ಚುನಾವಣೆ ಮುಂಚಿತವಾಗೇ ಸೋಲುವ ಭೀತಿ ಎದುರಾಯ್ತಾ ಈ ಸ್ಪರ್ಧಿಗೆ? ಹಣವಿಲ್ಲವೆಂಬ ನೆಪ ಒಡ್ಡಿ ಕಣದಿಂದ ಹಿಂದೆ ಸರಿದ ಟಿಕೆಟ್ ಆಕಾಂಕ್ಷಿ!!
ವಿಧಾನಸಭೆಯ ನಿಮಿತ್ತ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಬಿಡುಗಡೆಮಾಡಲು ಕಾಯುತ್ತಿವ. ಇದರೆಡೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇವರೊಂದಿಗೆ ಹಾಲಿ ಶಾಸಕರು ಕೂಡ ಯಾರಿಗೆ ಅವಕಾಶ ಸಿಗಬಹುದೆಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಈ ನಡುವೆ ಇಲ್ಲೊಂದು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗೆ ಚುನಾವಣೆ ಮುನ್ನವೇ ಸೋಲಿನ ಭೀತಿ ಎದುರಾಗಿ, ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.
ಹೌದು, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಮತ್ತೆ ಕಾಡ್ತಾ ಇದ್ಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ. ಯಾಕೆಂದರೆ ಇದೇ ಕ್ಷೇತ್ರದ ಕಾಂಗ್ರೆಸ್‍ನ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ಮಾತು ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಅಟ್ಟಿಕಾ ಬಾಬು ಅವರು ಕೆಲದಿನಗಳ ಹಿಂದೆ ಮಸೀದಿಗಳಿಗೆ ಭೇಟಿ ಕೊಟ್ಟು, ಆಡಿದಂತಹ ಮಾತುಗಳು ರಫಿಕ್ ಅಹ್ಮದ್ ಸ್ಪರ್ಧೆ ಮಾಡಲ್ಲ ಎನ್ನುವ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
ಮಸೀದಿಗಳಿಗೆ ಭೇಟಿ ಕೊಟ್ಟು ಮಾತನಾಡಿದ ಅಟ್ಟಿಕಾ ಬಾಬು ‘ರಫಿಕ್ ಅಹ್ಮದ್ ನನಗೆ ಸಹಾಯ ಮಾಡುತ್ತಾರೆ. ಅವರ ಬಳಿ ಹಣ ಇಲ್ಲ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅಟ್ಟಿಕಾ ಬಾಬು ಕೂಡ ಮುಸ್ಲಿಂ ಸಮುದಾಯದವನಾಗಿದ್ದು, ನನ್ನ ಹೆಸರು ಅಯೂಬ್ ನನ್ನ ತಂದೆ ಪಾಷ ಸಾಬ್ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.
ಕಳೆದ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದರೂ, ರಫಿಕ್ ಅಹ್ಮದ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು.
ತುಮಕೂರು ನಗರದಲ್ಲಿ ಮುಸ್ಲಿಂ ಸಮುದಾಯದ ಮತ ಹೆಚ್ಚಿದ್ದರೂ ಕಾಂಗ್ರೆಸ್‍ನಿಂದ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರ ಇದೆ. ಕಾಂಗ್ರೆಸ್‍ನಿಂದ ಹಿಂದೂ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಗೆಲುವು ಸುಲಭ ಎಂಬ ಸ್ಟ್ರಾಟಜಿಯನ್ನು ನಾಯಕರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಕಾಡ್ತಾ ಇದ್ದು, ಚುನಾವಣೆಗೆ ಖರ್ಚು ಮಾಡಲು ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಮಾತು ಆಪ್ತ ಮೂಲಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ತಮ್ಮ ಸಮುದಾಯದವರೇ ಆದ ಅಟ್ಟಿಕಾ ಗೋಲ್ಡ್ ಕಂಪನಿಯ ಅಟ್ಟಿಕಾ ಬಾಬು ಅವರ ಬೆಂಬಲಕ್ಕೆ ರಫಿಕ್ ಅಹ್ಮದ್ ನಿಂತಿದ್ದಾರೆ ಎನ್ನುವ ಸಂಗತಿ ಚರ್ಚೆ ಆಗುತ್ತಿದೆ.