ʼಇವರಿಬ್ಬರು ಭಾರತದ ಭವಿಷ್ಯದ ಸೂಪರ್‌ ಸ್ಟಾರ್‌ಗಳುʼ – ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ವರ್ಣನೆ

ಇದೀಗ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಮೇಲೆ ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಕಪ್ ಮೇಲೆ ನಿಗಾ ವಹಿಸಿದೆ. ಅಲ್ಲದೆ ಪ್ರಸ್ತುತ ಹಲವು ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಜೊತೆಗೆ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಭಾರತದ ಭವಿಷ್ಯದ ಸೂಪರ್‌ ಸ್ಟಾರ್‌ಗಳನ್ನು ಗುರುತಿಸಿದ್ದು ಜನರಿಗೆ ತಲುಪಿಸಿದ್ದಾರೆ.

 

ಭಾರತ ಕ್ರಿಕೆಟ್ ತಂಡದಲ್ಲಿ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೀಗೆ ಹಲವಾರು ಕ್ರಿಕೆಟಿಗರು ಹಲವಾರು ಪಂದ್ಯಗಳನ್ನು ಗೆದ್ದು ಅಪಾರ ಸಾಧನೆ ಮಾಡಿದ್ದಾರೆ.

ಇದೀಗ ಭವಿಷ್ಯದ ಟೀಂ ಇಂಡಿಯಾ ಸೂಪರ್‌ ಸ್ಟಾರ್ ಆಟಗಾರರು ಯಾರು ಎನ್ನುವ ಚರ್ಚೆಗೆ ತೆರೆ ಎಳೆದಾಗಿದೆ. ಹೌದು ಈ ಕುರಿತಂತೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.

ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್‌, ಉಮ್ರಾನ್ ಮಲಿಕ್‌ ಅವರಂತಹ ಆಟಗಾರರು ಸದ್ಯ ಮಿಂಚುತ್ತಿದ್ದರೂ, ಇವರೆಲ್ಲರ ಹೆಸರನ್ನು ಬಿಟ್ಟು, ಅನಿಲ್‌ ಕುಂಬ್ಳೆ ಬೇರೆ ಇಬ್ಬರು ಆಟಗಾರರನ್ನು ಸೂಪರ್‌ ಸ್ಟಾರ್ ಪಟ್ಟ ಅಲಂಕರಿಸಲಿರುವ ಆಟಗಾರರನ್ನು ಸೂಚಿಸಿದ್ದಾರೆ.

ಹೌದು, ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಟೀಂ ಇಂಡಿಯಾದ ಭವಿಷ್ಯದ ಸೂಪರ್‌ ಸ್ಟಾರ್‌ಗಳಾಗಲಿದ್ದಾರೆ ಎಂದು ಅನಿಲ್ ಕುಂಬ್ಳೆ ಅವರು ರಿವಿಲ್ ಮಾಡಿದ್ದಾರೆ.

ಸದ್ಯ ಬೌಲಿಂಗ್ ವಿಭಾಗದಲ್ಲಿ ಹಲವು ಆಟಗಾರರಿದ್ದರೂ ಸಹಾ, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಎಡಗೈ ವೇಗಿ ಆರ್ಶದೀಪ್ ಸಿಂಗ್, ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಸಾಧ್ಯತೆಯಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಬ್ಯಾಟಿಂಗ್ ವಿಭಾಗದಲ್ಲಿ ರಾಂಚಿ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್‌ ಕಿಶನ್‌, ಭವಿಷ್ಯದ ಸೂಪರ್‌ ಸ್ಟಾರ್ ಆಗುವ ಸಾಧ್ಯತೆಯಿದೆ ಎಂದಿದ್ದಾರೆ. ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅತ್ಯುತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ ಆದ್ದರಿಂದ ಇವರಿಬ್ಬರು ಸೂಪರ್‌ ಸ್ಟಾರ್‌ಗಳಾಗಲು ಅರ್ಹರು ಎಂದಿದ್ದಾರೆ.

Leave A Reply

Your email address will not be published.