Breaking News | ಉಚಿತ ಸೀರೆ ಮತ್ತು ವೇಷ್ಟಿ ಪಡೆಯಲು ಟೋಕನ್ ಸಂಗ್ರಹದ ವೇಳೆ ಹರಿದು ಬಂದ ಜನಸಾಗರ – ಕಾಲ್ತುಳಿತ, ನಾಲ್ವರು ಮಹಿಳೆಯರ ಸಾವು !
ಉಚಿತ ಸೀರೆ ಮತ್ತು ಧೋತಿ ಪಡೆಯಲು ಟೋಕನ್ ಪಡೆದುಕೊಳ್ಳುವ ಸಂದರ್ಭ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ಎಲ್ಲರೂ ಮಹಿಳೆಯರೇ.
ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ಶನಿವಾರ ಈ ಅವಘಡ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬರುತ್ತಿದೆ. ಉಚಿತ ಸೀರೆ ಮತ್ತು ಧೋತಿ ಪಡೆಯಲು ಜನಸಾಗರ ಹರಿದು ಬಂದಿತ್ತು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಉಚಿತ ಸೀರೆ ಮತ್ತು ವೇಷ್ಟಿ ಧೋತಿಗಳನ್ನು ಸಂಗ್ರಹಿಸುವ ಸಲುವಾಗಿ ಟೋಕನ್ ಪಡೆಯಲು ಜನರು ಜಮಾಯಿಸಿದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ತೈಪುಸಮಿನ್ ತಿರುಪ್ಪತ್ತೂರಿನ ವಾಣಿಯಂಬಾಡಿಯ ಹಬ್ಬದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಈ ವಸ್ತ್ರಗಳನ್ನು ವಿತರಿಸುತ್ತಿದ್ದರು ಎಂದು ತಿರುಪತ್ತೂರ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಮೃತ ಮಹಿಳೆಯರ ಕುಟುಂಬಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.