ಕೊನೆಗೂ ತನ್ನ ಮಗಳ ಮುಖ ತೋರಿಸಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ !

ಬಾಲಿವುಡ್‌ನಲ್ಲಿ ಅನೇಕ ಮಂದಿ ತಮ್ಮ ಮಕ್ಕಳ ಮುಖ ತೋರಿಸಲು ಇಷ್ಟ ಪಡುವುದಿಲ್ಲ. ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದು ಮಗುವಿನ ಫೋಟೋಗೆ ಯಾವುದೇ ಇಮೋಜಿ ಹಾಕಿ ಬಿಡ್ತಾರೆ. ಅಂತವರ ಪಾಲಿಗೆ ಪ್ರಿಯಾಂಕಾ ಚೋಪ್ರಾ ಕೂಡಾ ಸೇರುತ್ತಾರೆ. ಪ್ರಿಯಾಂಕ ಚೋಪ್ರಾ ಸರೋಗೇಟೆಡ್ ಮದರ್ ಮೂಲಕ ಮಗುವನ್ನು ಪಡೆದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿಯವರೆಗೆ ತಮ್ಮ ಮಗುವಿನ ಮುಖ ರಿವೀಲ್ ಮಾಡದ ಬಾಲಿವುಡ್ ತಾರೆ ಈಗ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಭ ಒದಗಿ ಬಂದದ್ದು ಒಂದು ಕಾರ್ಯಕ್ರಮದಲ್ಲಿ.
ಪ್ರಿಯಾಂಕಾ ಚೋಪ್ರಾ ಜೋನಾಸ್ ತನ್ನ ಪುಟ್ಟ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. ನಿಕ್ ಜೋನಸ್ ಆಂಡ್ ಬ್ರದರ್ಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಾಗ ಪ್ರಿಯಾಂಕ ತನ್ನ ಗಂಡ ನಿಕ್ ಜೋನಸ್ ಅವರನ್ನು ಹುರಿದುಂಬಿಸುವ ಸಂದರ್ಭದಲ್ಲಿ ತಮ್ಮ ಮಗಳ ಮುಖವನ್ನು ಬಹಿರಂಗಪಡಿಸಿದ್ದಾರೆ. ಪ್ರಿಯಾಂಕಾ ಕೂಡ ತಮ್ಮ ಮಗಳ ಮುಖ ಕಾಣಿಸುವ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆದ ತಕ್ಷಣ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, ‘ಅರೇ ಬೇಬಿ ಕಾ ಫೇಸ್ ದಿಖಾ ದಿಯಾ’ ಎಂದು ಬರೆದರೆ, ಮತ್ತೊಬ್ಬರು, ‘ಅಭಿನಂದನೆಗಳು ನಿಕ್! ಹಾಗೆಯೇ ನಿಮ್ಮ ಮಗು ಮಾಲ್ತಿ ನಿಮ್ಮಿಬ್ಬರ ಪರ್ಫೆಕ್ಟ್ ಕಾಂಬಿನೇಶನ್!’ ಎಂದು ಕಮೆಂಟ್ ಮಾಡಿದ್ದಾರೆ.