ನಿಮಗಿದು ಗೊತ್ತೇ? ವಿಶ್ವದಲ್ಲೇ ಅತಿ ದುಬಾರಿ ಕಾಫಿ ಪ್ರಾಣಿ ಮಲದಿಂದ ತಯಾರಿಸುವುದೆಂದು! ಹೆಚ್ಚಿನ ಮಾಹಿತಿ ಇಲ್ಲಿದೆ
ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಕಬರ್ ಬಿಜ್ಜು ಎಂಬ ಪ್ರಾಣಿ ಪತ್ತೆಯಾಗಿದ್ದು, ಈ ವಿಚಿತ್ರ ಪ್ರಾಣಿಯನ್ನು ಕಂಡು ಜನರು ಹೌಹಾರಿದ್ದಾರೆ. ಕಾರಣ, ಈ ಪ್ರಾಣಿಯ ಮಲದಿಂದ ಕಾಫಿ ತಯಾರಿಸುತ್ತಾರಂತೆ. ಆ ಕಾಫಿ ವಿಶ್ವದ ಅತಿ ದುಬಾರಿಯದ್ದು ಎನ್ನಲಾಗಿದೆ.
ಸುತಾರ್ರಾ ಗ್ರಾಮದ ಮನೆಯೊಂದರ ಬಳಿ ಈ ಪ್ರಾಣಿ ಕಂಡುಬಂದಿದ್ದು, ಇದನ್ನು ರಕ್ಷಿಸಲು ಮನೆಗೆ ತಂಡವೊಂದು ಆಗಮಿಸಿದ್ದು, ಈ ಪ್ರಾಣಿಯನ್ನು ನೋಡಿದ ತಂಡದ ಸದಸ್ಯರು ಆಶ್ಚರ್ಯಚಕಿತರಾಗಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ನಂತರ ಇದನ್ನು ರಕ್ಷಿಸಿ ಅರಣ್ಯದಲ್ಲಿ ಬಿಡಲಾಯಿತು.
ಈ ಪ್ರಾಣಿ ಏಷ್ಯನ್ ಪಾಮ್ ಸಿವೆಟ್ ಆಗಿದ್ದು, ಇದನ್ನು ಕಬರ್ ಬಿಜ್ಜು ಎಂದೂ ಕರೆಯುತ್ತಾರೆ. ಕಬರ್ ಬಿಜ್ಜು ಸೇವಿಸಿದ ಮತ್ತು ಜೀರ್ಣವಾಗದ್ದನ್ನು ಹೊರಹಾಕಿದ ಕಾಫಿ ಬೀಜಗಳು ಪ್ರಪಂಚದ ಅತ್ಯಂತ ದುಬಾರಿ ಕಾಫಿಗಳ ಮೂಲವಾಗಿದೆ.
ಈ ಪ್ರಾಣಿಯ ಮಲದಿಂದ ಮಾಡಿರುವ ಕಾಫಿಯ ಒಂದು ಕಪ್ ಗೆ ಅಮೆರಿಕಾದಲ್ಲಿ ಸುಮಾರು 6000 ರೂಪಾಯಿ ಇದೆ. ಕಬರ್ ಬಿಜ್ಜು ಅಪರೂಪದ ಪ್ರಾಣಿಯಾಗಿದ್ದು, ನೋಡಲು ಬೆಕ್ಕಿನಂತೆ ಕಾಣುತ್ತದೆ. ಈ ಪ್ರಾಣಿಯ ಮಲದಿಂದ ಮಾಡಿದ ಕಾಫಿಯನ್ನು ಕಾಪಿ ಲುವಾಕ್ ಎಂದು ಕರೆಯಲಾಗುತ್ತದೆ.