ಯಾರಾಗಲಿದ್ದಾರೆ ಭಾರತದ ಭವಿಷ್ಯದ ಪ್ರಧಾನಿ! ಮೋದಿಯ ಆ ಉತ್ತರಾಧಿಕಾರಿ ಬಗ್ಗೆ ಯೋಗಿ ಆದಿತ್ಯನಾಥ್ ಬಿಚ್ಚಿಟ್ಟ ರೋಚಕ ವಿಚಾರವೇನು ಗೊತ್ತಾ?
ಭಾರತೀಯರ ಮನಸ್ಸಿನಲ್ಲಿ ಸದ್ಯ ಸಾಮಾನ್ಯವಾಗಿ ಕಾಡುವ ಹಾಗೂ ಕುತೂಹಲವಾಗಿಯೇ ಉಳಿದಿರುವ ಪ್ರಶ್ನೆಯೆಂದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು, ಅವರ ನಂತರ ಈ ಮಹಾನ್ ದೇಶವನ್ನು ಯಾರು ಮುನ್ನಡಿಸುತ್ತಾರೆ ಎಂಬದು. ಯಾಕೆಂದರೆ ನರೇಂದ್ರ ಮೋದಿ ಅವರ ಪ್ರಧಾನಮಂತ್ರಿ ಹುದ್ದೆಯ 2ನೇ ಅವಧಿಯೂ ಪೂರ್ಣಗೊಳ್ಳುತ್ತಿದ್ದು, 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಇದರ ಬೆನ್ನಲ್ಲೇ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಹಾಗಾದ್ರೆ ಯಾರು ಆ ಭವಿಷ್ಯದ ಪ್ರಧಾನಿ ಗೊತ್ತಾ?
ಭಾರತವನ್ನು ವಿಶ್ವಗುರುವಾಗಲು ಶ್ರಮಿಸುತ್ತಿರುವವರು ಪ್ರಧಾನಿ ಮೋದಿಯವರು. ಈಗಾಗಲೇ ಪ್ರಧಾನಿಯಾಗಿ, ಅತ್ಯಂತ ಯಶಸ್ವಿಯಾಗಿ ಒಂದು ಅವಧಿಯನ್ನು ಪೂರೈಸಿದ ಬಳಿಕ ಇದೀಗ ಎರಡನೇ ಅವಧಿಯನ್ನು ಸಂಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಬಹುತೇಕರು ನರೇಂದ್ರ ಮೋದಿ ಅವರೇ 3ನೇ ಅವಧಿಗೂ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ ಕೋಟ್ಯಾಂತರ ಅಭಿಮಾನಿಗಳು ಮುಂದೆಯೂ ಮೋದಿಯವರೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿ ಎಂಬುದು ಆಸೆ ವ್ಯಕ್ತಪಡಿಸುತ್ತಾರೆ. ಆದರೆ, ನರೇಂದ್ರ ಮೋದಿ ಅಧಿಕಾರದಲ್ಲಿರುವಾಗ ಬಿಜೆಪಿಯಲ್ಲಿ ಮಾಡಿದ ನಿಯಮದ ಅನುಸಾರ ನರೇಂದ್ರ ಮೋದಿಯವರಿಗೆ ಆ ಸಮಯದಲ್ಲಿ ವಯಸ್ಸು 75 ವರ್ಷ ದಾಟುವುದರಿಂದ ಅವರು ಈ ಬಾರಿ ಪ್ರಧಾನಿ ಅಭ್ಯರ್ಥಿಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಜೊತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2019ಕ್ಕಿಂತ ಹೆಚ್ಚು ಸ್ಥಾನಗಳನ್ನು ದೇಶಾದ್ಯಂತ ಗೆಲ್ಲಲಿದ್ದು, ಉತ್ತರ ಪ್ರದೇಶದಲ್ಲಿ ಇತಿಹಿಸವೆಂಬಂತೆ ಸ್ಥಾನಗಳನ್ನು ಗೆದ್ಧು ತೋರಿಸಲಿದೆ ಎಂದು ಹೇಳುವುದರ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಬಹುಮತ ಪಡೆಯಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ನೀವು ಮುಂದಿನ ಭವಿಷ್ಯದ ಪ್ರಧಾನಿ ಆಗುವ ಕುರಿತು ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ, ಇದರ ಬಗ್ಗೆ ನಿಮಗೇನಾದರೂ ಸುಳಿವು ಇದೆಯಾ ಎಂದು ಕೇಳಿದಾಗ ‘ನಾನು ಯಾವುದೇ ಹುದ್ದೆಗೆ ಆಕಾಂಕ್ಷಿಯಲ್ಲ ಎಂದು. ನನಗೆ ಉತ್ತರ ಪ್ರದೇಶದಲ್ಲೇ ಉಳಿಯುವ ಆಸೆಯಿದೆ. ಪ್ರಧಾನಿ ಮೋದಿ ನಮ್ಮ ದೇಶದ ದೊಡ್ಡ ಶಕ್ತಿ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಹೊಸ ಗುರುತನ್ನು ಹೊಂದಿದೆ. ಯಾವುದೇ ಚುನಾವಣೆ ಬರಲಿ, ಪ್ರಧಾನಿ ಮೋದಿ ಅವರ ಹೆಸರು ದೊಡ್ಡದಾಗಿರುತ್ತದೆ. 2014ರಲ್ಲಿ ಅವರು ಪ್ರಧಾನಿಯಾದ ನಂತರ ಸಮಾಜದ ಪ್ರತಿಯೊಂದು ವರ್ಗವೂ ಪ್ರಯೋಜನ ಪಡೆದಿದೆ. ಸಾರ್ವಜನಿಕರಿಗೆ ಯಾವೆಲ್ಲಾ ಭರವಸೆಗಳನ್ನು ನೀಡಲಾಗಿತ್ತೋ ಅವೆಲ್ಲವನ್ನೂ ಈಡೇರಿಸಲಾಗಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.