ಬಂದೇ ಬಿಡ್ತು ನೋಡಿ ದೇಶದ ಅತೀ ಕಡಿಮೆ ಬೆಲೆಯ ಕಾರು !
ಹೊಸ ವರ್ಷದಲ್ಲಿ ಈಗಾಗಲೇ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕಾರು ತಯಾರಕ ಕಂಪನಿಗಳು ನವ ನವೀನ ಮಾಡೆಲ್’ನ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಇದೀಗ ಭಾರತದ ಜನಪ್ರಿಯ, ಕೈಗೆಟುಕುವ ಬೆಲೆ ಹಾಗೂ ನಿರ್ವಹಣೆ ವೆಚ್ಚ ಕಡಿಮೆಯಿರುವ ಕಾರನ್ನು ಬಿಡುಗಡೆ ಮಾಡುವ ಖ್ಯಾತಿ ಪಡೆದಿರುವ, ಜಪಾನಿನ ಮೂಲದ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯು ತನ್ನ ಗ್ರಾಹಕರಿಗೆ, 2030ರ ಅಂತ್ಯದ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ 6 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಕಂಪನಿಯು ಬಿಡುಗಡೆ ಮಾಡಲಿರುವ ನ್ಯೂ ಮಾಡೆಲ್ ಕಾರುಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಸುಜುಕಿ FY ಕಂಪನಿಯು ಈಗಾಗಲೇ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಟೀಸರ್’ನಲ್ಲಿ ಜಿಮ್ನಿ ಮತ್ತು ಫ್ರಾಂಕ್ಸ್ ಶೈಲಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದಲ್ಲದೆ, ಮಾರುತಿ ವ್ಯಾಗನರ್ ಎಲೆಕ್ಟ್ರಿಕ್ ಆವೃತ್ತಿಯೂ ಬರಲಿದೆಎಂದು ಖಚಿತಪಡಿಸುತ್ತಿದೆ.
ಮಾರುತಿ ಸುಜುಕಿಯು 2018 ರಿಂದ ಭಾರತೀಯ ರಸ್ತೆಗಳಲ್ಲಿ ಆಲ್-ಎಲೆಕ್ಟ್ರಿಕ್ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಅನ್ನು ಪರೀಕ್ಷಿಸುತ್ತಿದೆಯಾದರೂ, ಇನ್ನು ಅದನ್ನು ಪ್ರಾರಂಭಿಸಲಾಗುವುದಿಲ್ಲ. ಬದಲಾಗಿ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಫೈಡ್ ಆವೃತ್ತಿಯನ್ನು ಅಂತಿಮವಾಗಿ ಪರಿಚಯಿಸಲಿದೆ. ಈ ಕಾರು ಬಿಡುಗಡೆಯಾದರೆ, ಇದು ಟಾಟಾ ಟಿಯಾಗೊ EV ಯ ಶೈಲಿಯಂತೆ ಕಾಣಲಿದೆ. ಇನ್ನು ಟಾಟಾ ಟಿಯಾಗೊ EVಯು ಪ್ರಸ್ತುತ ದೇಶದಲ್ಲಿರುವ ಅಗ್ಗದ ಎಲೆಕ್ಟ್ರಿಕ್ ಕಾರಾಗಲಿದೆ.
Tiago EV ಯ ಎಕ್ಸ್ ಶೋ ರೂಂ ನಲ್ಲಿ ಆರಂಭಿಕ ಬೆಲೆಯು ರೂ 8.49 ಲಕ್ಷ ರೂ. ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆ ಕೂಡ ಇದರ ಆಸುಪಾಸಿನಲ್ಲಿದೆ. ವ್ಯಾಗನ್‌ಆರ್‌ನ ಎಲೆಕ್ಟ್ರಿಕ್ ಆವೃತ್ತಿಯು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯಿರುವ ಸಾಧ್ಯತೆಯಿದೆ. ವಾಸ್ತವವಾಗಿ, ಮಾರುತಿ ಸುಜುಕಿ ಟೊಯೊಟಾ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದ ಬ್ಯಾಟರಿಗಳನ್ನು ಉತ್ಪಾದಿಸಲು, ಬ್ಯಾಟರಿ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ಕಾರಿನ ಬೆಲೆಯು ಕಡಿಮೆಯಾಗುವ ಸಾಧ್ಯತೆಯಿದೆ. ವ್ಯಾಗನ್ಆರ್’ನ ಎಲೆಕ್ಟ್ರಿಕ್ ಆವೃತ್ತಿಯು ಸುಮಾರು 300 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು 2024-25 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದು ಟೊಯೋಟಾದ 27PL ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ EV ಮಾರುತಿ ಸುಜುಕಿ EVX ಎಲೆಕ್ಟ್ರಿಕ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, ಇದನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ.