Pervez Musharraf Death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇನ್ನಿಲ್ಲ
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ದುಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ, ಮಾಜಿ ಅಧ್ಯಕ್ಷರು ದೀರ್ಘಕಾಲದ ಅನಾರೋಗ್ಯದ ತೊಂದರೆಯಿಂದಾಗಿ ಒಂದೆರಡು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇವರು ಅಮಿಲೋಯ್ಡೋಸಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷರಾದ ಪರ್ವೇಜ್ ಮುಷರಫ್ ಅವರು 1998 ರಲ್ಲಿ ಜನರಲ್ ಹುದ್ದೆಗೆ ಬಡ್ತಿ ಪಡೆದಿದ್ದು ನಂತರ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು 1999 ರಲ್ಲಿ ಯಶಸ್ವಿ ಮಿಲಿಟರಿ ದಂಗೆಯ ನಂತರ ದಕ್ಷಿಣ ಏಷ್ಯಾದ ರಾಷ್ಟ್ರದ ಹತ್ತನೇ ಅಧ್ಯಕ್ಷರಾಗಿದ್ದರು. ಅವರು 1998 ರಿಂದ 2001 ರವರೆಗೆ ಪಾಕಿಸ್ತಾನದ 10 ನೇ ಅಧ್ಯಕ್ಷ ಜಂಟಿ ಮುಖ್ಯಸ್ಥರಾಗಿ (CJCSC) ಮತ್ತು 1998 ರಿಂದ 2007 ರವರೆಗೆ 7 ನೇ ಉನ್ನತ ಜನರಲ್ ಆಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.
ಮುಷರಫ್ 2016 ರಿಂದ ದುಬೈನಲ್ಲಿ ವಾಸಿಸುತ್ತಿದ್ದರು. ಮುಷರಫ್ ಅವರು ಕಳೆದ ಎಂಟು ವರ್ಷಗಳಿಂದ ಯುಎಇಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಮುಷರಫ್ ಅವರು “ತಮ್ಮ ಉಳಿದ ಜೀವನವನ್ನು” ತಮ್ಮ ತಾಯ್ನಾಡಿನಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜನರಲ್ ಪರ್ವೇಜ್ ಮುಷರಫ್ ಅವರು 1999 ರಲ್ಲಿ ಯಶಸ್ವಿ ಮಿಲಿಟರಿ ದಂಗೆಯ ನಂತರ ಪಾಕಿಸ್ತಾನದ ಹತ್ತನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರು 1998 ರಿಂದ 2001 ರವರೆಗೆ ಪಾಕಿಸ್ತಾನದ 10 ನೇ ಅಧ್ಯಕ್ಷರ ಜಂಟಿ ಮುಖ್ಯಸ್ಥರಾಗಿ ಮತ್ತು 1998 ರಿಂದ 2007 ರವರೆಗೆ 7 ನೇ ಉನ್ನತ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.