Hair Care Tips: ಈ 5 ಪ್ರಮುಖ ವಿಷಯಗಳನ್ನು ಕ್ಷೌರ ಮಾಡುವ ಮೊದಲು ತಿಳಿದುಕೊಳ್ಳಿ | ಇಲ್ಲದಿದ್ದರೆ ನಿಮ್ಮ ತಲೆ ಬೋಳಾಗುವ ಸಾಧ್ಯತೆ ಹೆಚ್ಚು!!!

ಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್‌ಸ್ಟೈಲ್‌ನ ಸಲುವಾಗಿ ಹೇರ್‌ಕಟ್ಟಿಂಗ್ ಮಾಡಿಸುತ್ತಾರೆ. ಆದರೆ, ಕೆಲವೊಂದು ವರ್ಗದ ಜನರಿರುತ್ತಾರೆ. ತಮ್ಮ ಕೂದಲಿಗೆ ತಾವೇ ಕತ್ತರಿ ಹಾಕಿಕೊಳ್ಳುವವರು. ಮುಖ್ಯವಾಗಿ ಪುರುಷರು. ಇನ್ನು ಕೆಲ ಮಹಿಳಾಮಣಿಗಳು ಮನಿ ಉಳಿತಾಯ ಮಾಡಲು ಮನೆಯಲ್ಲೆ ಕೂದಲನ್ನು ಕತ್ತರಿಸುತ್ತಾರೆ. ಆದರೆ, ಮನೆಯಲ್ಲೇ ಕೂದಲು ಕಟ್ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲವಾದರೆ ನಿಮ್ಮ ಹೇರ್’ಸ್ಟೈಲ್ ಹಾಳಾಗುವುದರ ಜೊತೆಗೆ ತಲೆ ಬೋಳಾಗಬಹುದು ಎಚ್ಚರ!!! ಹಾಗಾಗಿ ಕ್ಷೌರ ಮಾಡುವ ಮೊದಲು ಈ ಕ್ರಮಗಳನ್ನು ಅನುಸರಿಸಿರಿ.

ಕೆಲವೊಮ್ಮೆ ಕೂದಲು ಕತ್ತರಿಸುವಾಗ ಯಾವುದೇ ತೊಂದರೆಯಾಗುವುದಿಲ್ಲವಾದರೂ, ಕೆಲವು ತಪ್ಪುಗಳಿಂದ ಹೇರ್ ಸ್ಟೈಲ್ ಹಾಳಾಗುತ್ತದೆ. ಇದಲ್ಲದೇ ಮನೆಯಲ್ಲಿ ಕೂದಲು ಕತ್ತರಿಸುವಾಗ ಸ್ವಲ್ಪ ಜಾಗ್ರತೆ ವಹಿಸಬೇಕು ಇಲ್ಲವಾದಲ್ಲಿ ಕೂದಲಿನ ಆರೋಗ್ಯ ಹದಗೆಡಬಹುದು.

ನೀವು ಕೂದಲನ್ನು ಕತ್ತರಿಸಬೇಕೆಂಬ ಯೋಚನೆಯಲ್ಲಿದ್ದರೆ, ಕೂದಲು ಕೊಳಕಾಗಿ ಉಳಿದಿದ್ದರೆ ಕೂದಲು ಹಾಳಾಗುತ್ತದೆ. ಹೀಗಾಗಿ ನಿಮ್ಮ ಕೂದಲನ್ನು ಉತ್ತಮ ಶಾಂಪೂ ಮತ್ತು ಕಂಡಿಷನರ್ ಬಳಸಿ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಕೂದಲನ್ನು ತೊಳೆದ ನಂತರ, ಅದನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಿರಿ. ನೈಸರ್ಗಿಕ ರೀತಿಯಲ್ಲಿ ಕೂದಲನ್ನು ಒಣಗಿಸುವುದು ಕೂದಲ ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಡ್ರೈಯರ್ ಅನ್ನು ಬಳಸಬೇಡಿ. ಡ್ರೈಯರ್’ಗಳು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತವೆ, ಇದರಿಂದಾಗಿ ಕೂದಲು ಉದುರುವಿಕೆಯ ಸಮಸ್ಯೆಯು ಪ್ರಾರಂಭವಾಗಬಹುದು.

ಕೂದಲನ್ನು ಕತ್ತರಿಸ ಬೇಕಾದರೆ ಕತ್ತರಿ ಮುಖ್ಯ ಸಾಧನ. ಹಾಗಾಗಿ ಸರಿಯಾದ ಕತ್ತರಿಗಳನ್ನು ಬಳಸುವುದು ಬಹಳ ಅಗತ್ಯ. ಕಡಿಮೆ ಅಂಚುಗಳಿರುವ ಕತ್ತರಿಗಳನ್ನು ಬಳಸಬೇಡಿ, ಬದಲಾಗಿ ಚೂಪಾದ ಕತ್ತರಿಗಳನ್ನು ಮಾತ್ರ ಬಳಸಿರಿ. ಯಾವಾಗಲೂ ಅಗತ್ಯವಿರುವ ಉದ್ದದ ಕೂದಲನ್ನು ಕತ್ತರಿಸಬೇಕು. ನೀವು ಹೆಚ್ಚು ಕ್ರಿಯೇಟಿವಿಟಿ ಟ್ರೈ ಮಾಡಲು ಹೋದರೆ ನಿಮ್ಮ ಕೂದಲಿನ ಶೈಲಿಯು ಹಾಳಾಗಬಹುದು. ಒಮ್ಮೆ ಕೂದಲನ್ನು ಕತ್ತರಿಸುವಾಗ ತಪ್ಪಾಗಿ ಚಿಕ್ಕದಾಗಿದ್ದರೆ, ಅವುಗಳನ್ನು ಮತ್ತೆ ಆಕಾರಕ್ಕೆ ತರಲು ಸ್ವಲ್ಪ ಕಷ್ಟವಾಗುತ್ತದೆ.

ಕ್ಷೌರ ಮಾಡುವ ಮೊದಲು, ಅನೇಕ ಜನರು ಕೂದಲಿಗೆ ಹೆಚ್ಚು ನೀರು ಹಾಕುತ್ತಾರೆ, ಇದರಿಂದಾಗಿ ಕೂದಲು ಸರಿಯಾಗಿ ಕತ್ತರಿಸುವುದಿಲ್ಲ. ಆದ್ದರಿಂದ ಮುಂದಿನ ಬಾರಿ ನೀವು ಮನೆಯಲ್ಲಿ ಕೂದಲು ಕತ್ತರಿಸಲು ಯೋಚಿಸಿದಾಗ, ಹೆಚ್ಚು ನೀರನ್ನು ಬಳಸಬೇಡಿ. ಈ ಮೇಲಿನ ಕ್ರಮವನ್ನು ಅನುಸರಿಸುವುದರಿಂದ ನಿಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ನೀವು ಸುಲಭವಾಗಿ ಹಾಗೂ ಸುರಕ್ಷಿತವಾಗಿ ಮನೆಯಲ್ಲೇ ಕ್ಷೌರ ಮಾಡಬಹುದು.

Leave A Reply

Your email address will not be published.