ದ್ವಿಚಕ್ರ ವಾಹನಕ್ಕೆ ಸಡ್ಡು ಹೊಡೆಯಲು ಬಂದಿದೆ ಈ ಕಾರು | ಬೈಕ್ ಮರೆತು ಎಲ್ಲರೂ ಈ ವಾಹನ ಖರೀದಿ ಮಾಡೋಕೆ ಮನಸೋಲುವುದು ಖಂಡಿತ!

ಇತ್ತೀಚೆಗೆ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು ಜನರು ಹೊಸ ವಿನ್ಯಾಸದ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಹೌದು ಯಾಕೆಂದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ, ಹಣದುಬ್ಬರ ಈ ಎಲ್ಲಾ ಕಾರಣದಿಂದ ಇಲೆಕ್ಟ್ರಿಕ್ ವಾಹನ ನಿರ್ವಹಣೆ ಸುಲಭ ಎನ್ನುವ ಕಾರಣಕ್ಕಾಗಿ ಜನರು ಇಲೆಕ್ಟ್ರಿಕ್ ವಾಹನದ ಮೊರೆ ಹೋಗುತ್ತಿದ್ದಾರೆ.

ಸದ್ಯ ಇಸ್ರೇಲ್‌ನ ಸಿಟಿ ಟ್ರಾನ್ಸ್‌ಫಾರ್ಮರ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸ್ಟಾರ್ಟಪ್ ಮಿನಿ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಈ ಮಿನಿ ಎಲೆಕ್ಟ್ರಿಕ್ ಕಾರಿಗೆ CT-2 ಎಂದು ಹೆಸರಿಡಲಾಗಿದ್ದು ಈ ಕಾರನ್ನು ವಿಶೇಷವಾಗಿ ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸ ಗೊಳಿಸಲಾಗಿದೆ. ಸದ್ಯ ಈ ಕಾರ್ ಸಣ್ಣ ಗಾತ್ರ ಹೊಂದಿದ್ದು ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ.

ಇಸ್ರೇಲ್ ದೇಶದ ಇವಿ ಸ್ಟಾರ್ಟಪ್‌ವೊಂದು ಟಾಟಾದ ನ್ಯಾನೋಗಿಂತ ಚಿಕ್ಕದಾಗಿರುವ ಎಲೆಕ್ಟ್ರಿಕ್ ಕಾರೊಂದನ್ನು ತಯಾರು ಮಾಡಿದ್ದು 2024ರ ಅಂತ್ಯ ವೇಳೆಗೆ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದ್ದು ವಾರ್ಷಿಕ 15,000 ಯುನಿಟ್ ತಯಾರಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ದೊರೆತಿದೆ.

ಸದ್ಯ ಈ ಕಾರು ಒಂದೇ ಚಾರ್ಜಿನಲ್ಲಿ 180 ಕಿಲೋಮೀಟರ್ (112 ಮೈಲುಗಳು) ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದ್ದು, ಎಷ್ಟು ಚಿಕ್ಕದಾಗಿದೆ ಅಂದರೆ, 1 ಮೀಟರ್ (3.28 ಅಡಿ) ಅಗಲವಿದೆ. ಸುಮಾರು 450kg (0.5 ಟನ್ ) ತೂಕವಿರುವ ಈ ಕಾರು ಸಣ್ಣ ಪುಟ್ಟ ಬೀದಿಗಳಲ್ಲೂ ಸುಲಭವಾಗಿ ಸಂಚರಿಸಬಲ್ಲ ಸ್ಲಿಮ್ ಕಾರ್ ಆಗಿದೆ. ಸದ್ಯ ಟೆಸ್ಲಾ ಮಾಡೆಲ್ 3 ಕಾರಿಗಿಂತ ಚಿಕ್ಕದಾದ ಬ್ಯಾಟರಿಯನ್ನು ಪಡೆದಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಂದು ಕಾರಿನ ಪಾರ್ಕಿಂಗ್ ಸ್ಥಳದಲ್ಲಿ CT-2 ನಾಲ್ಕು ಕಾರನ್ನು ನಿಲ್ಲಿಸಬಹುದು ಎಂದು ಕಂಪನಿ ತಿಳಿಸಿದೆ.

ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಸಫ್ ಫಾರ್ಮೋಜಾ ಪ್ರಕಾರ ‘ಈ ಕಾರು, 16,000 ಯುರೋ (ಭಾರತದ ರೂಪಾಯಿಗಳಲ್ಲಿ ಸುಮಾರು ರೂ.13 ಲಕ್ಷ) ಬೆಲೆಯನ್ನು ಹೊಂದಿದ್ದು, ಈ ಚಿಕ್ಕ ಕಾರಿನ ಮೂಲಕ ನಮ್ಮ ಕಂಪನಿಯು ಉತ್ತಮ ಪ್ರಗತಿಯನ್ನು ಸಾಧಿಸಲಿದ್ದು, ನಾವು ಚಿಕ್ಕ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಈ ಕಾರು ಸದ್ಯ ಗಂಟೆಗೆ 90 ಕಿಲೋಮೀಟರ್ (56 ಮೈಲುಗಳು) ಟಾಪ್ ಸ್ವೀಡ್ ಹೊಂದಿದ್ದು . ಇಬ್ಬರು ವ್ಯಕ್ತಿಗಳು ಪುಟ್ಟ CT-2 ಎಲೆಕ್ಟ್ರಿಕ್ ಕಾರಿನಲ್ಲಿ ಸುಲಭವಾಗಿ ಪ್ರಯಾಣಿಸಬಹುದು. ಜೊತೆಗೆ ಇತರೆ ವಾಣಿಜ್ಯ ಚಟುವಟಿಕೆ ಉದ್ದೇಶಗಳಿಗೂ ಬಳಸಬಹುದಾಗಿದೆ. ಹೌದು ಈ ಮೇಲಿನ ಎಲ್ಲಾ ಅನುಕೂಲಗಳಿಂದಾಗಿ ಈ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುವ ಸಾಧ್ಯತೆಗಳಿವೆ ಎಂಬ ಭರವಸೆಯನ್ನು ಕಂಪನಿ ವ್ಯಕ್ತ ಪಡಿಸಿದೆ.

Leave A Reply

Your email address will not be published.