ಪುತ್ತೂರಿನಲ್ಲೊಂದು ವಿಚಿತ್ರ ಘಟನೆ | ಕಾರಿಗೆ ಡಿಕ್ಕಿಯಾದ ನಾಯಿ ನಾಪತ್ತೆ, ಆದರೆ ಮತ್ತೆ ದಿಢೀರ್ ಪ್ರತ್ಯಕ್ಷವಾದ ನಾಯಿ, ಇದ್ದದ್ದೆಲ್ಲಿ ಗೊತ್ತಾ?
ಕರಾವಳಿಯಲ್ಲಿ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್ಗೆ ನಾಯಿ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದ ಸಂದರ್ಭ ಬಂಪರ್ನೊಳಗೆ ಅದೇ ನಾಯಿ ಪತ್ತೆಯಾಗಿರುವ ವಿಸ್ಮಯಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur, Dakshina Kannada) ಕಾರ್ಗೆ (Car) ಡಿಕ್ಕಿಯಾದ ನಾಯಿಯೊಂದು (Dog) ಬಂಪರ್ನೊಳಗೆ (Car bumper) ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಡಿಕ್ಕಿಯಾದ ಬಳಿಕ ಬಂಪರ್ನೊಳಗೆ ಕುಳಿತ ನಾಯಿ ಸುಮಾರು 70 ಕಿಲೋ ಮೀಟರ್ ಪ್ರಯಾಣ ಮಾಡಿದೆ ಎನ್ನಲಾಗಿದೆ. ಈ ನಡುವೆ ನಾಯಿ ಕಾರ್ ನಲ್ಲಿದ್ದ ವಿಚಾರ ಕಾರ್ ಚಾಲಕನಿಗೆ (Car Driver) ತಿಳಿದಿರಲಿಲ್ಲ.
ಪುತ್ತೂರಿನ ಕಬಕ (Kabaka, Puttur) ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರಿಗೆ ಸೇರಿದ ಕಾರ್ ಬಂಪರ್ನೊಳಗೆ ನಾಯಿ ಅಕಸ್ಮಾತ್ ಆಗಿ ಸೇರಿಕೊಂಡಿದ್ದು, ಸುಬ್ರಹ್ಮಣ್ಯ ಟಿ.ಎಸ್. ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ (Subramanya To Puttur) ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ.ಕೂಡಲೇ ಕಾರ್ ನಿಲ್ಲಿಸಿದ ಸುಬ್ರಹ್ಮಣ್ಯ ಗಾಡಿ ನಿಲ್ಲಿಸಿ ನೋಡಿದಾಗ ನಾಯಿ ಎಲ್ಲೂ ಕಂಡುಬಂದಿಲ್ಲ ಎನ್ನಲಾಗಿದೆ. ಹೀಗಾಗಿ, ಸುಬ್ರಮಣ್ಯ ಅವರು ನಾಯಿ ಹೋಗಿರಬಹುದು ಎಂದು ತಿಳಿದು ಕಾರ್ ಚಲಾಯಿಸಿಕೊಂಡು ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಮನೆಗೆ ಬಂದ ಬಳಿಕ ಕಾರ್ ಪರಿಶೀಲನೆ ನಡೆಸಿದ ಸಂದರ್ಭ ಬಂಪರ್ನೊಳಗೆ ನಾಯಿ ಪತ್ತೆಯಾಗಿದ್ದು ತಕ್ಷಣವೇ ಸ್ಥಳೀಯ ಮೆಕ್ಯಾನಿಕ್ ಅವರನ್ನು ಕರೆಸಿ ನಾಯಿಯನ್ನು ಹೊರಕ್ಕೆ ತೆಗೆದ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದೆ.