Noise Buds: ನೀವು ಮ್ಯೂಸಿಕ್ ಪ್ರಿಯರೇ ? ಹಾಗಾದರೆ ಬಂದಿದೆ ನೋಡಿ, ನಾಯ್ಸ್ ಕಂಪೆನಿಯ ಹೊಸ ಇಯರ್‌ಬಡ್ಸ್! ಕೇಳಿ, ಆನಂದಿಸಿ!!!
ಮಾರುಕಟ್ಟೆಗೆ ಹೊಚ್ಚ ಹೊಸ ಇಯರ್ ಬಡ್ಸ್ ಗಳು ಬಿಡುಗಡೆ ಆಗುತ್ತಲೇ ಇವೆ. ಸದ್ಯ ನಾಯ್ಸ್ ಕಂಪೆನಿಯು (Noise Company) ಹೊಸ ಉತ್ತಮ ಫೀಚರ್ಸ್ ಹೊಂದಿರುವ ನಾಯ್ಸ್ ಬಡ್ಸ್ ಕನೆಕ್ಟ್ (Noise Buds Connect) ಎಂಬ ಹೆಸರಿನ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡುತ್ತಿದ್ದು, ಶೀಘ್ರದಲ್ಲೇ ನಾಯ್ಸ್ ಬಡ್ಸ್ ಕನೆಕ್ಟ್ ಇಯರ್ ಬಡ್ಸ್ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದರ ಫಿಚರ್ಸ್ ? ಬೆಲೆ ಎಷ್ಟು ? ಎಂಬಿತ್ಯಾದಿ ಮಾಹಿತಿ ತಿಳಿಯೋಣ.
ಫೀಚರ್ಸ್ :
ಈ ಇಯರ್‌ಬಡ್ಸ್ 13mm ಡ್ರೈವರ್ ಘಟಕವನ್ನು ಹೊಂದಿದ್ದು, ಇದರಿಂದ ಬಳಕೆದಾರರು ಸ್ಪಷ್ಟವಾದ ಶಬ್ದ ಹಾಗೂ ಡೀಪ್ ಬೇಸ್ ಅನ್ನು ಪಡೆಯಬಹುದು. ಜೊತೆಗೆ ಬ್ಲೂಟೂತ್ ಆವೃತ್ತಿ 5.2 ಅನ್ನು ಸಪೋರ್ಟ್ ಮಾಡುತ್ತದೆ. ENC ಸಪೋರ್ಟ್ ನಿಂದ ಈ ಇಯರ್ ಬಡ್ಸ್ ಕ್ವಾಡ್ ಮೈಕ್ ಆಯ್ಕೆ ಪಡೆದುಕೊಂಡಿದ್ದು, ಕಾಲ್ ನಲ್ಲಿರುವಾಗ ಅನಗತ್ಯ ಶಬ್ದವನ್ನು ತೆಗೆದುಹಾಕುತ್ತದೆ. ಅಲ್ಲದೆ, ನಾಯ್ಸ್ ಬಡ್ಸ್ ಕನೆಕ್ಟ್ IPX5 ರೇಟಿಂಗ್ ಹೊಂದಿದ್ದು, ಬೆವರು ಮತ್ತು ನೀರು ನಿರೋಧಕವಾಗಿವೆ.
ಎಲ್ಲಾ ಡಿವೈಸ್ಗಳಿಗೂ ಬಳಸಬಹುದಾದ ಇಯರ್ ಬಡ್ಸ್ ಆಗಿದೆ. ಮ್ಯೂಸಿಕ್ ಆಲಿಸಲು, ಚಲನಚಿತ್ರ ವೀಕ್ಷಣೆ ಹೀಗೇ ಹಲವು ಡಿವೈಸ್ ಗಳಿಗೆ ಇದನ್ನು ಬಳಸಬಹುದು. ನಾಯ್ಸ್ ಬಡ್ಸ್ ಕನೆಕ್ಟ್ ಇಯರ್ ಬಡ್ಸ್ ಹೈಪರ್‌ಸಿಂಕ್ ತಂತ್ರಜ್ಞಾನವನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್‌ನಿಂದ ಹೊರತೆಗೆದ ಕೂಡಲೆ ಸ್ಮಾರ್ಟ್‌ಫೋನ್‌ಗೆ ಬೇಗನೆ ಕನೆಕ್ಟ್ ಆಗುತ್ತದೆ. ಈ ಬಡ್‌ಗಳು ಪವರ್-ಸೇವಿಂಗ್ ಫೀಚರ್ಸ್ ಅನ್ನು ಹೊಂದಿದೆ. ಹಾಗಾಗಿ ಬಳಕೆದಾರರು ಇದನ್ನು ಹೆಚ್ಚು ಸಮಯಗಳ ಕಾಲ ಬಳಸಬಹುದು.
ಬ್ಯಾಟರಿ ಸಾಮರ್ಥ್ಯ :
ಇಯರ್ ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸಾಕು 10 ಗಂಟೆಗಳ ಕಾಲ ನಿರಂತರವಾಗಿ ಯಾವುದೇ ತೊಂದರೆ ಇಲ್ಲದೆ ಬಳಸಬಹುದು. ಈ ಇಯರ್‌ಬಡ್ಸ್‌ನಲ್ಲಿ ಇನ್‌ಸ್ಟಾಚಾರ್ಜ್ ಫೀಚರ್ಸ್ ಇರುವುದರಿಂದ 10 ನಿಮಿಷಗಳ ಚಾರ್ಜ್‌ನೊಂದಿಗೆ 120 ನಿಮಿಷಗಳ ಪ್ಲೇಬ್ಯಾಕ್ ಅನ್ನು ಬಳಕೆದಾರರು ಆನಂದಿಸಬಹುದು ಎಂದು ಕಂಪೆನಿ ತಿಳಿಸಿದೆ.
ಬೆಲೆ ಮತ್ತು ಲಭ್ಯತೆ :
ನಾಯ್ಸ್ ಬಡ್ಸ್ ಕನೆಕ್ಟ್ ಇಯರ್ ಬಡ್ಸ್ ಬೆಲೆ 1,299 ರೂ. ಆಗಿದ್ದು, ಈ ಇಯರ್‌ಬಡ್ಸ್ ಕಾರ್ಬನ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಐವರಿ ವೈಟ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಈ ಇಯರ್‌ಬಡ್ಸ್ ಅನ್ನು ಕಂಪೆನಿಯ ಅಧಿಕೃತ ವೆಬ್ಸೈಟ್ ಹಾಗೂ ಜನಪ್ರಿಯ ಇಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಉತ್ತಮ ಫೀಚರ್ಸ್ ಹೊಂದಿರುವ ಅತ್ಯುತ್ತಮವಾದ ಈ ಇಯರ್ ಬಡ್ಸ್ ಅದ್ಭುತ ಅನುಭವ ನೀಡಲಿದೆ. ಸಂಗೀತ ಪ್ರಿಯರಿಗೆ ಉತ್ತಮ ಇಯರ್ ಬಡ್ ಆಗಿದೆ.