ಮಂಗಳೂರು ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆ | ಹೊಸ ಪಿಎಸ್‌ಐ ನಿಯೋಜನೆ !

ಮಂಗಳೂರು : ಚುನಾವಣೆ ಸನ್ಹಿತವಾದಂತೆ ಎಲ್ಲೆಂದರಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗುತ್ತದೆ. ಇದನ್ನು ಒಂದು ಸಂಪ್ರದಾಯವೇನೋ ಎಂಬಂತೆ ಸರ್ಕಾರಗಳ ರೂಢಿಸಿಕೊಂಡುಬಿಟ್ಟಿವೆ. ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿನ ಹಲವು ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಲಾಗಿದೆ. ಆ ಸ್ಥಾನಕ್ಕೆ ಹೊಸ ಪಿಎಸ್‌ಐ ನಿಯೋಜನೆ ಮಾಡಲಾಗಿದ್ದು, ಐಜಿಪಿ ಪಶ್ಚಿಮ ವಲಯ ವ್ಯಾಪ್ತಿಯ ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಎಸ್‌ಐಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಈ ಮೊದಲೇ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪಿಎಸ್‌ಐ ನಿಯೋಜನೆ ಕುರಿತು ಚರ್ಚೆ ನಡೆದಿದ್ದು, ಈ ವೇಳೆ ಪಿಎಸ್‌ಐ ನಿಯೋಜನೆ ನಡೆದಿದ್ದು, ಉಳ್ಳಾಲ ಕಂಕನಾಡಿ ಗ್ರಾಮಾಂತರ ಕೋಮು ಸೂಕ್ಷ್ಮ ಸ್ಥಿತಿಯುಳ್ಳ ಠಾಣೆಗಳಿಗೆ ಮಹಿಳಾ ಎಸ್‌ಐಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನುಳಿದ ಮಂಗಳೂರಿನ 20 ಠಾಣೆಗಳಲ್ಲಿ 9 ಠಾಣೆಗಳಿಗೆ ಮಹಿಳಾ ಪಿಎಸ್‌ಐಗಳನ್ನು ನಿಯೋಜಿಸಲಾಗಿದೆ.

ಬರ್ಕೆ ಪೊಲೀಸ್‌ ಠಾಣೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದ ಶುಭಕರ ಅವರನ್ನು ನಿಯೋಜಿಸಿದ್ದು, ಪಡುಬಿದ್ರಿ ಠಾಣೆಯಲ್ಲಿದ್ದ ಪ್ರಕಾಶ್ ಸಾಲಿಯಾನ್ ಅವರನ್ನು ಮಂಗಳೂರು ಸಂಚಾರ ಉತ್ತರ ಠಾಣೆಗೆ ಹಾಗೂ ಉರ್ವಾ ಠಾಣೆಗೆ ಶಂಕರನಾರಾಯಣ ಠಾಣೆಯಲ್ಲಿದ್ದ ಸುದರ್ಶನ್ ಬಿ.ಎನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಹಾಗೇ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಗೆ ಗೋಕರ್ಣ ಠಾಣೆಯ ಸುಧಾ ಟಿ ಅವರನ್ನು ನಿಯೋಜಿಸಿದ್ದು, ಅಘನಾಶಿನಿ ಪಣಂಬೂರು ಠಾಣೆಗೆ ಚಿತ್ತಾಕುಲ ಠಾಣೆಯ ಕಲ್ಪನಾ ಬಂಗ್ಗೆ ಕಂಕನಾಡಿ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಕೊಣಾಜೆ ಠಾಣೆಗೆ ಹೊನ್ನಾವರ ಠಾಣೆಯ ಗಣೇಶ್ ಎಚ್ ನಾಯಕ್ ಅವರನ್ನು ವರ್ಗಾಯಿಸಿದ್ದು, ಜೋಯಿಡಾದಲ್ಲಿದ್ದ ಮಹಿಳಾ ಅಧಿಕಾರಿಯಾದ ಮಹದೇವಿ ನಾಯ್ಕಡಿ ಅವರನ್ನು ಮಂಗಳೂರು ಗ್ರಾಮಾಂತರ ಠಾಣೆಗೆ ನಿಯೋಜಿಸಲಾಗಿದೆ. ಹಾಗೇ ಮಂಗಳೂರು ಗ್ರಾಮಾಂತರ ಠಾಣೆಗೆ ಶಿರಸಿ ಹೊಸ ಮಾರ್ಕೆಟ್ ಠಾಣೆಯ ಮಾಲಿನಿ ಹಂಸಭಾವಿ ಅವರನ್ನು ನೇಮಿಸಿದ್ದು, ಹೊನ್ನಾವರ ಸಂಚಾರಿ ಠಾಣೆಯ ಮಂಜೇಶ್ವರ್ ಚಂದಾವ‌ ಅವರನ್ನು ಉಳ್ಳಾಲ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಯಲ್ಲಾಪುರ ಠಾಣೆಯ ಶ್ಯಾಮ್ ಪಾವಸ್ಕರ್ ಅವರು ಮಂಗಳೂರು ಪೂರ್ವ ಅಂದ್ರೆ ಕದ್ರಿಗೆ ನೇಮಕವಾಗಿದ್ದಾರೆ. ಹಾಗೇ ಹೊನ್ನಾವರ ಠಾಣೆಯಲ್ಲಿದ್ದ ಸಾವಿತ್ರಿ ನಾಯಕ್ ಅವರನ್ನು ಮೂಡುಬಿದ್ರೆ ಠಾಣೆ ನಿಯೋಜಿಸಿದ್ದು, ತರೀಕೆರೆ ಠಾಣೆಯ ಚಂದ್ರಮ್ಮ ವೈಎನ್ ಮಂಗಳೂರು ಸಂಚಾರ ಉತ್ತರ ಠಾಣೆಗೆ ವರ್ಗಾವಣೆ ಆಗಿದ್ದಾರೆ. ಇನ್ನು ದಕ್ಷಿಣ ಠಾಣೆಗೆ ಎನ್‌ಆರ್ ಪುರ ಠಾಣೆಯ ಜ್ಯೋತಿ ಎನ್‌.ಎ ಅವರನ್ನು ನಿಯೋಜಿಸಿದ್ದು, ಪೂರ್ವ ಚಿಕ್ಕಮಗಳೂರು ನಗರ ಠಾಣೆಯ ಸತೀಶ್ ಕೆ.ಎಸ್. ಮಂಗಳೂರು ಸಂಚಾರಿ ಪಶ್ಚಿಮ ಠಾಣೆಗೆ ವರ್ಗಾವಣೆ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಪಂಚನಹಳ್ಳಿ ಠಾಣೆಯಲ್ಲಿದ್ದ ಲೇಡಿ ಪೋಲೀಸ್ ಲೀಲಾವತಿ ಆರ್. ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

Leave A Reply

Your email address will not be published.