ಕಿರಿಕ್ ಬೆಡಗಿ ರಶ್ಮಿಕಾ – ವಿಜಯ್ ದೇವರಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡೋಕೆ ರೆಡಿ!!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ.ಹೆಚ್ಚು ಟ್ರೋಲಿಂಗ್ ಆಗುವ ನಟಿ ಎಂದರೂ ತಪ್ಪಾಗಲಾರದು. ಯಾರೇನೇ ಅಂದರೂ ಕೂಡ ಕ್ಯಾರೇ ಎನ್ನದೆ ತನ್ನ ಪಾಡಿಗೆ ನನ್ನ ಲೈಫ್ ನನ್ನಿಷ್ಟ ಎಂಬಂತೆ ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವ್ರ ಜೊತೆಗೆ ನ್ಯೂ ಇಯರ್ ಪಾರ್ಟಿ ಮಾಡಿಕೊಂಡಿದ್ದ ಕಿರಿಕ್ ಬೆಡಗಿಯ ಕುರಿತ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ.

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಮತ್ತೆ ಮುಟ್ಟಿದೆಲ್ಲ ಚಿನ್ನ ಅನ್ನೋ ಹಾಗೇ ನಟಿಸಿದ ಹೆಚ್ಚಿನ ಸಿನಿಮಾಗಳು ಸೂಪರ್ ಹಿಟ್ ಆಗಿ ಸದ್ಯ ಬಾಲಿವುಡ್ ನಲ್ಲಿಯು ಅವಕಾಶದ ಬಾಗಿಲು ತೆರೆದುಕೊಂಡಿದೆ. ಅದರಲ್ಲಿಯೂ ಗೀತ ಗೋವಿದಂ ಅನ್ನೋ ಸಿನಿಮಾ ಸಿನಿ ರಸಿಕರ ಪಾಲಿನ ನೆಚ್ಚಿನ ಸಿನಿಮಾವಾಗಿ ವಿಜಯ್ ದೇವರ ಕೊಂಡ ಹಾಗೂ ನ್ಯಾಶನಲ್ ಕ್ರಷ್ ಜೋಡಿಯ ಮೋಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿಬಿಟ್ಟಿದ್ದರು. ಈ ಜೋಡಿ ಜೊತೆಗೆ ನಟಿಸಿದ ಸಿನಿಮಾ ಹಿಟ್ ಲಿಸ್ಟ್ಗೆ ಸೇರ್ಪಡೆ ಗೊಂಡು ಮತ್ತೆ ಈ ಜೋಡಿಯ ಸಿನಿಮಾ ನೋಡಲು ಎದುರು ನೋಡುತ್ತಿದ್ದ ಮಂದಿಗೆ ಖುಷಿಯ ಸುದ್ಧಿ ಹೊರಬಿದ್ದಿದೆ.

ಈಗ ಮತ್ತೆ ಗೀತ ಗೋವಿಂದ ಒಂದಾಗೋ ಸಮಯ ಸನ್ನಿಹಿತವಾಗಿದೆ.. ಮತ್ತೆ ಯಾವಾಗಪ್ಪಾ ಇವರಿಬ್ಬರ ಟಾಮ್ ಅಂಡ್ ಜೆರ್ರಿ ಆಟವನ್ನ ಸ್ಕ್ರೀನ್ ಮೇಲೆ ನೋಡೋದು ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಸರ್ಪ್ರೈಸ್ ನೀಡೋದಕ್ಕೆ ಗೀತ ಗೋವಿದಂ ಟೀಂ ರೆಡಿ ಆಗಿದ್ದಾರೆ ಎನ್ನಲಾಗಿದೆ. ವಿಜಯ್ ದೇವರ ಕೊಂಡ ಹಾಗೂ ಕಿರಿಕ್ ಬೆಡಗಿಯ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎನ್ನೋ ಸುದ್ದಿ ಗೀತ ಗೋವಿದಂ ಸಿನೆಮಾದಲ್ಲಿ ನಡೆಸಿದ ಬಳಿಕವಂತೂ ಹೆಚ್ಚು ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ಆಗಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದೆ. ಅವರ ವೈಯಕ್ತಿಕ ವಿಚಾರ ಅದೇನೇ ಇರಲಿ. ಸದ್ಯ ತೆರೆ ಮೇರೆ ರಂಜಿಸಲು ಮತ್ತೆ ವಿಜಯ್ ಹಾಗೂ ಕಿರಿಕ್ ಬೆಡಗಿ ಜೊತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಅವರಿಗೆ ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲ ಭಾಷೆಯ ಸಿನಿಮಾ ರಂಗದಲ್ಲೂ ನಟಿಸುವ ಅವಕಾಶ ಲಭ್ಯವಾದರು ಕೂಡ ತೆಲುಗು ಚಿತ್ರರಂಗದಲ್ಲಿ ಸಿಕ್ಕಷ್ಟು ಯಶಸ್ಸು ಮತ್ತೆಲ್ಲೂ ಸಿಕ್ಕಿಲ್ಲ ಅನ್ನೋದಂತು ಸುಳ್ಳಲ್ಲ.. ಇತ್ತೀಚೆಗೆ ತನ್ನ ವಿವಾದಗಳ ಮೂಲಕ ಹೆಚ್ಚು ಸುದ್ದಿ ಮಾಡಿದ್ದು ಅಲ್ಲದೇ ರಶ್ಮಿಕಾ ಡಿಮ್ಯಾಂಡ್ ಕಡಿಮೆ ಆಗಿದೆ ಅನ್ನೋ ಅನುಮಾನ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಬಳಿಕ ಡಿಯರ್ ಕಾಂಮ್ರೆಡ್ ಚಿತ್ರದಲ್ಲೂ ಒಟ್ಟಿಗೆ ನಟಿಸಿ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆ ಬಳಿಕ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿ ಸದ್ಯ ಮತ್ತೊಮ್ಮೆ ಜೊತೆಯಾಗಿ ನಟಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಒಟ್ಟಿಗೆ ತೆರೆಯ ಮೇಲೆ ಬರಲು ಅಣಿಯಾಗಿದ್ದು, ಈ ಜೋಡಿಯ ಈ ಹಿಟ್ ಸಿನಿಮಾದ ಸೀಕ್ವೆಲ್‌ನಲ್ಲಿ ಇಬ್ಬರೂ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ’ಗೀತಾ ಗೋವಿಂದಂ’ ಸಿನಿಮಾದ ಸೀಕ್ವೆಲ್‌ಗೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ರಶ್ಮಿಕಾ ಮತ್ತು ವಿಜಯ್ ಈ ಸಿನಿಮಾದಲ್ಲಿ ನಟಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಗೀತಾ ಗೋವಿಂದಂ 2 ಸಿನಿಮಾ ಸದ್ಯದಲ್ಲೆ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಹೀಗಾಗಿ, ಗೀತ ಗೋವಿಂದರ ಮೋಡಿ ನೋಡಿ ಖುಷಿ ಪಡಲು ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Leave A Reply

Your email address will not be published.