Good News : ಗ್ಯಾಸ್ ಸಿಲಿಂಡರ್ ‘ಸಬ್ಸಿಡಿ’ ಹೆಚ್ಚಳ – ಕೇಂದ್ರ ಸರಕಾರದ ಮಹತ್ವದ ನಿರ್ಧಾರ

ನೀವು ಕೂಡಾ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಜೊತೆ ಕನೆಕ್ಷನ್ ಹೊಂದಿದ್ದರೆ, ಈ ಭರ್ಜರಿ ಸಿಹಿಸುದ್ದಿ ನಿಮಗಾಗಿ. ದಿನಬಳಕೆ ವಸ್ತುಗಳ ಮೇಲೆ ಏರುತ್ತಿರುವ ದರದಿಂದಾಗಿ ಸುಸ್ತಾಗಿರುವ ಗ್ರಾಹಕರಿಗಾಗಿ ಈ ಶುಭ ಸುದ್ದಿ. ಇದೀಗ, ಸರ್ಕಾರವು ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಹೆಚ್ಚಳ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆಯು ಜನರಲ್ಲಿ ಸಾಕಷ್ಟು ಅಸಮಾಧಾನವನ್ನು ಉಂಟುಮಾಡಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಕುರಿತು ಬಜೆಟ್’ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಪ್ರಧಾನ ಮಂತ್ರಿ ಉಜ್ವಲ ಯೋಜನೆ”ಯಡಿ ಗ್ಯಾಸ್ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯೂ ಮುಂದುವರಿಯುವ ನಿರೀಕ್ಷೆ ಇದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಗೆ ಸುಮಾರು 5812 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಇದಲ್ಲದೇ ಈ ಯೋಜನೆಯಡಿ ವರ್ಷದಲ್ಲಿ 12 ಸಿಲಿಂಡರ್ಗಳಿಗೆ ರೂ.200 ಸಬ್ಸಿಡಿ ನೀಡಲಾಗುತ್ತದೆ.

ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ಲಭ್ಯವಿರುವ 12 ಗ್ಯಾಸ್ ಸಿಲಿಂಡರ್ಗಳಿಗೆ ಸಬ್ಸಿಡಿಯ ಸೌಲಭ್ಯವನ್ನು ಒದಗಿಸಿದೆ. ಮುಂದಿನ ಬಜೆಟ್ನಲ್ಲಿ ಎಲ್ಪಿಜಿ ಸಿಲಿಂಡರ್’ನ ಸಬ್ಸಿಡಿಗೆ 200 ರೂ. ಅನುದಾನವನ್ನೂ ಸೇರಿಸುವ ನಿರೀಕ್ಷೆ ಇದ್ದು, ಅದು ದೇಶದ ಕೋಟ್ಯಂತರ ಮಹಿಳೆಯರ ಪಾಲಿಗೆ ಆಶಾಕಿರಣವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಶೇ. 100 ಜನಸಂಖ್ಯೆಯನ್ನು ತಲುಪಲು ಈ ಯೋಜನೆಯನ್ನು ಮುಂದುವರಿಸಬೇಕೆಂದು ಸರ್ಕಾರವು ಉದ್ದೇಶಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಗ್ಯಾಸ್ ಸಿಲಿಂಡರ್ಗಳ ಬೆಲೆ ಗಗನಕ್ಕೇರುತ್ತಿದೆ. ಈ ನಿಟ್ಟಿನಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇ 2021ರಲ್ಲಿ 200 ರೂಪಾಯಿ ಅನುದಾನವನ್ನು ಘೋಷಿಸಿದೆ. ಇದರಿಂದ ಬಡವರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಆದ್ರೆ, ಈ ಯೋಜನೆಯು ಪ್ರತಿ ಹಣಕಾಸು ವರ್ಷಕ್ಕೆ 12 ಸಿಲಿಂಡರ್ಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಮೂಲಕ 9 ಕೋಟಿಗೂ ಹೆಚ್ಚು ಜನರು ಅನುಕೂಲವನ್ನು ಪಡೆದಿದ್ದಾರೆ.

ಸರ್ಕಾರವು 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಬಡವರ್ಗದ ಜನರಿಗಾಗಿ ಎಲ್ಪಿಜಿ ಗ್ಯಾಸ್ ಸಂಪರ್ಕಗಳನ್ನು ಒದಗಿಸಲಾಗುವುದು. ಇದಕ್ಕಾಗಿ ಅವರಿಗೆ ರೂ.1,600 ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ ಇದರ ಹೊರತಾಗಿ, ಉಚಿತ ರೀಫಿಲ್ ಮತ್ತು ಸ್ಟೌವನ್ನ ಒದಗಿಸುವ ಸೌಲಭ್ಯವು ಇದೆ.

Leave A Reply

Your email address will not be published.