ಪುರುಷರೇ ನಿಮ್ಮ ತ್ರಾಣ ಹೆಚ್ಚಿಸಲು ಸಹಕಾರಿ ಈ ಮಖಾನಾ!
ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್, ಕಬ್ಬಿಣ, ಸತು ಇತ್ಯಾದಿಗಳನ್ನು ಒಳಗೊಂಡ ಮಖಾನದ ಪ್ರಯೋಜನವನ್ನು ನೀವು ತಿಳಿದು ಕೊಳ್ಳಲೇ ಬೇಕು. ಹೌದು ಮಖಾನ ಎಂದು ಕರೆಯಲ್ಪಡುವ ಲೋಟಸ್ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದನ್ನು ಲೋಟಸ್ ಸೀಡ್, ಫಾಕ್ಸ್ ಕಾಯಿ, ಪ್ರಿಕ್ಲಿ ಲಿಲಿ, ತಾವರೆ ಬೀಜ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ, ಸಿಹಿತಿಂಡಿಗಳು, ಸ್ನ್ಯಾಕ್ಸ್ ಮತ್ತು ಪಾಯಸಗಳಲ್ಲಿಯೂ ಸಹ ಮಖಾನ ಬಳಸಲಾಗುತ್ತದೆ. ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಮನುಷ್ಯರಿಗೆ ಒದಗಿಸುವ ಕೆಲಸ ಮಖಾನ ಬೀಜಗಳದ್ದು. ಅದಲ್ಲದೆ ಚೀನಾ ದೇಶದಲ್ಲಿ ಇವುಗಳನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗ ಮಾಡುತ್ತಾರೆ.
ಮಖಾನಾವನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಅನೇಕರು ಇದನ್ನು ಹುರಿದು ತಿನ್ನುತ್ತಾರೆ. ಪುಡಿ ಮಾಡಿ ಕೂಡ ಸೇವಿಸಬಹುದು. ಪುರುಷರು ಮಖಾನದ ಸೇವನೆಯಿಂದ ಪಡೆಯುವ ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- ಮಖಾನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿರುವ ಕಾರಣ ಜೀರ್ಣ ಪ್ರಕ್ರಿಯೆಯಲ್ಲಿ ಇದು ಬಹಳಷ್ಟು ಸಹಾಯಕ ಆಗಿದೆ.
- ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆ ಎದುರಿಸುತ್ತಿರುವವರು ಸುಲಭವಾಗಿ ಮಖಾನ ಬೀಜಗಳನ್ನು ಸೇವಿಸಿ ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.
- ಚಪಾತಿ ತಿನ್ನಲು ಇಷ್ಟಪಡದವರು ಮಖಾನ ಬೀಜಗಳ ಮೇಲೆ ಅವಲಂಬಿತರಾಗಬಹುದು. ಏಕೆಂದರೆ ಮಖಾನ ಬೀಜಗಳು ಗ್ಲುಟೆನ್ ರಹಿತವಾಗಿದ್ದು, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಪುರುಷರಿಗೆ ಬೇಕಾದ ಪ್ರಮಾಣಕ್ಕೆ ತಕ್ಕಂತೆ ಹೊಂದಿವೆ.
- ಮಖಾನಾಗಳು ಯೋಗ್ಯ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ಮಖಾನಾ ಮತ್ತು ಹಾಲು ಎರಡೂ ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿವೆ. ಕ್ಯಾಲ್ಸಿಯಂ ಮೂಳೆಗಳಿಗೆ ಬಲವನ್ನು ನೀಡುತ್ತದೆ. ಆದ್ದರಿಂದ, ನಿಮಗೆ ಕೀಲುಗಳು ಅಥವಾ ಮೂಳೆಗಳಲ್ಲಿ ನೋವು ಇದ್ದರೆ, ಹಾಲಿನಲ್ಲಿ ನೆನೆಸಿದ ಮಖಾನಾವನ್ನು ತಿನ್ನಬಹುದು. ಮಖಾನ ಸೇವಿಸಿದರೆ ಎಲುಬುಗಳು ಸ್ಟ್ರಾಂಗ್ ಆಗುತ್ತವೆ. ಮೂಳೆಗಳಿಗೆ ಸಂಬಂಧಿಸಿದ ಯಾವುದೇ ರೋಗಗಳು ಬರುವುದಿಲ್ಲ.
- ಮಖಾನಾಗಳು ಹೆಚ್ಚಿನ ಥಯಾಮಿನ್ ಅಂಶವನ್ನು ಹೊಂದಿರುತ್ತವೆ.ಹೀಗಾಗಿ ಅವುಗಳ ಸೇವನೆಯು ನರಗಳ ಅರಿವಿನ ಕಾರ್ಯವನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
- ಮಾಖಾನೆ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡದ ಆರೋಗ್ಯವೂ ಸುಧಾರಿಸುತ್ತದೆ. ಇದಲ್ಲದೆ ಇದು ರಕ್ತ ಪರಿಚಲನೆಗೂ ಇದು ಒಳ್ಳೆಯದು.
- ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೂ ಇದು ಉತ್ತಮ. ಮಖಾನಾದಲ್ಲಿ ಅನಾರೋಗ್ಯಕರ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಇದು ತುಂಬಾ ಸಹಕಾರಿಯಾಗಿದೆ
- ವಿಶೇಷವಾಗಿ ಪುರುಷರು ಪ್ರತಿದಿನ ಹಾಲಿನಲ್ಲಿ ನೆನೆಸಿದ ಮಖಾನವನ್ನು ತಿನ್ನಬಹುದು. ಮಖಾನಾ ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಹಾಲಿನಲ್ಲಿ ನೆನೆಸಿದ ಮಖಾನಾವನ್ನು ಸೇವಿಸಿದರೆ, ಅದು ಚರ್ಮವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಹಾಲಿನಲ್ಲಿ ನೆನೆಸಿದ ಮಖಾನಾವನ್ನು ತಿನ್ನುವುದರಿಂದ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಬಹುದು. • ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಮಖಾನಾ ಸಹಾಯ ಮಾಡುತ್ತದೆ. ಹಾಲಿನಲ್ಲಿ ನೆನೆಸಿದ ಮಖಾನವನ್ನು ಪ್ರತಿದಿನ ಸೇವಿಸಿದರೆ ಶಕ್ತಿ ಬರುತ್ತದೆ. ಲೈಂಗಿಕ ತೃಪ್ತಿಗಾಗಿ ಪುರುಷರು ಮಖಾನಾವನ್ನು ಹಾಲಿನಲ್ಲಿ ನೆನೆಸಿ ಸೇವಿಸುವುದು ಉತ್ತಮ.
ಹೌದು ಪುರುಷರು ಮಖಾನವನ್ನು ಹಾಲಿನಲ್ಲಿ ನೆನೆಸಿ ತಿಂದರೆ ದುಪ್ಪಟ್ಟು ಲಾಭ ದೊರೆಯುತ್ತದೆ. ಮಖಾನಾ ಮತ್ತು ಹಾಲು ಎರಡರ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ.
ಅಲ್ಲದೆ ಯಾವುದೇ ರೂಪದಲ್ಲಿ ಮಖಾನಾ ಸೇವನೆ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದನ್ನು ನೀವು ಹಾಲಿನ ಜೊತೆಗೆ ಸೇವಿಸಿ ಅಥವಾ ಸ್ನ್ಯಾಕ್ ಜೊತೆಗೆ ಸೇವಿಸಿ. ಅಲ್ಲದೆ ನೀವು ತುಪ್ಪದಲ್ಲಿ ಹುರಿದು ಕೂಡ ಸೇವಿಸಬಹುದಾಗಿದೆ. ಒಟ್ಟಿನಲ್ಲಿ ಪುರುಷರಿಗೆ ಮಖಾನ ಸೇವನೆ ಬಹಳ ಪ್ರಯೋಜನಕಾರಿಯಾಗಿದೆ.