Diamond : ವಜ್ರ ತಿಂದರೆ ಏನಾಗುತ್ತೆ ? ಕುತೂಹಲಕರ ಸಂಗತಿ ಇಲ್ಲಿದೆ

ನಾರಿಯರ ನೆಚ್ಚಿನ ಅಭರಣಗಳಲ್ಲಿ ಬಂಗಾರ ಮೊದಲ ಸ್ಥಾನದಲ್ಲಿದೆ. ಚಿನ್ನ, ಬೆಳ್ಳಿಗೆ ಹೋಲಿಸಿದರೆ ವಜ್ರದ ಮೌಲ್ಯ ತುಸು ಹೆಚ್ಚೆಂದರೆ ತಪ್ಪಾಗದು. ವಜ್ರ’ ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಕಠಿಣವಾದ, ಹೊಳೆಯುವ ವಜ್ರವನ್ನು ಆಭರಣಗಳಲ್ಲಿ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಬೆಲೆ ಬಾಳುವ ಹರಳಿನ ಕುತೂಹಲಕಾರಿ ವಿಚಾರಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ವಜ್ರ, ಇಂಗಾಲದ ಒಂದು ಬಹುರೂಪಿಯಾಗಿದ್ದು, ವಜ್ರ ಅತ್ಯಂತ ಕಠಿಣ ವಸ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದರ ಕರಗುವ ಬಿಂದು 3820 ಕೆಲ್ವಿನ್‌ಗಳಾಗಿದ್ದು, ಅತ್ಯಂತ ದುಬಾರಿ ಆಭರಣಗಳಲ್ಲಿ ‘ವಜ್ರದ ಆಭರಣಗಳೆ ಅಗ್ರ ಸ್ಥಾನವನ್ನು ಬಾಚಿಕೊಂಡಿವೆ.

ಅತ್ಯಂತ ಕಠಿಣವಾದ ವಜ್ರಗಳು ಆಸ್ಟ್ರೇಲಿಯಾದ ಗಣಿಗಳಲ್ಲಿ ಕಂಡುಬರುತ್ತವೆ. 2009ರಲ್ಲಿ 7.03 ಕ್ಯಾರೆಟ್ ತೂಕದ ವಜ್ರವೊಂದು 94,90,000 ಡಾಲರ್‌ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಒಂದು ವಜ್ರದಿಂದ ಮಾತ್ರವೇ ಇನ್ನೊಂದು ವಜ್ರವನ್ನು ಗೀಚಲು(ಕತ್ತರಿಸಲು) ಸಾಧ್ಯ. ವಜ್ರಗಳಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಜನರಿಗೆ ಗೊಂದಲ ಇರುವುದು ಸಹಜ. ಒಬ್ಬ ವ್ಯಕ್ತಿ ವಜ್ರವನ್ನು ನೆಕ್ಕಿದರೆ ಅವನು ಸಾಯುತ್ತಾನೆ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ನಿಮಗೆ ತಿಳಿದಿದೆಯೇ??

ವಜ್ರವು ತುಂಬಾ ಗಟ್ಟಿಯಾಗಿರುತ್ತದೆ. ಆದರೆ ಇದಕ್ಕೆ ಕಾರಣ ಏನಪ್ಪಾ ಅಂದರೆ, ಇಂಗಾಲದಿಂದ ಮಾಡಿದ ವಜ್ರದ ಗಡಸುತನದ ರಾಸಾಯನಿಕ ರಚನೆಯಾಗಿದ್ದು, ಇದರಲ್ಲಿ ಇಂಗಾಲದ ಪರಮಾಣುಗಳು ಬಹಳ ಬಿಗಿಯಾಗಿ ಬಂಧಿಸಲ್ಪಟ್ಟಿರುತ್ತದೆ. ಇದರಲ್ಲಿ, ಒಂದು ಕಾರ್ಬನ್ ಪರಮಾಣು ನಾಲ್ಕು ಇತರ ಕಾರ್ಬನ್ ಪರಮಾಣುಗಳಿಗೆ ಬಂಧಿತವಾಗಿದ್ದು ಚತುರ್ಭುಜ ರೇಖಾಗಣಿತ ರಚನೆಯನ್ನು ಸೂಚಿಸುತ್ತದೆ. ವಜ್ರವನ್ನು ನೆಕ್ಕುವುದರಿಂದ ಜನರು ಸಾವನ್ನಪ್ಪುತ್ತಾರೆ ಎಂಬುದು ಹೆಚ್ಚಿನವರ ನಂಬಿಕೆಯಾಗಿದೆ. ಆದರೆ, ವಜ್ರವು ವಿಷಕಾರಿ ವಸ್ತುವಾಗಿರದೆ ಇರುವ ಹಿನ್ನೆಲೆ ವಜ್ರವನ್ನು ನುಂಗಿದಾಗ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ವಜ್ರದ ತೂಕದ ಬಗ್ಗೆ ಗಮನ ಹರಿಸಿದರೆ, 1 ಕ್ಯಾರೆಟ್ ಸುಮಾರು 200 ಮಿಗ್ರಾಂ ಆಗಿದ್ದು, ನಿಮ್ಮ ಹಲ್ಲುಗಳಿಂದ ವಜ್ರವನ್ನು ಒಡೆಯಲು ಪ್ರಯತ್ನಿಸಿದರೆ ಅದು ಅಸಾಧ್ಯವಾದ ಮಾತು. ಇದಕ್ಕೆ ಕಾರಣ, ಅದರಲ್ಲಿರುವ ಇಂಗಾಲದ ಕಣಗಳು ಎಷ್ಟು ಬಿಗಿಯಾಗಿ ಹಿಡಿದಿರುವುದರಿಂದ ವಜ್ರದ ಹರಳು ಹಲ್ಲುಗಳಿಂದ ಒಡೆಯುವುದು ಅಸಾಧ್ಯ. ಅದೇ ರೀತಿ, ವಜ್ರವನ್ನು ಕುಟ್ಟಿ ಪುಡಿಮಾಡಿ ಕುಡಿದು ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಕೂಡ ಇದೆ ಎನ್ನಲಾಗಿದೆ. ಮಿನುಗು ತಾರೆ ಕಲ್ಪನ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲರೂ ಈ ವಜ್ರವನ್ನು ಕುಟ್ಟಿ ಪುಡಿ ಮಾಡಿ ನೀರಿಗೆ ಹಾಕಿ ಕುಡಿಯುವ ಪ್ರಯತ್ನ ಮಾಡಿದ್ದರಂತೆ. ಅತ್ಯಂತ ಶುದ್ಧ ವಜ್ರಗಳು ಅತ್ಯಂತ ಕಠಿಣವಾಗಿರುತ್ತವೆ ಅಷ್ಟೆ ಅಲ್ಲದೇ, ಅತ್ಯಂತ ಹೆಚ್ಚು ಜನಪ್ರಿಯ ವಜ್ರವೆಂದರೆ ‘ನೀಲಿ ವಜ್ರ’ ಎಂದು ಪರಿಗಣಿಸಲಾಗುತ್ತದೆ. ಆಸ್ಟ್ರೇಲಿಯಾದ ವಜ್ರದ ಗಣಿ ಅತ್ಯಂತ ಹೆಚ್ಚು ಗುಲಾಬಿ ಹಾಗೂ ಕೆಂಪು ಬಣ್ಣದ ವಜ್ರಗಳನ್ನು ಉತ್ಪಾದಿಸಲಾಗಿದೆ.

Leave A Reply

Your email address will not be published.