Bitter gourd Side Effects : ಹಾಗಲಕಾಯಿ ಈ ಸಮಸ್ಯೆ ಇರುವವರು ತಿನ್ನುವುದೇ ಬೇಡ!
ಯಪ್ಪಾ… ಹಾಗಲಕಾಯಿಯಾ!! ಕಹಿ ಅಂತ ಮುಖ ತಿರುಗಿಸುವವರೆ ಹೆಚ್ಚು. ಹಾಗಂತ ಹಾಗಲಕಾಯಿಯನ್ನು ಹೀಯಾಳಿಸುವುದನ್ನು ನಿಲ್ಲಿಸಿ, ಇದರ ಆರೋಗ್ಯ ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರಾ. ಹಾಗಲಕಾಯಿ ರುಚಿಯಲ್ಲಿ ಕಹಿಯಾದರು ಆರೋಗ್ಯಕ್ಕೆ ಸಿಹಿ ಎಂದೇ ಹೇಳಬಹುದು. ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಹಾಗಲಕಾಯಿ ವಿಶೇಷವಾಗಿ ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಹೃದಯದ ಆರೋಗ್ಯಕ್ಕೆ ಉತ್ತಮ. ಆದರೆ ನಿಮಗಿದು ತಿಳಿದಿದೆಯ? ಆರೋಗ್ಯ ಗಣಿಯಾಗಿರುವ ಹಾಗಲಕಾಯಿಯನ್ನು ಈ ಕಾಯಿಲೆಯಿರುವವರು ಸೇವಿಸಲೇ ಬಾರದಂತೆ!! ಹಾಗಾದ್ರೆ, ಯಾರೆಲ್ಲಾ ಹಾಗಲಕಾಯಿಯ ಸೇವನೆ ಮಾಡಬಾರದು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್.
ಪ್ರತಿದಿನ ಹಾಗಲಕಾಯಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಲಕಾಯಿಯನ್ನು ತಿನ್ನುವ ವಿಷಯಕ್ಕೆ ಬಂದರೆ, ಕೆಲವು ಸಮಸ್ಯೆಗಳಿರುವ ಕೆಲವರು ಬಹಳ ಎಚ್ಚರದಿಂದ ಇರಬೇಕು.
ಗರ್ಭಿಣಿಯರು : ಅತಿಯಾದ ಹಾಗಲಕಾಯಿಯನ್ನು ಸೇವಿಸುವುದರಿಂದ ಋತುಚಕ್ರವನ್ನು ಹೆಚ್ಚಿಸಬಹುದು.ಹಾಗಾಗಿ ಗರ್ಭಾವಸ್ಥೆಯಲ್ಲಿ ಹಾಗಲಕಾಯಿಯ ಅತಿಯಾದ ಸೇವನೆಯು ಗರ್ಭಪಾತಕ್ಕೆ ಕಾರಣವಾಗಬಹುದು, ಆದ್ದರಿಂದ ಗರ್ಭಿಣಿಯರು ಹಾಗಲಕಾಯಿಯ ಸೇವನೆಯನ್ನು ತಪ್ಪಿಸಬೇಕು. ಅಲ್ಲದೆ, ಹಾಗಲಕಾಯಿಯ ರಸವು ಗರ್ಭಿಣಿಯರಲ್ಲಿ ಹೊಟ್ಟೆನೋವು, ವಾಂತಿ ಮತ್ತು ಸೆಳೆತವನ್ನುಂಟು ಮಾಡುತ್ತದೆ.
ಹೈಪೊಗ್ಲಿಸಿಮಿಯಾ:- ಹಾಗಲಕಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಲೋ ಬ್ಲಡ್ ಶುಗರ್ ಸಮಸ್ಯೆ ಇರುವವರು ಹಾಗಲಕಾಯಿ ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಯಕೃತ್ತಿನ ಹಾನಿ : ಡಯಾಬಿಟೀಸ್ ರೋಗಿಗಳು ಹಾಗಲಕಾಯಿಯ ರಸವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಮಧುಮೇಹವನ್ನೇನೋ ನಿಯಂತ್ರಿಸಬಹುದು, ಆದರೆ ಇದು ಯಕೃತ್ತಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ಯಕೃತ್ತನ್ನು ಘಾಸಿಗೊಳಿಸಬಹುದು. ಆದ್ದರಿಂದ, ನೀವು ಪ್ರತಿದಿನ ಹಾಗಲಕಾಯಿ ತಿನ್ನುವುದನ್ನು ಈಗಲೇ ನಿಲ್ಲಿಸಿ. ಅಲ್ಲದೆ, ಮುಖ್ಯವಾಗಿ ನಿಮಗೆ ಯಾವುದೇ ಲಿವರ್ ಸಂಬಂಧಿತ ಸಮಸ್ಯೆಗಳು ಇದ್ದರೆ, ನೀವು ಹಾಗಲಕಾಯಿಯನ್ನು ಸೇವಿಸಲೇ ಬಾರದು.