7 ಸೀಟರ್ ನ ಈ ಕಾರಿಗೆ ಜನ ಹಾತೊರೆಯುತ್ತಿರಲು ಕಾರಣವೇನು? ಇಲ್ಲಿದೆ ಇಂಟೆರೆಸ್ಟಿಂಗ್ ವಿಷಯ!
ಸದ್ಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕಾರುಗಳು ಉತ್ತಮ ವಿನ್ಯಾಸ, ಫೀಚರ್ ನೊಂದಿಗೆ ಪೈಪೋಟಿಗೆ ನಿಂತಿವೆ. ಅದರಲ್ಲಿ ಈ ಕಾರುಗಳು ಗ್ರಾಹಕರ ಫೆವರಿಟ್ ಲಿಸ್ಟ್ ನಲ್ಲಿದೆ. ಇದನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಹಾಗಾದ್ರೆ ಈ ಕಾರಿನಲ್ಲಿ ಅಂತಹ ವಿಶೇಷತೆ ಏನಿದೆ? ನೋಡೋಣ.
ಭಾರತದಲ್ಲಿನ ಗ್ರಾಹಕರಿಗೆ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಮತ್ತು ನಾನ್ ಹೈಬ್ರಿಡ್ ರೂಪಾಂತರಗಳ ಡೆಲಿವೆರಿಯನ್ನು ಪ್ರಾರಂಭಿಸಿದ್ದು, ಇಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಇದ್ದು, ಈ ಆಧಾರದ ಮೇಲೆ ವಿತರಣೆ ಆರಂಭವಾಗಿದೆ. ಈವರೆಗೆ ಇದರ ಹೈಬ್ರಿಡ್ ಆವೃತ್ತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ ಮಾಡಲಾಗಿದ್ದು, ಅದರ ನಾನ್ ಹೈಬ್ರಿಡ್ ರೂಪಾಂತರಗಳಲ್ಲಿ ಸುಮಾರು 10 ತಿಂಗಳ ವೈಟಿಂಗ್ ಪೀರಿಯೇಡ್ ಇದ್ದರೆ, ಟಾಪ್ ವೆರಿಯೇಂಟ್ ನಲ್ಲಿ ಸುಮಾರು ಒಂದು ವರ್ಷದ ವೈಟಿಂಗ್ ಪೀರಿಯೇಡ್ ಇದೆ ಎಂದು ವರದಿ ತಿಳಿಸಿದೆ.
ಈ ಕಾರನ್ನು ನೀವು 50,000 ಟೋಕನ್ ಹಣವನ್ನು ಪಾವತಿಸಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಂದ್ರೆ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು. ಬೇಸ್ ಪೆಟ್ರೋಲ್ ರೂಪಾಂತರದ ಬೆಲೆ 18.30 ಲಕ್ಷದಿಂದ ಆರಂಭವಾಗಲಿದ್ದು, ಟಾಪ್-ಸ್ಪೆಕ್ ಸ್ಟ್ರಾಂಗ್ ಹೈಬ್ರಿಡ್ ರೂಪಾಂತರ 28.97 ಲಕ್ಷದವರೆಗೆ ಏರಿಕೆಯಾಗಲಿದೆ. ಈ ಕಾರು ಒಟ್ಟು 5 ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. G,GX,VX,ZX ಮತ್ತು ZX(O).7 ಬಣ್ಣಗಳ ಆಯ್ಕೆಗಳಲ್ಲಿ ಈ ಕಾರನ್ನು ಪರಿಚಯಿಸಲಾಗಿದ್ದು, ಇದು ಮೊನೊಕಾಕ್ ಫ್ರಂಟ್-ವೀಲ್-ಡ್ರೈವ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇನ್ನು ಈ ಕಾರಿನ ಉದ್ದ 4755mm, ಅಗಲ 1845mm ಮತ್ತು ಎತ್ತರ 1785mm ಇದೆ. ಇದರ ವ್ಹೀಲ್ ಬೇಸ್ 2850 ಎಂಎಂ. ಆಗಿದೆ.
ಇದರ ವೈಶಿಷ್ಟ್ಯದ ಬಗ್ಗೆ ಹೇಳೋದಾದ್ರೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಪ್ರಿ-ಕೊಲಿಜನ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ನೀಡುವ ADAS ಅನ್ನು ಪಡೆಯುತ್ತದೆ. ಅಲ್ಲದೆ, ಈ ಕಾರು 6 ಏರ್‌ಬ್ಯಾಗ್, ಟ್ರಾಕ್ಶನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು EBD ಜೊತೆಗೆ ABS ನಂತಹ ವೈಶಿಷ್ಟ್ಯಗಳನ್ನು ಕೂಡಾ ಒಳಗೊಂಡಿದೆ.
ಈ ಕಾರು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 2.0-ಲೀಟರ್ NA ಪೆಟ್ರೋಲ್ ಮತ್ತು 2.0-ಲೀಟರ್ TNGA ಪೆಟ್ರೋಲ್ (ಹೈಬ್ರಿಡ್) ಇದ್ದು, ಇವುಗಳು CVT ಗೇರ್‌ಬಾಕ್ಸ್ ಮತ್ತು ಇ-ಡ್ರೈವ್ ಟ್ರಾನ್ಸ್‌ಮಿಷನ್ (ಹೈಬ್ರಿಡ್‌ನಲ್ಲಿ) ನೊಂದಿಗೆ ಬರುತ್ತದೆ. ಇದರ ಸ್ಟ್ರಾಂಗ್ ಹೈಬ್ರಿಡ್ ಮಾದರಿ 21.1 kmpl ಮೈಲೇಜ್ ನೀಡಲಿದೆ. ಸದ್ಯ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.