Kantara : ಕಾಂತಾರ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಯಾಕೆ ಆಗಿಲ್ಲ ಎನ್ನುವುದಕ್ಕೆ ನಿರ್ಮಾಪಕರ ಉತ್ತರ ಇಲ್ಲಿದೆ !
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಸಿನಿಮಾ ಭರ್ಜರಿ ಸದ್ದು ಮಾಡಿದ್ದು, 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಕರಾವಳಿಯ ಕಲೆಯನ್ನು ಅದ್ಭುತವಾಗಿ ರಚಿಸಿ, ಪ್ರೇಕ್ಷಕರ ಮುಂದಿಟ್ಟು, ಮನಗೆದ್ದಂತಹ ಸಿನಿಮಾ. ಕನ್ನಡದ ಈ ‘ಕಾಂತಾರ’ ಸಿನಿಮಾ ಆಸ್ಕರ್‌ಗೆ ಶಾರ್ಟ್ ಲಿಸ್ಟ್‌ನಲ್ಲಿ ಆಗಿತ್ತು. ಆದರೆ ನಾಮಿನೇಟ್ ಆಗುವಲ್ಲಿ ವಿಫಲವಾಗಿತ್ತು. ಇದು ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ಈ ಬಗ್ಗೆ ವಿಜಯ್ ಕಿರಗಂದೂರ್ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸಿದ್ದಾರೆ. ‘ಕಾಂತಾರ’ ಯಾಕೆ ಆಸ್ಕರ್‌ಗೆ ನಾಮಿನೇಟ್ ಆಗ್ಲಿಲ್ಲ ಎಂಬ ವಿಚಾರ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಿರ್ಮಾಪಕರಾದ ವಿಜಯ್ ಕಿರಗಂದೂರ್, “ಕಾಂತಾರ ಸಿನಿಮಾ ಸೆಪ್ಟೆಂಬರ್ ಅಂತ್ಯದಲ್ಲಿ ರಿಲೀಸ್ ಆಗಿತ್ತು. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ಸ್ ನಾಮಿನೇಷನ್ ವೇಳೆಗೆ ಸಿನಿಮಾ ಬಗ್ಗೆ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಸರಿಯಾದ ಪ್ರಚಾರ ಇಲ್ಲದ ಕಾರಣ ಆಸ್ಕರ್, ಗೋಲ್ಡನ್ ಗ್ಲೋಬ್ ನಂತಹ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಈ ಸಿನಿಮಾ ನಾಮಿನೇಟ್ ಆಗಲು ಸಾಧ್ಯವಾಗಲಿಲ್ಲ. ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ‘ನಾಟು ನಾಟು’ ಸಾಂಗ್ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಕಾರಣ ಏನಂದ್ರೆ ಈ ಸಿನಿಮಾ ರಿಲೀಸ್ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮೋಟ್ ಮಾಡಲು ಅವರಿಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿತ್ತು. ಕಾಂತಾರ ಗೆ ಸಮಯ ಕಡಿಮೆ ಸಿಕ್ಕ ಕಾರಣ ನಾಮಿನೇಟ್ ಆಗಿಲ್ಲ” ಎಂದು ಹೇಳಿದರು.
ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿಲ್ಲ. ಆದರೆ ‘ಕಾಂತಾರ -2’ ಗೆ ಪ್ರಶಸ್ತಿ ಕೈ ತಪ್ಪುವ ಹಾಗೆ ಮಾಡೋದಿಲ್ಲ. ಈ ಸಿನಿಮಾ ಮೂಲಕ ಪ್ರಶಸ್ತಿ ಗಳಿಸುತ್ತೇವೆ. ಕಾಂತಾರದಲ್ಲಿ ನಾವು ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಹೋಗುವಲ್ಲಿ ಎಲ್ಲಿ ವಿಫಲವಾಗಿದ್ದೇವೆ. ಆದರೆ ಮುಂದಿನ ಬಾರಿ ಈ ರೀತಿ ಆಗಲು ಬಿಡುವುದಿಲ್ಲ. ಎಲ್ಲಾ ರೀತಿಯಲ್ಲೂ ‘ಕಾಂತಾರ’ ಸೀಕ್ವೆಲ್‌ನ ದೊಡ್ಡಮಟ್ಟದಲ್ಲಿ ಕೊಂಡೊಯ್ಯುವ ಪ್ರಯತ್ನ ನಡೀತಿದೆ. ಮುಂದಿನ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತೇವೆ ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.
ಡಿವೈನ್ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ಸೀಕ್ವೆಲ್ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ನೀಡಲಿದ್ದೇವೆ. ಕಾಂತಾರ-2 ವಿಭಿನ್ನವಾಗಿ, ಅದ್ಭುತವಾಗಿ ಪ್ರೇಕ್ಷಕರ ಮುಂದಿಡಲಿದ್ದೇವೆ. ಈ ಸಿನಿಮಾ ಅಂತರಾಷ್ಟ್ರೀಯ ಪ್ರಶಸ್ತಿಗಳ ವೇದಿಕೆಗೆ ಸೂಕ್ತವಾಗಿರುತ್ತದೆ. ನಾವು ಈ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಕೊಂಡೊಯ್ಯುತ್ತೇವೆ ಕಿರಗಂದೂರ್ ತಿಳಿಸಿದ್ದಾರೆ. ಜೊತೆಗೆ ಸಿನಿಮಾಗೆ ಮಾರ್ಕೆಟಿಂಗ್ ಬಹಳ ಮುಖ್ಯ ಎಂದಿದ್ದಾರೆ. ಒಳ್ಳೆ ಪ್ರಾಡೆಕ್ಟ್ ಜೊತೆಗೆ ಒಳ್ಳೆ ಪ್ರಮೋಷನ್ ಮಾಡಿದರೆ ಸಕ್ಸಸ್ ಸಿಗುತ್ತದೆ ಎಂದು ಹೇಳಿದರು.