ITBP Constable Notification 2023 : ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕ | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆದ್ಯತೆ, ಮಾಸಿಕ ವೇತನ ರೂ.69,100

ITBP Constable Notification 2023: ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ಅಗತ್ಯ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಲಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ಮೇಲಿನ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ನೇಮಕ ಮಾಡಲಿದೆ. ವಾಲಿಬಾಲ್, ಫುಟ್‌ಬಾಲ್, ಕಬ್ಬಡಿ, ಹಾಕಿ, ಅಥ್ಲೆಟಿಕ್ ವಿಭಾಗಗಳಲ್ಲಿ ಸಾಧನೆ ಮಾಡಿದವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-02-2023
ಅರ್ಜಿ ಸಲ್ಲಿಸಲು, ಶುಲ್ಕ ಪಾವತಿಸಲು ಕೊನೆ ದಿನಾಂಕ: 21-03-2023 ರ ರಾತ್ರಿ 11-59 ಗಂಟೆವರೆಗೆ.

ಉದ್ಯೋಗ ಸಂಸ್ಥೆ : ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್
ಹುದ್ದೆಗಳ ವಿವರ: ಕಾನ್ಸ್‌ಟೇಬಲ್ (ಜೆನೆರಲ್ ಡ್ಯೂಟಿ)
ಹುದ್ದೆಗಳ ಸಂಖ್ಯೆ : 71
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್‌ ಪಾಸ್
ವೇತನ ಶ್ರೇಣಿ: ರೂ.21,700-69100 (7ನೇ ವೇತನ ಆಯೋಗದ ಪ್ರಕಾರ ಲೆವೆಲ್‌ 3 ಪೇ ಮೆಟ್ರಿಕ್ಸ್‌ ಸಂಭಾವನೆ)
ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ : ರೂ.100.

ಅರ್ಜಿ ಸಲ್ಲಿಸಲು ವೆಬ್‌ ವಿಳಾಸ : https://recruitment.itbpolice.nic.in/

Leave A Reply

Your email address will not be published.