Shark : ನದಿಯಲ್ಲಿ ಡಾಲ್ಫಿನ್‌ನೊಂದಿಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆರಗಿದ ಶಾರ್ಕ್‌ ಮೀನು! ಬಾಲಕಿ ದಾರುಣ ಸಾವು

ಶಾರ್ಕ್ ಎಂದಾಗಲೇ ಅದರ ಮೊನಚಾದ ಹಲ್ಲುಗಳು ನೆನಪಾಗುತ್ತದೆ. ಯಾಕೆಂದರೆ ಶಾರ್ಕ್ ಬಾಯಿಗೆ ಸಿಕ್ಕರೆ ನಮ್ಮ ಕಥೆ ಮುಗಿಯಿತು ಅಂದುಕೊಳ್ಳಬೇಕು. ಸದ್ಯ ಎಷ್ಟೇ ದೈತ್ಯ ಜೀವಿಗಳನ್ನು ಸಹ ನುಂಗಿ ಹಾಕುವ ಸಾಮರ್ಥ್ಯ ವನ್ನು ಶಾರ್ಕ್ ಹೊಂದಿದೆ. ಹಾಗೆಯೇ ನದಿಯಲ್ಲಿ ಈಜುತ್ತಿದ್ದ ಬಾಲಕಿ ಮೇಲೆ ಶಾರ್ಕ್​ ಮೀನು ದಾಳಿ ನಡೆಸಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಹೌದು ಉತ್ತರ ಫ್ರೀಮೆಂಟಲ್​ನ ಪರ್ತ್​ ಉಪನಗರದಲ್ಲಿರುವ ಸ್ವಾನ್ ನದಿಯಲ್ಲಿ 16 ವರ್ಷ ಬಾಲಕಿ ಈಜಲು ಹೋಗಿದ್ದ ಸಂದರ್ಭದಲ್ಲಿ ಶಾರ್ಕ್​ ಆಕೆಯನ್ನು ಕಚ್ಚಿ ಘಾಸಿಗೊಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರತೆಗೆಯಲಾಗಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಬಾಲಕಿ ನದಿಯಲ್ಲಿ ಜೆಟ್​ ಸ್ಕೀ ಮಾಡುತ್ತಿದ್ದು , ಜೆಟ್​ ಸ್ಕೀ ಸಮೀಪವೇ ಸಾಗುತ್ತಿದ್ದ ಡಾಲ್ಫಿನ್​ ಜತೆ ಈಜಲು ತೆರಳಿದ್ದಳು. ಆ ಸಮಯದಲ್ಲಿ ಶಾರ್ಕ್ ಮೀನು ದಾಳಿ ನಡೆಸಿದೆ.

ಆದರೆ ಶಾರ್ಕ್ ಯಾವ ರೀತಿ ದಾಳಿ ಮಾಡಿದೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು ಪಶ್ಚಿಮ ಆಸ್ಟ್ರೇಲಿಯಾದ ನದಿಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಯ ಶಾರ್ಕ್ ಗಳಿವೆ. ಅನೇಕ ಕಿಲೋಮೀಟರ್‌ಗಳ ಆಳದಲ್ಲಿ ಬುಲ್ ಶಾರ್ಕ್ ಕಂಡುಬರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮುಖ್ಯವಾಗಿ ಈ ಘಟನೆ ಕುರಿತಂತೆ ಸ್ವಾನ್ ನದಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಯಾವುದೇ ಬೀಚ್‌ಗಳ ಬಳಿ ಹೋಗದಂತೆ ರಾಜ್ಯ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ.

Leave A Reply

Your email address will not be published.