Earth Tone Colors : ಭೂಮಿ ಬಣ್ಣ ಟ್ರೆಂಡಿಂಗ್ ! ಯಾಕೆ ಈ ಕಲರ್ ಗೆ ಅಷ್ಟೊಂದು ಪ್ರಾಮುಖ್ಯತೆ ಗೊತ್ತಾ?
ನಮ್ಮ ಜೀವನದಲ್ಲಿ ಬಣ್ಣಗಳು (Color) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವರು ತಮ್ಮ ನೆಚ್ಚಿನ ಬಣ್ಣದ ಉಡುಗೆಯ ತೊಟ್ಟು ಸಂಭ್ರಮಿಸಿದರೆ ಮತ್ತೆ ಕೆಲವರು ತಮ್ಮ ನಂಬಿಕೆಯ ಅನುಸಾರ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಬಣ್ಣಗಳು ಗ್ರಹಗತಿ (Planet) ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ ಎಂಬ ನಂಬಿಕೆ ಕೂಡ ಇದ್ದು, ಬಣ್ಣಗಳು ನಿಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳಲು ಕೂಡ ಸಹಕಾರಿಯಾಗಿವೆ. ವಿವಿಧ ಬಣ್ಣಗಳು ವಿವಿಧ ಗ್ರಹಗಳ ಅಶುಭ ಮತ್ತು ಋಣಾತ್ಮಕ ಪರಿಣಾಮಗಳನ್ನು ನಿವಾರಣೆಗೆ ನೆರವಾಗುತ್ತದೆ ಎನ್ನಲಾಗುತ್ತದೆ.
ಜೀವನದಲ್ಲಿ ಬಣ್ಣಗಳು ಬಹಳ ಮುಖ್ಯ. ಬಣ್ಣಗಳ ಸಹಾಯದಿಂದ ಮನಸ್ಸು ಮತ್ತು ಮನೆಯ ಮೇಲೆ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಬಹುದು. ಪ್ರತಿಯೊಂದು ಬಣ್ಣವು ಕೂಡ ಒಂದೊಂದು ಭಾವನೆಗಳನ್ನು ಸಂಕೇತಿಸುತ್ತದೆ.ಹಾಗಾಗಿ, ಬಣ್ಣಗಳು ಮನುಷ್ಯನ ಭಾವನೆಗಳ ಮೇಲೆ ಪರಿಣಾಮ ಬೀರುವುದಲ್ಲದೆ ಈ ಭೂಮಿಯ ಬಣ್ಣಗಳು ಪ್ರಶಾಂತತೆಯನ್ನು ಪ್ರತಿಬಿಂಬಿಸುತ್ತದೆ.
ಒಮ್ಮೆ ಇದ್ದ ಟ್ರೆಂಡ್ ಮತ್ತೊಮ್ಮೆ ಇರುತ್ತದೆ ಎಂದು ಊಹಿಸಲಾಗದು. ಕಾಲಕ್ಕೆ ತಕ್ಕಂತೆ ಟ್ರೆಂಡ್ ಕೂಡ ಬದಲಾಗುತ್ತಾ ಹೋಗುತ್ತದೆ. ಈ ಹಿಂದೆ ಮದುವೆ ಯಾವುದೆ ಸಮಾರಂಭವಿರಲಿ ಕಣ್ಣು ಕೋರೈಸುವ ಶೈನಿಂಗ್ ಬಣ್ಣಗಳು ಹೆಚ್ಚು ಟ್ರೆಂಡ್ ಸೃಷ್ಟಿಸಿತ್ತು. ಆದ್ರೆ, ಈಗ ಈ ಬಣ್ಣಗಳ ಟ್ರೆಂಡ್ ಕಡಿಮೆ ಆಗಿ ಮದುವೆ–ಮುಂಜಿಯಲ್ಲಿ ಕೆಂಪು, ನೇರಳೆ, ಕೇಸರಿ, ಹಸಿರು ರೀತಿಯ ಬಣ್ಣಗಳ ಬಟ್ಟೆ ತೊಡುವ ಕ್ರಮ ಕೊಂಚ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಬಣ್ಣಗಳು (Earthy Colors) ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ನೀವು ಇತ್ತೀಚೆಗೆ ಯಾವುದೇ ಸಮಾರಂಭ ಇಲ್ಲವೇ ಯಾವುದೇ ಕಾರ್ಯಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭೂಮಿಯ ಬಣ್ಣ ಹೈಲೈಟ್ ಆಗೋದನ್ನ ನೋಡಿರಬಹುದು. ಅಷ್ಟಕ್ಕೂ ಈ ಬಣ್ಣ ಹೆಚ್ಚು ಟ್ರೆಂಡ್ ಸೃಷ್ಟಿ ಮಾಡಲು ಕಾರಣ ಏನು ಎಂದು ಯಾವಾಗಲಾದರೂ ಯೋಚಿಸಿದ್ದೀರಾ?? ಇಲ್ಲ ಅನ್ನೋದಾದ್ರೆ ಇದರ ಇಂಟರೆಸ್ಟಿಂಗ್ ವಿಷಯ ನಾವು ಹೇಳ್ತೀವಿ ಕೇಳಿ!!!
ಐದಾರು ವರ್ಷಗಳ ಹಿಂದೆ ಹೊಳೆಯುವ ಬಣ್ಣಗಳು ಸೃಷ್ಟಿ ಮಾಡಿದ್ದ ಟ್ರೆಂಡ್‘ ಅನ್ನು ಅರ್ಥ್ ಕಲರ್ ಬಾಚಿಕೊಂಡು ಬಿಟ್ಟಿದೆ. ಈಗ ಕೆಲವು ವರ್ಷಗಳಿಂದ ಭೂಮಿಯ ಬಣ್ಣಗಳು ಟ್ರೆಂಡಿಂಗ್‘ನಲ್ಲಿದ್ದು, ಯಾವುದೇ ಬಣ್ಣದಲ್ಲಿ ಕಂದು ಬಣ್ಣದ ಟೋನ್ ಕಂಡುಬಂದರೆ ಅದನ್ನು ಭೂಮಿಯ ಬಣ್ಣ ಎಂದು ಸೂಚಿಸಬಹುದು. ಇಲ್ಲವೇ ಮಣ್ಣಿನ ಬಣ್ಣವನ್ನು ಹೋಲುವ ಕೆಲವು ಬಣ್ಣಗಳನ್ನು ಭೂಮಿಯ ಬಣ್ಣ ಎನ್ನಬಹುದು. ಅಂದ್ರೆ, ತುಕ್ಕು, ಮಾರಿಗೋಲ್ಡ್, ಸುಟ್ಟ ಸಿಯೆನ್ನಾ ಕಂದು, ಟೆರಾಕೋಟಾ, ಅರಿಶಿನ ಇವುಗಳನ್ನ ಭೂಮಿಯ ಬಣ್ಣ ಎನ್ನಬಹುದು.
ಸಾಮಾನ್ಯವಾಗಿ ಎಲ್ಲಾ ಬಣ್ಣ ಒಂದೊಂದು ಭಾವನೆಗಳನ್ನು ಸೂಚಿಸುತ್ತದೆ. ಸೈಕಾಲಾಜಿಕಲಿ ಪ್ರತಿ ಬಣ್ಣ ಮನುಷ್ಯನ ಭಾವನೆಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಮೇಲೆ ಸೂಚಿಸಿದ ಈ ಭೂಮಿಯ ಬಣ್ಣಗಳು ಪ್ರಶಾಂತತೆಯನ್ನು ಪ್ರತಿಬಿಂಬಿಸುತ್ತದೆ. ಕೆಂಪು, ಹಸಿರು ಬಣ್ಣದ ರೀತಿ ಕಣ್ಣು ಕೋರೈಸುವ ರೀತಿ ಇರದೆ ಭೂಮಿಯು ಬಣ್ಣ ನೋಡುಗರ ಕಣ್ಣಿಗೆ ಸಮಾಧಾನವನ್ನು ನೀಡುತ್ತವೆ. 2022 ರಲ್ಲಿ ಭೂಮಿಯ ಟೋನ್ಗಳು ವಿನ್ಯಾಸದ ಹೈ ಲೈಟ್ ಆಗಿರುವ ಅಂಶವಾಗಿದೆ. ಕೊಹ್ಲಿ–ಅನುಷ್ಕಾ, ರಂಬೀರ್–ಆಲಿಯಾ, ಅಂಕಿತ ಲೋಖಂಡೆ–ವಿಕಿ ಜೈನ್, ನೀತಿ ಟೈಲರ್– ಪರೀಕ್ಷಿತ್ ಬಾವಾ, ಹೀಗೆ ಹತ್ತು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮದುವೆಯಲ್ಲಿ ಗ್ರಾಂಡ್ ಡ್ರೆಸ್ ಹಾಕಿ ಫುಲ್ ಮಿಂಚಿದ್ದು ಕೂಡ ಇದೇ ಭೂಮಿಯ ಬಣ್ಣಗಳಲ್ಲಿ ಅನ್ನೋದು ವಿಶೇಷ.
ಬಾಹ್ಯದ ಒಳಗೂ ಜೊತೆಗೆ ಹೊರಗಿನ ವಾತಾವರಣದಲ್ಲಿ ಶಾಂತತೆಯಯನ್ನು ಕಾಪಾಡಲು ಈ ಬಣ್ಣಗಳು ನೆರವಾಗುತ್ತವೆ. ಹೀಗಾಗಿ, ಹೆಚ್ಚಿನವರು ತಮ್ಮ ಮನೆಯ ಸೊಬಗನ್ನು ಇಮ್ಮಡಿ ಮಾಡುವ ನಿಟ್ಟಿನಲ್ಲಿ ತಮ್ಮ ಮನೆ ಇಂಟೀರಿಯರ್ಸ್‘ಗೂ ಇದೇ ಬಣ್ಣಗಳನ್ನು ಬಳಕೆ ಮಾಡುತ್ತಿದ್ದಾರಂತೆ. ಈ ಬಣ್ಣಗಳ ಮತ್ತೊಂದು ವಿಶೇಷತೆ ಏನಪ್ಪಾ ಅಂದರೆ, ಈ ಬಣ್ಣಗಳ ಉಡುಗೆಗೆ ಎಲ್ಲ ರೀತಿಯ ಆಭರಣಗಳು ಸುಲಭವಾಗಿ ಮ್ಯಾಚ್ ಆಗುತ್ತವೆ. ಈ ಬಣ್ಣಗಳು ಮನೆಯ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ ಮನೆ ನೆಮ್ಮದಿ ನೀಡುವಲ್ಲಿ ಕೂಡ ಮಹತ್ತರ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ.