Airtel Recharge Plans: ಏರ್ ಟೆಲ್ ಬಿಡುಗಡೆ ಮಾಡಿದೆ ಅತ್ಯದ್ಭುತ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್ ಇಲ್ಲಿದೆ!
ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಆಫರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್ಟೆಲ್ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಜಿಯೋ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ ಜಿಯೋ ಕಂಪೆನಿಗೆ ಪ್ರತಿಸ್ಪರ್ಧಿಯಾಗಿರುವ ಏರ್ಟೆಲ್ ಕಂಪೆನಿ ಸ್ಮಾರ್ಟ್ಫೋನ್ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಹೊಸ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
ಹೌದು ಏರ್ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ 359 ರೂಪಾಯಿಯ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡವರಿಗೆ 1 ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯಬಹುದಾಗಿದೆ.
ಏರ್ಟೆಲ್ ಕೆಲದಿನಗಳ ಹಿಂದೆ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ ಕೇವಲ 28 ದಿನಗಳಿಗೆ ಮಾತ್ರ ಮಾನ್ಯತೆಯನ್ನು ಹೊಂದಿತ್ತು. ಆದರೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದೀಗ ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡವರಿಗೆ ಬರೋಬ್ಬರಿ 1 ತಿಂಗಳ ವ್ಯಾಲಿಡಿಟಿಯನ್ನು ಪಡೆಯಬಹುದು.
359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ ವಿಶೇಷತೆ :
- ಏರ್ಟೆಲ್ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನವೂ 2ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು.
- ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಿದೆ.
- ಈ ಯೋಜನೆಯಲ್ಲಿ ಗ್ರಾಹಕರು ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯ ಸಹ ದೊರೆಯುತ್ತದೆ.
- ಬಳಕೆದಾರರು ಈ ಯೋಜನೆಯಲ್ಲಿ ಒಟ್ಟಾರೆಯಾಗಿ 60ಜಿಬಿ ಡೇಟಾ ಬಳಕೆ ಮಾಡಿಕೊಳ್ಳಬಹುದು.
- ಹಾಗೆಯೇ 31 ದಿನಗಳಿರುವ ತಿಂಗಳಲ್ಲಿ 62ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ.
- ಇದರೊಂದಿಗೆ ಎಕ್ಸ್‌ಸ್ಟ್ರೀಮ್ ಆ್ಯಪ್, ಅಪೋಲೋ 24/7 ಸರ್ಕಲ್, ಫಾಸ್ಟ್ಯಾಗ್ನಲ್ಲೊ 100 ರೂಪಾಯಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಯೊಂದಿಗೆ ಇನ್ನೂ ಹಲವಾರು ಪ್ರಯೋಜನಗಳು ಇದರಲ್ಲಿ ಪಡೆಯಬಹುದಾಗಿದೆ.
ಅದಲ್ಲದೆ ಇದರ ಜೊತೆಗೆ ಏರ್ಟೆಲ್ನ ಈ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ ಬದಲಾಗಿ 549 ರೂಪಾಯಿಗಳ ರೀಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರು 359 ರೂಪಾಯಿಯಂತೇಯೇ ದೈನಂದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ವಿಶೇಷ ಏನೆಂದರೆ ಇದರಲ್ಲಿ ವ್ಯಾಲಿಡಿಟಿ ಅವಧಿಯು ಒಟ್ಟು 2 ತಿಂಗಳುವರೆಗೆ ಇರುತ್ತದೆ.
ಇನ್ನು 359 ರಂತೆ 2 ತಿಂಗಳು ರೀಚಾರ್ಜ್ ಮಾಡಿದರೆ ಒಟ್ಟು 718 ರೂಪಾಯಿ ಹಣವನ್ನು ಪಾವತಿಸಬೇಕು. ಆದರೆ 549 ರೂಪಾಯಿ ರೀಚಾರ್ಜ್ ಮೂಲಕ 169 ರೂಪಾಯಿಯನ್ನು ಉಳಿಸಬಹುದು.
ಸದ್ಯ ಈ ಪ್ಲ್ಯಾನ್ ಹೆಚ್ಚು ಡೇಟಾ ಬಯಸುವವರಿಗೆ, ಅಧಿಕ ಎಸ್‌ಎಮ್‌ಎಸ್ ಮಾಡುವವರಿಗೆ ಉತ್ತಮ ರೀಚಾರ್ಜ್ ಪ್ಲಾನ್ ಆಯ್ಕೆಯಾಗಿದೆ.