PM Kisan : ರೈತರ ಗಮನಕ್ಕೆ, ಪಿಎಂ ಕಿಸಾನ್ ಹೊಸ ಅಪ್ಡೇಟ್ ಬಂದಿದೆ ನೋಡಿ !
ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ತುಂಬಾ ಸಹಕಾರಿಯಾಗಿದೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ ಅಧಿಕೃತ ಜಾಲತಾಣದಲ್ಲಿ ನಿಮಗಾಗಿ ಎರಡು ಹೊಸ ಆಯ್ಕೆಗಳನ್ನು ಸರ್ಕಾರವು ಪ್ರಾರಂಭಿಸಿದೆ. ಆ ಆಯ್ಕೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳಲು ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
ಪಿಎಂ ಕಿಸಾನ್ ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?
- ಈ-ಮಿತ್ರ
- ಈ-ಗ್ರಾಮಒನ್
- ಈ-ಗ್ರಾಮ ಗಳಲ್ಲಿ ಸಲ್ಲಿಸಬಹುದು.
ಹಾಗೇ ಈ ಮೂಲಕ ಈ ಯೋಜನೆ ಅಡಿಯಲ್ಲಿ ಈ-ಕೆವೈಸಿ ಮಾಡಬಹುದು. ಅಪ್ಲಿಕೇಶನ್ ಹಾಕಬಹುದು, ಅಪ್ಡೇಟ್ ಮಾಡಬಹುದು. ಜೊತೆಗೆ ಪೇಮೆಂಟ್ ಸ್ಟೇಟಸ್ ಕೂಡ ಚೆಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ.
ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?
https://pmkisan.gov.in/ ಈ ಲಿಂಕ್ ಗೆ ಭೇಟಿ ನೀಡಿ, ಅಲ್ಲಿ
ಪೇಮೆಂಟ್ಸ್ ಸಕ್ಸಸ್ ಎಂಬ ಆಯ್ಕೆ ಇರುತ್ತದೆ. ಅದರಲ್ಲಿ ವರ್ಷ(2022-23) ಸೆಲೆಕ್ಟ್ ಮಾಡಬೇಕು. ನಂತರ ಸದರಿ ಕಂತಿನ ಅನುದಾನದ ತಿಂಗಳುಗಳನ್ನು ಸೆಲೆಕ್ಟ್ ಮಾಡಬೇಕು. ಅಂದರೆ ಆಗಸ್ಟ್ – ನವೆಂಬರ್ ಎಂದು ಸೆಲೆಕ್ಟ್ ಮಾಡಬೇಕು. ಆಗ ಬೇರೆ ಸೈಟ್ ಓಪನ್ ಆಗಲಿದೆ, ಅದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಸಬ್ಮಿಟ್ ಎಂದು ಕೊಟ್ಟರೆ ಮುಗಿಯಿತು.
ನಂತರ ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಮಾಹಿತಿಗಳು ಲಭ್ಯವಾಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮಗೆ ಎಷ್ಟು ಕಂತಿನ ಅನುದಾನ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ. ಇದರಿಂದ ರೈತರಿಗೆ ಉಪಯುಕ್ತವಾಗಲಿದೆ. ಸುಲಭವಾಗಿ ಮಾಹಿತಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.