Mahindra Upcoming Electric SUVs: ಮಹೀಂದ್ರಾ ಕಂಪನಿಯ 5 ಎಲೆಕ್ಟ್ರಿಕ್ ಕಾರುಗಳು ಈ ದಿನಾಂಕದಂದು ಬಿಡುಗಡೆ !
ಕಾರು ಕಂಪನಿಗಳು ಮಾರುಕಟ್ಟೆಗೆ ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಸದ್ಯ ಮಹೀಂದ್ರಾ ಕಂಪನಿಯ 5 ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ. ಅದ್ಭುತ ವೈಶಿಷ್ಟ್ಯಗಳೊಂದಿಗೆ ಜನರನ್ನು ಆಕರ್ಷಿಸಲು ತಯಾರಾಗಿದೆ. ಯುನೈಟೆಡ್ ಕಿಂಗ್ಡಂನಲ್ಲಿ ನ್ಯೂ ಬಾರ್ನ್ ಎಲೆಕ್ಟ್ರಿಕ್ ಎಸ್ಯುವಿ ಕಾರುಗಳನ್ನು ಪ್ರದರ್ಶಿಸಿದ್ದು, ಈ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುತ್ತದೆ. ಇವುಗಳಲ್ಲಿ XUV.e8, XUV.e9, BE.05, BE.07 ಮತ್ತು BE.09 ಮಾದರಿಗಳಿವೆ. ಈ ಕಾರುಗಳ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಮಹೀಂದ್ರಾ XUV.E8 :
ಮಾರುಕಟ್ಟೆಯಲ್ಲಿ XUV.e8 ಕಾರು ಡಿಸೆಂಬರ್ 2024 ರಲ್ಲಿ ಬಿಡುಗಡೆ ಆಗಲಿದ್ದು, ಇದರ ನಂತರ XUV.e9 ಬರಲಿದೆ. ಈ ಎರಡೂ ಕಾರುಗಳು SUVಗಳು INGLO ಪ್ಲಾಟ್ಫಾರ್ಮ್ ಅನ್ನು ಆಧರಿಸಿವೆ. ಇದು ಬಾರ್ನ್ ಎಲೆಕ್ಟ್ರಿಕ್ ಪ್ಲಾಟ್ಫಾರ್ಮ್ ಆಗಿದೆ. XUV.e8 ನ ಮೂಲ ವಿನ್ಯಾಸ ಸಿಲೂಯೆಟ್ ಮಹೀಂದ್ರ XUV700ನಂತೆಯೇ ಇರಲಿದ್ದು, ಈ XUV.e8 ಕಾರು 4740mm ಉದ್ದ, 1900mm ಅಗಲ ಮತ್ತು ಅದರ ಎತ್ತರ 1760mm ಇರುತ್ತದೆ. ಹಾಗೇ ಇದರ ವ್ಹೀಲ್ ಬೇಸ್ 2,762 ಎಂಎಂ ಆಗಿದೆ. ಈ ಕಾರು XUV700 ಗಿಂತ ಸುಮಾರು 45 ಎಂಎಂ ಉದ್ದ, 10 ಎಂಎಂ ಅಗಲ ಮತ್ತು 5 ಎಂಎಂ ಎತ್ತರವಾಗಿದೆ.
ಮಹೀಂದ್ರಾ XUV.E9 :
ಮಹೀಂದ್ರಾ XUV.e9 ಕೂಪ್ ತರಹದ ವಿನ್ಯಾಸದೊಂದಿಗೆ ಬರಲಿದ್ದು, ಈ ಕಾರು XUV.E8 ನಂತರ ಬಿಡುಗಡೆಯಾಗಲಿದ್ದು, ಏಪ್ರಿಲ್ 2025 ರ ವೇಳೆಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಕಂಪನಿ ತಿಳಿಸಿದೆ. XUV.e9 4790 ಎಂಎಂ ಉದ್ದ, 1905 ಎಂಎಂ ಅಗಲ ಮತ್ತು 1690 ಎಂಎಂ ಎತ್ತರ ಇರುತ್ತದೆ. ಈ ಕಾರು 5-ಸೀಟರ್ ಮಾಡೆಲ್ ಆಗಿರಲಿದ್ದು, 2775mm ಉದ್ದದ ವೀಲ್ಬೇಸ್ನೊಂದಿಗೆ ಬರಲಿದೆ.
ಮಹೀಂದ್ರಾ BE.05 :
ಮಹೀಂದ್ರಾ BE.05 ಅನ್ನು ಸ್ಪೋರ್ಟ್ಸ್ ಎಲೆಕ್ಟ್ರಿಕ್ ವಾಹನವಾಗಿ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಕಾರಿನ ಉದ್ದ 4370mm ಇದ್ದು, ಇದರ ಅಗಲ 1900mm ಮತ್ತು 1635mm ಇರಲಿದೆ. ಹಾಗೇ ಇದರ ವ್ಹೀಲ್ ಬೇಸ್ 2775 ಎಂಎಂ ಆಗಿರಲಿದೆ.
ಮಹೀಂದ್ರಾ BE.07 ಮತ್ತು BE.09 :
ಮಹೀಂದ್ರಾ BE.07 ಎಲೆಕ್ಟ್ರಿಕ್ ಕಾರು 4565mm ಉದ್ದವಿದ್ದು, 1,900mm ಅಗಲ ಮತ್ತು 1,660mm ಎತ್ತರವಾಗಿದ್ದು, ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯಲಿದೆ. ಇದರ ವ್ಹೀಲ್ ಬೇಸ್ ಕೂಡಾ BE.05 ನಷ್ಟೇ ಆಗಿದ್ದು, 2,775 ಎಂಎಂ. ಆಗಿದೆ. ಇನ್ನು ಮಹೀಂದ್ರ BE.09 INGLO ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಈ ಕಾರುಗಳು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಗೆ ಕಠಿಣ ಸ್ಪರ್ಧೆ ನೀಡಲಿದೆ.