಲ್ಲಿ ಹರಿದ ಚೀಟಿಗಳು, ಬಿಲ್, ಹಣ ತೆಗೆದ ಚೀಟಿ ಈ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಇದು ನಿಮ್ಮ ಹಣದ ಹರಿವನ್ನು ತಡೆಯುತ್ತದೆ ಎನ್ನಲಾಗುತ್ತದೆ.
  • ಸಾಮಾನ್ಯವಾಗಿ ನಮ್ಮ ಪರ್ಸ್​ನಲ್ಲಿ ನಮಗೆ ಇಷ್ಟವಾಗುವ ವ್ಯಕ್ತಿಯ ಫೋಟೋ ಇಟ್ಟುಕೊಂಡಿರುತ್ತೇವೆ. ಆದರೆ ಅಪ್ಪಿ-ತಪ್ಪಿಯೂ ಸತ್ತ ವ್ಯಕ್ತಿಗಳ ಫೋಟೋ ಇಟ್ಟುಕೊಳ್ಳಬಾರದು ಎನ್ನಲಾಗುತ್ತದೆ.
  • ಯಾವುದೇ ಕಾರಣಕ್ಕೂ ಮಾತ್ರೆಗಳನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುಕೊಳ್ಳಬೇಡಿ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.
  • ನಿಮ್ಮ ಬಳಿ ಹಣವಿಲ್ಲದಿದ್ದರೆ. ಅಂದರೆ, ಎಲ್ಲಾ ಕಠಿಣ ಪರಿಶ್ರಮದ ನಂತರವೂ ನೀವು ಹಣದ ಪ್ರಯೋಜನವನ್ನು ಪಡೆಯದೇ ಇದ್ದರೆ. ಈ ಪರಿಸ್ಥಿತಿಯಲ್ಲಿ 7 ಹಳದಿ ಬಣ್ಣದ ಕವಡೆಯನ್ನು ನಿಮ್ಮ ಪರ್ಸ್‌ನಲ್ಲಿಟ್ಟುಕೊಳ್ಳಿ. ಇದು ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ತರುತ್ತದೆ.
  • ಅರಳಿ ಮರದಲ್ಲಿ ಅನೇಕ ದೇವರು ಮತ್ತು ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು, ಅರಳಿ ಎಲೆಗಳ ಪರಿಹಾರವು ಬಹಳ ಪರಿಣಾಮಕಾರಿ. ಹಾಗಾಗಿ ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ, ಒಂದು ಅರಳಿ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿಡಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಧನಲಾಭವಾಗುತ್ತದೆ. ಆದರೆ ಈ ಎಲೆಯನ್ನು ಯಾರಿಗೂ ಕಾಣದ ರೀತಿಯಲ್ಲಿ ಇಟ್ಟುಕೊಳ್ಳಬೇಕು.
  • ನಮಗೆ ಬಸ್​ನಲ್ಲಿ ಓಡಾಡುವಾಗ ಅಥವಾ ಯಾವುದೇ ಕಾರಣಕ್ಕೆ ನಾಣ್ಯಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ಪರ್ಸ್​ನಲ್ಲಿ ತುಂಬಿ ಇಟ್ಟುಕೊಳ್ಳುತ್ತೇವೆ. ಆದರೆ ಜಾಸ್ತಿ ನಾಣ್ಯವನ್ನು ಇಟ್ಟುಕೊಳ್ಳಬಾರದು. ಅವುಗಳ ಶಬ್ಧ ನೆಗೆಟಿವ್ ಎನರ್ಜಿ ಹೆಚ್ಚಿಸುತ್ತದೆ.
  • ಪರ್ಸ್​ನಲ್ಲಿ ನಾವು ಹಣ ಮಾತ್ರವಲ್ಲದೇ ಇತರ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಅದು ತಪ್ಪು. ಅದರಲ್ಲೂ ಮುಖ್ಯವಾಗಿ ಮನೆಯ ಕೀ ಅಥವಾ ಯಾವುದೇ ಕೀಯನ್ನು ಉಟ್ಟುಕೊಳ್ಳಬಾರದು.
  • ನಾವು ಹಣವನ್ನು ಇಟ್ಟುಕೊಳ್ಳುವಾಗ ನೋಟುಗಳನ್ನು ಮಡಚಿ ಇಡಬಾರದು ಎನ್ನಲಾಗುತ್ತದೆ. ಈ ರೀತಿ ಮಡಚಿ ಇಡುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.

ಇದರ ಜೊತೆಗೆ ಪರ್ಸ್‌ನಲ್ಲಿ ಅನಗತ್ಯ ವಸ್ತುಗಳನ್ನು ಇಡುವುದನ್ನು ತಪ್ಪಿಸಿ. ನಿಮ್ಮ ಪರ್ಸ್‌ನಲ್ಲಿ ದೇವರ ಚಿತ್ರ ಮತ್ತು ಧಾರ್ಮಿಕ ವಸ್ತುಗಳನ್ನು ಇಡಬೇಡಿ. ಮುಖ್ಯವಾಗಿ ಪರ್ಸ್‌ನಲ್ಲಿ ನೋಟುಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಇಡುವುದು ಮಂಗಳಕರವಾಗಿದೆ. ಈ ಮೇಲಿನಂತೆ ವಾಸ್ತು ಪ್ರಕಾರ ನಿಮ್ಮ ಪರ್ಸ್ ಯಾವಾಗಲೂ ಹಣದಿಂದ ತುಂಬಿರಲು ದಾರಿಯಾಗಲಿದೆ.

Leave A Reply

Your email address will not be published.