PM Kisan Samman Nidhi : ರೈತರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್!!!

ಈ ಬಾರಿಯ ಬಜೆಟ್ ಮಂಡನೆಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ರೈತರಿಗೆ ಸಂತಸ ತರುವ ಸುದ್ದಿ ಇರಲಿಲ್ಲ. ಬದಲಾಗಿ ದೇಶದ ಕೋಟ್ಯಾಂತರ ರೈತರಿಗೆ ಬಿಗ್ ಶಾಕ್ ನೀಡಿದೆ. ಹೌದು, ಬಜೆಟ್ ನಲ್ಲಿ ಕಿಸಾನ್ ಯೋಜನೆಯ ಮೊತ್ತದಲ್ಲಿ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಈ ಬಾರಿ ಈ ಯೋಜನೆಗಾಗಿ 5 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಜೆಟ್ ಮೀಸಲಿಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ರೈತರ ಮೇಲೆ ಆರ್ಥಿಕವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ರೈತರ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುವ ಯೋಜನೆಯಾಗಿದೆ. ಆದರೆ ಈ ಯೋಜನೆಯ ಮೊತ್ತ ಹೆಚ್ಚಳವಾಗುತ್ತದೆ ಎಂದು ಕಾಯುತ್ತಿದ್ದ ರೈತರಿಗೆ ಭಾರೀ ನಿರಾಸೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ರ ಬಜೆಟ್ ಮಂಡಿಸಿದ್ದು, ಇದರಲ್ಲಿ ಯೋಜನೆಗಾಗಿ ಕೇವಲ 60 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ಆದರೆ ಕಳೆದ 5 ವರ್ಷಗಳಲ್ಲಿ ಈ ಯೋಜನೆಯಡಿ ಬಿಡುಗಡೆಯಾದ ಬಜೆಟ್ ನಲ್ಲಿ ಇದು ಅತ್ಯಂತ ಕಡಿಮೆ ಬಜೆಟ್ ಆಗಿದೆ.

ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12 ಕಂತುಗಳು ರೈತರ ಖಾತೆಗೆ ಬಂದಿದೆ. ಆದರೆ ಜನವರಿ ಕಳೆದರೂ 13ನೇ ಕಂತು ಖಾತೆಗೆ ಬಂದಿಲ್ಲ. ಇದು ರೈತರ ಆತಂಕಕ್ಕೆ ಇನ್ನೊಂದು ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಬಜೆಟ್ ಅನ್ನು ನಿರಂತರವಾಗಿ ಕಡಿಮೆ ಮಾಡುತ್ತಾ ಬರುತ್ತಿದೆ. 2022-23ನೇ ಸಾಲಿನಲ್ಲಿ ಈ ಯೋಜನೆಗೆ 68000 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ 60 ಸಾವಿರ ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಶೇ 13ರಷ್ಟು ಕಡಿಮೆಯಾಗಿದೆ. ಆದರೆ 2021-22ರಲ್ಲಿ ಈ ಯೋಜನೆಗೆ 66,825 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಈ ಬಾರಿಯೇ ಕಡಿಮೆ ಅನುದಾನ ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2 ಸಾವಿರ ರೂ. ವರ್ಗಾವಣೆ ಮಾಡಲಾಗುತ್ತದೆ. ಈ ವರ್ಷ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತನ್ನು 3 ರಿಂದ 4 ಕ್ಕೆ ಹೆಚ್ಚಿಸಬಹುದು ಎಂಬ ಸುದ್ದಿ ಹರಿದಾಡಿದ್ದು, ಇದರಿಂದ ರೈತರಿಗೆ 6 ಸಾವಿರ ಸಿಗುವಲ್ಲಿ 8 ಸಾವಿರ ರೂ.ಸಿಗಲಿದೆ ಎಂದಿತ್ತು. ಆದರೆ, ಇದೀಗ ಬಜೆಟ್‌ ನಲ್ಲಿ ಈ ಬಗ್ಗೆ ಘೋಷಣೆ ಆಗದೆ, ಶುಲ್ಕ ಕಡಿಮೆಯೇ ಆಗಿದೆ. ಇದು ರೈತ ಬಾಂಧವರ ನಿರೀಕ್ಷೆ ಹುಸಿಯಾಗಿಸಿದ್ದು, ನಿರಾಸೆ ಉಂಟುಮಾಡಿದೆ.

Leave A Reply

Your email address will not be published.