ದ.ಕ ನೂತನ ಎಸ್ಪಿ ಅಧಿಕಾರಕ್ಕೆ ಹಿಂದೂ ಸಂಘಟನೆಗಳಿಂದ ಭಾರೀ ವಿರೋಧ!! ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಡೀಲಿಂಗ್ ಮಾಹಿತಿ-ಏನದು!??
ಮಂಗಳೂರು: ರಾಜ್ಯದ ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ್ ಭಗವಾನ್ ಸೋನಾವಣೆ ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾಯಿಸಲಾಗಿದ್ದು,ತೆರವಾದ ಸ್ಥಾನಕ್ಕೆ ಗುಪ್ತಚರ ಎಸ್ಪಿ ವಿಕ್ರಂ ಅಮಾತೆ ಅವರನ್ನು ನೇಮಿಸಿ ಆದೇಶಿಸಲಾಗಿತ್ತು.
ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು,ಹಿಂದೂ ಸಂಘಟನೆಗಳೇ ವಿರೋಧ ವ್ಯಕ್ತಪಡಿಸಿವೆ.ಜಿಲ್ಲೆಯಲ್ಲಿ ನಡೆದ ಹಿಂದೂ ಯುವಕರ ಹತ್ಯೆ ಪ್ರಕರಣಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ದಕ್ಷ ಎನಿಸಿಕೊಂಡ ಸೋನಾವಣೆಯಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಅಲ್ಲದೇ ಅವರ ಸ್ಥಾನಕ್ಕೆ ಭ್ರಷ್ಟ ಅಧಿಕಾರಿಯನ್ನು ನೇಮಿಸಿರುವುದು ಆಕ್ರೋಶಕ್ಕೆ ಮೂಲ ಕಾರಣವಾಗಿದೆ ಎನ್ನಲಾಗಿದೆ.
ಸದ್ಯ ಅಧಿಕಾರ ವಹಿಸಿಕೊಳ್ಳಲಿರುವ ಅಮಾತೆ ಈ ಮೊದಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು,ಕೆಲ ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಕುಖ್ಯಾತ ರೌಡಿಯೊಬ್ಬನ ಕೊಲೆ ಪ್ರಕರಣದಲ್ಲಿ ತನಗಿಂತ ಕೆಳ ಮಟ್ಟದ ಅಧಿಕಾರಿಯೊಂದಿಗೆ ಸೇರಿಕೊಂಡು 40 ಲಕ್ಷ ಹಣ ಪಡೆದು ಡೀಲ್ ಮಾಡಿದ್ದರು. ಇಂತಹ ಅಧಿಕಾರಿಯನ್ನು ಮತ್ತೊಮ್ಮೆ ಜಿಲ್ಲೆಗೆ ವರ್ಗಾಯಿಸಿದರೆ ಇನ್ನಷ್ಟು ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದಂತಾಗುತ್ತದೆ ಎನ್ನುವುದು ಹಿಂದೂ ಸಂಘಟನೆಗಳ ವಾದ.
ಕೂಡಲೇ ಆದೇಶವನ್ನು ತಡೆ ಹಿಡಿದು,ದಕ್ಷ ಅಧಿಕಾರಿಗಳನ್ನೇ ಕಂಡ ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹ ಹೆಚ್ಚಿದೆ.ಇಂತಹ ಮಾಹಿತಿ, ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದೂ, ರಾಜಕೀಯ ನಾಯಕರ ಬಳಿಗೂ ಮಾಹಿತಿ ಮುಟ್ಟಿದೆ ಎನ್ನಲಾಗುತ್ತಿದೆ.