ಹಳೆಯ ಕಾರೇನಾದರೂ ನೀವು ಮಾರಾಟ ಮಾಡುವ ಆಲೋಚನೆಯಲ್ಲಿದ್ದೀರಾ ? ಹಾಗಾದರೆ ಟಟಾ ಕಂಪನಿ ನಿಮಗಾಗಿ ನೀಡಿದೆ ದೊಡ್ಡ ಘೋಷಣೆ!
ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಭಾರತದ ಅತ್ಯಂತ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡ ಹೊಸ ಹೊಸ ಮಾದರಿ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಇದೀಗ ಕಾರು ಖರೀದಿದಾರರ ದೃಷ್ಟಿಯಿಂದ ನೋಡುವುದಾದರೆ ಟಾಟಾದ ಕಡೆಯಿಂದ ಉತ್ತಮ ಕೊಡುಗೆ ಎಂದು ಹೇಳಬಹುದು. ಹೌದು ಇದರ ಜೊತೆಗೆ ಹಳೆಯ ಕಾರುಗಳನ್ನು ಮಾರಾಟ ಮಾಡುವವರೂ ಹಾಗೂ ತಮ್ಮ ಕಾರುಗಳನ್ನು ನವೀಕರಿಸಬೇಕೆಂದು ಯೋಜನೆ ಮಾಡಿದವರಿಗೆ ಮಹತ್ವದ ಮಾಹಿತಿ ಒಂದನ್ನು ನೀಡಿದೆ.
ಹೌದು ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಮೇಳವನ್ನು (National Exchange Carnival) ದೇಶಾದ್ಯಂತ ತನ್ನ ಗ್ರಾಹಕರಿಗಾಗಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಟಾಟಾ ಮೋಟಾರ್ಸ್ ಆಯೋಜಿಸಿರುವ ಈ ರಾಷ್ಟ್ರೀಯ ವಿನಿಮಯ ಮೇಳ ಫೆಬ್ರವರಿ 4 ರಿಂದ ಆರಂಭವಾಗಿದ್ದು, ಫೆಬ್ರವರಿ 15 ರವರೆಗೆ ನಡೆಯಲಿದೆ.
ಸದ್ಯ ದೇಶಾದ್ಯಂತ 250 ನಗರಗಳ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 12 ದಿನಗಳ ಕಾಲ ಟಾಟಾ ಕಂಪನಿ ಏರ್ಪಡಿಸಿರುವ ಮೇಳಕ್ಕೆ ನೀವು ಕೂಡ ಭೇಟಿ ನೀಡುವ ಮೂಲಕ ಆಯ್ದ ಟಾಟಾ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ ರೂ.60,000 ದವರೆಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಮೆಗಾ ಮೇಳ ನಡೆಯುವ ಸಂದರ್ಭದಲ್ಲಿ ಆಸಕ್ತರು, ಯಾವುದೇ ಟಾಟಾ ಮೋಟಾರ್ಸ್ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ ಆಕರ್ಷಕ ಪ್ರಯೋಜನ ಪಡೆಯಬಹುದು.
ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಮೆಗಾ ಮೇಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಸೇಲ್ಸ್, ಮಾರ್ಕೆಟಿಂಗ್ ಹಾಗೂ ಕಸ್ಟಮರ್ ಕೇರ್ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬಾ ಪ್ರಕಾರ ‘ಟಾಟಾ ಮೋಟಾರ್ಸ್ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಅತ್ಯುತ್ತಮ ಅನುಭವ ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ನಮ್ಮ ಗ್ರಾಹಕರಿಗಾಗಿ 12- ದಿನಗಳ ರಾಷ್ಟ್ರೀಯ ವಿನಿಮಯ ಮೇಳವನ್ನು ಆಯೋಜಿಸುತ್ತಿದ್ದೇವೆ’. ಸದ್ಯ ಆಸಕ್ತ ಗ್ರಾಹಕರು, ಈ ಮೇಳದಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ .
ಅದಲ್ಲದೆ ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಟಿಯಾಗೊ ಇವಿಯ ವಿತರಣೆಯನ್ನು ಈಗಾಗಲೇ ಆರಂಭಿಸಿದ್ದು, ಮೊದಲ ಬ್ಯಾಚ್ ನ 2,000 ಯುನಿಟ್ ಕಾರುಗಳನ್ನು ಭಾರತದ 133 ನಗರಗಳ ಗ್ರಾಹಕರಿಗೆ ನೀಡುವುದನ್ನು ಶುರು ಮಾಡಿದೆ. ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿಗಾಗಿ ಬರೋಬ್ಬರಿ 20,000 ಗ್ರಾಹಕರು ಬುಕಿಂಗ್ ಮಾಡಿದ್ದರು. ಅದರಲ್ಲಿ ಬುಕಿಂಗ್ ಆರಂಭವಾದ ಮೊದಲ ದಿನವೇ 10,000 ಮಂದಿ ನೋಂದಣಿ ಮಾಡಿದ್ದರು ಎಂದು ಹೆಮ್ಮೆಯಿಂದ ಕಂಪನಿ ಹೇಳಿಕೊಂಡಿದೆ.
ಇನ್ನು ಭಾರತದ ಮಾರುಕಟ್ಟೆಯಲ್ಲಿ ಟಿಯಾಗೊ ಇವಿ ಅತ್ಯಂತ ಕೈಗೆಟುಕುವ ಬೆಲೆಯ ಕಾರಾಗಿದೆ ಎಂದು ಹೇಳಬಹುದು. ಇದು ರೂ.8.49 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷ ಇದೆ. ಟಿಯಾಗೊ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಅವುಗಳೆಂದರೆ, 19.2kWh 24kWh ಬ್ಯಾಟರಿ ಪ್ಯಾಕ್. ಕ್ರಮವಾಗಿ 250 km, 315 km ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದಿವೆ ಎಂದು ಮಾಹಿತಿ ನೀಡಲಾಗಿದೆ.
ರಾಷ್ಟ್ರೀಯ ವಿನಿಮಯ ಮೇಳದೊಂದಿಗೆ ಟಾಟಾ ಮೋಟಾರ್ಸ್ ತನ್ನ ಆಯ್ದ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದು ಈ ಫೆಬ್ರವರಿ ತಿಂಗಳಿಗೆ ಅನ್ವಯವಾಗಲಿದ್ದು, ರೂ.35,000 ರೂಪಾಯಿಗಳವರೆಗೆ ಡಿಸ್ಕೌಂಟ್ ದೊರೆಯುತ್ತಿದೆ. ಟಿಯಾಗೊ, ಟಿಗೂರ್, ಆಲ್ಟ್ರೋಜ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳಿಗೆ ಈ ಆಫರ್ ಒಳಗೊಂಡಿರುತ್ತದೆ. ಇಷ್ಟೇಅಲ್ಲದೆ, ಟಾಟಾ ಆಲ್ಟ್ರೋಜ್ ಮತ್ತು ಪಂಚ್ ಸಿಎನ್‌ಜಿ ಆವೃತ್ತಿಯನ್ನು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಹೆಚ್ಚಿನ ಇಂಧನ ದಕ್ಷತೆಯನ್ನು ಒಳಗೊಂಡಿರುವುದರಿಂದ ಬೆಲೆ ಕೊಂಚ ಹೆಚ್ಚಿರಲಿದೆ ಎನ್ನಲಾಗಿದೆ.
ಸದ್ಯ ಟಾಟಾ ಟಿಯಾಗೊ, ಟಿಗೂರ್, ಹ್ಯಾರಿಯರ್ ಹಾಗೂ ಪಂಚ್ ಸೇರಿದಂತೆ ಹತ್ತು ಹಲವು ಕಾರುಗಳನ್ನು ಮಾರಾಟ ಮಾಡುತ್ತಿದ್ದು ಸದ್ಯ ಆಟೋಮೊಬೈಲ್ ಇತಿಹಾಸದಲ್ಲಿ ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಮೆಗಾ ಮೇಳದಲ್ಲಿನ ಮಾರಾಟವು ದೊಡ್ಡ ಮಟ್ಟದ ದಾಖಲೆಯಾಗಲಿದೆ ಎಂಬ ಭರವಸೆಯನ್ನು ಕಂಪನಿ ವ್ಯಕ್ತ ಪಡಿಸಿದೆ.