KSRTC ಕೋ-ಆಪ್​ ನೇಮಕಾತಿ- SDA, FDA ಹುದ್ದೆಗಳ ನೇಮಕಾತಿ | 10th ಪಾಸಾದವರೂ ಅರ್ಜಿ ಸಲ್ಲಿಸಲು ಅವಕಾಶ !

Share the Article

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಫೆ.07 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ :
ಸಿಬ್ಬಂದಿ ಮೇಲ್ವಿಚಾರಕರು: 2
ಲೆಕ್ಕಪತ್ರ ಮೇಲ್ವಿಚಾರಕ: 1
ಪ್ರಥಮ ದರ್ಜೆ ಸಹಾಯಕರು: 7
ದ್ವಿತೀಯ ದರ್ಜೆ ಸಹಾಯಕರು: 18
ಕಛೇರಿ ಸಹಾಯಕರು: 11
ಒಟ್ಟು ಹುದ್ದೆಗಳು: 39

ವೇತನ : ಸಿಬ್ಬಂದಿ ಮೇಲ್ವಿಚಾರಕರು: Rs.33450-62600.
ಲೆಕ್ಕಪತ್ರ ಮೇಲ್ವಿಚಾರಕ: Rs.33450-62600.
ಪ್ರಥಮ ದರ್ಜೆ ಸಹಾಯಕರು: Rs.27650 – 52650.
ದ್ವಿತೀಯ ದರ್ಜೆ ಸಹಾಯಕರು: Rs.21400-42000.
ಕಛೇರಿ ಸಹಾಯಕರು: Rs.18600-32,600.

ಮೇಲ್ಕಂಡ ವೇತನ ಜತೆಗೆ ಸಂಘದ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗಧಿಪಡಿಸುವ ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುವುದು.

ಉಳಿದಂತೆ ಈ ಹುದ್ದೆಗಳ ಬಗೆಗಿನ ಅರ್ಹತೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ. ಸಿಬ್ಬಂದಿ ಮೇಲ್ವಿಚಾರಕ / ಲೆಕ್ಕಪತ್ರ ಮೇಲ್ವಿಚಾರಕ / ಪ್ರಥಮ ದರ್ಜೆ ಸಹಾಯಕರು : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ಪಾಸ್ ಮಾಡಿರಬೇಕು. ಅಷ್ಟು ಮಾತ್ರವಲ್ಲದೇ, ಕಂಪ್ಯೂಟರ್ ಜ್ಞಾನದ ಅನುಭವವಿರಬೇಕು. ಜತೆಗೆ ಟ್ಯಾಲಿ ಕೋರ್ಸ್‌ನ ಮಾಡಿರಬೇಕು. ಮುಖ್ಯವಾಗಿ ಕನ್ನಡ ಓದಲು, ಬರೆಯಲು ಬರತಕ್ಕದ್ದು.

ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು.

ಕಛೇರಿ ಸಹಾಯಕರು : ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು. ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಓದಿರಬೇಕು.

ವಯೋಮಿತಿ :
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಕೆಟಗರಿ ಅಭ್ಯರ್ಥಿ ಆಗಿದ್ದಲ್ಲಿ ಗರಿಷ್ಠ 35 ವರ್ಷ ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಗೆ ಸೇರಿದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ವಿಧಾನ : ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.500 ನಗದು ಪಾವತಿಸಿ ಅರ್ಜಿ ಪಡೆದುಕೊಳ್ಳಬಹುದು. ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್‌.ರಸ್ತೆ, ಬೆಂಗಳೂರು-27 ಇಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದು. ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ, 07-02-2023 ರೊಳಗೆ ಇದೇ ಕಛೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿ, ಸ್ವೀಕೃತಿ ಪಡೆಯತಕ್ಕದ್ದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತದ ಅಧಿಕೃತ ವೆಬ್‌ಸೈಟ್‌ ವಿಳಾಸ : http://www.ksrtceccs.com/#/home

ಸಂಪರ್ಕ ವಿಳಾಸ : ಕೆ.ಎಸ್‌.ಆರ್‌.ಟಿ.ಸಿ ಕೇಂದ್ರ ಕಚೇರಿ, ಕೆ.ಹೆಚ್.ರಸ್ತೆ, ಬೆಂಗಳೂರು, ಪಿನ್ – 560027
ದೂರವಾಣಿ ಸಂಖ್ಯೆ : 080-22223421
ಇ-ಮೇಲ್ ವಿಳಾಸ : Ksrtceccs@yahoo.co.in

Leave A Reply

Your email address will not be published.