ಮಹಿಳೆಯ 7 ಸವರನ್ ಚಿನ್ನಾಭರಣ ಕಳ್ಳತನ | ಪೊಲೀಸ್ ವೇಷ ಧರಿಸಿ ಕೈಚಳಕ ತೋರಿದ ಕರ್ನಾಟಕ ಗ್ಯಾಂಗ್ ಅರೆಸ್ಟ್ !!

ಕಳ್ಳರಿಗೆ ಕಳ್ಳತನ ಮಾಡ್ಬೇಕು ಅಂದ್ರೆ ಎಂತಾ ಉಪಾಯ ಕೂಡ ಥಟ್ ಅಂತ ಹೊಳೆಯುತ್ತೆ. ಅದರಲ್ಲೂ ಕಳ್ಳರ ಗ್ಯಾಂಗ್ ಅಂದ್ರೆ ದುಪ್ಪಟ್ಟು ಉಪಾಯಗಳಿರುತ್ತವೆ. ಇತ್ತೀಚೆಗೆ ಕಳ್ಳತನ, ಕೊಲೆ ಇಂತಹ ಪ್ರಕರಣಗಳು ಹೆಚ್ಚಾಗಿಯೇ ಕಂಡುಬರುತ್ತಿದೆ. ಇದೀಗ ಅಂತಹದೇ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಖತರ್ನಾಕ್ ಕಳ್ಳರು ಪೋಲಿಸರ ಅತಿಥಿಯಾಗಿದ್ದಾರೆ.

ಪೊಲೀಸ್​ ವೇಷ ಧರಿಸಿ ವೃದ್ಧೆಯೊಬ್ಬರ ಬಳಿ ಸುಮಾರು 7 ಸವರನ್​ ಚಿನ್ನ ದೋಚಿರುವ ಘಟನೆ ನಡೆದಿದ್ದು, ನಾಲ್ವರು ದರೋಡೆಕೋರರನ್ನು ಕೇರಳ ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳು ಕರ್ನಾಟಕದ ಭಟ್ಕಳ ಮೂಲದವರು ಎಂದು ತಿಳಿದುಬಂದಿದೆ. ಇದರ ಹಿಂದಿರುವ ಇನ್ನಷ್ಟು ಮಂದಿಗಾಗಿ ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.

ಜನವರಿ 16 ರಂದು ಎರ್ನಾಕುಲಂನ ದಕ್ಷಿಣ ಮೇಲ್ಸೇತುವೆಯ ಬಳಿ ಈ ಗ್ಯಾಂಗ್​, ವೃದ್ಧೆಯನ್ನು ತಡೆದು, ಹೆದರಿಸಿ ಆಕೆಯ ಬಳಿಯಿದ್ದ ವಸ್ತುಗಳನ್ನು ಮತ್ತು 7 ಸವರನ್​ ಚಿನ್ನವನ್ನು ದೋಚಿದ್ದರು. ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಈ ನಾಲ್ವರು ಖದೀಮರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು. ಪೊಲೀಸ್ ವೇಷ ಧರಿಸಿ, ವೃದ್ಧೆಯ ಬಳಿ 7 ಸವರನ್ ಚಿನ್ನ ದೋಚಿದ್ದರು.

ಈ ವೇಳೆ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದ ಸಂತ್ರಸ್ತ ಮಹಿಳೆ ಗ್ಯಾಂಗ್ ನಲ್ಲಿದ್ದು ವ್ಯಕ್ತಿಗಳು ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆಕೆ ಒದಗಿಸಿದ ಮೊಬೈಲ್ ಟವರ್ ಲೊಕೇಶನ್ ಮೂಲಕ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಲಾಗಿದ್ದು, ತನಿಖೆ ನಡೆಸಿದಾಗ, ಈ​ ಖತರ್ನಾಕ್ ಗ್ಯಾಂಗ್​ ಕೇರಳವನ್ನು ಹೆಚ್ಚು ಟಾರ್ಗೆಟ್ ಮಾಡಿದ್ದು, ಈ ಮೊದಲು ಇಂತಹ ಹಲವು ಕೃತ್ಯಗಳನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.