ಮಹಿಳೆಯರಲ್ಲಿ ಬೆಚ್ಚಗಿನ ಲೈಂಗಿಕ ಆಸೆಯನ್ನು ಬಡಿದೆಬ್ಬಿಸುವ ಹೊಚ್ಚಹೊಸ ಆಹಾರಗಳಿವು !
ಪತಿ ಪತ್ನಿಯರ ಭಾವನೆಗಳು, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುವುದು ಸಹಜ. ಅಷ್ಟೇ ಅಲ್ಲದೆ, ಅವರು ಸೇವಿಸುವ ಆಹಾರವು ಕೂಡಾ ಮಹಿಳೆಯರ ಲೈಂಗಿಕತೆಯನ್ನು ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಬಲ್ಲದು. ದೇಹಕ್ಕೆ ಪ್ರಾಥಮಿಕವಾಗಿ ಆಹಾರವೇ ತಾನೇ ಪ್ರಮುಖ ಇಂಧನ ? ಒಳ್ಳೆಯ ಆಹಾರ ಸೇವಿಸುವುದರಿಂದ ನಿಮ್ಮ ದೈಹಿಕ ಪರಿಸ್ಥಿತಿ, ಲೈಂಗಿಕ ಮನಸ್ಥಿತಿ ಸರಿಯಾಗುವುದಲ್ಲದೆ, ಕಾಮ ಬಯಕೆಯೂ ಪುಟಗೊಳ್ಳುತ್ತದೆ ಮತ್ತು ತೃಪ್ತ ಸಾಂಸಾರಿಕ ಜೀವನಕ್ಕೆ ಅದು ದಾರಿಯಾಗುತ್ತದೆ.
ಹೌದು, ಕೆಲವು ಸಂದರ್ಭಗಳಲ್ಲಿ ಪೋಷಕಾಂಶದ ಕೊರತೆ ಹಾಗೂ ವಿಶೇಷವಾಗಿ ಕಬ್ಬಿಣದ ಅಂಶದ ಕೊರತೆ ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಬಹಳವಾಗಿ ಕುಂಠಿತಗೊಳಿಸಬಹುದು. ಅಲ್ಲದೇ ಉದ್ವೇಗ ಹಾಗೂ ಮಾನಸಿಕ ಒತ್ತಡವೂ ಇದಕ್ಕೆ ಇನ್ನೊಂದು ಕಾರಣವಾಗಬಹುದು. ಈ ಎಲ್ಲಾ ಸಮಸ್ಯೆಗಳ ಪರಿಹಾರವಾಗಿ ನಿಮ್ಮ ಕಾಮಾಸಕ್ತಿಯನ್ನು ನೈಸರ್ಗಿಕವಾಗಿ ಉದ್ದೀಪನಗೊಳಿಸುವ ಕೆಲವು ಆಹಾರಗಳು ತಕ್ಷಣವೇ ಕುಸಿದಿದ್ದ ಕಾಮ ಆಸಕ್ತಿಯನ್ನು ಬಡಿದೆಬ್ಬಿಸಿ ಸ್ಪೈಸಿ ಲೈಂಗಿಕ ಜೀವನವನ್ನು ಆನಂದಿಸುವಂತೆ ಮಾಡಬಲ್ಲವು. ಅಂತಹ ಕೆಲವು ವಿಶೇಷ ಆಹಾರಗಳನ್ನು ಈ ಕೆಳಗೆ ತಿಳಿಸಲಾಗಿದೆ.
- ಹಸಿರು ಟೀ ಸೇವನೆಯಿಂದ ಲೈಂಗಿಕ ಜೀವನ ಉಲ್ಲಾಸಮಯವಾಗುವ ಜೊತೆಗೇ ಆರೋಗ್ಯವೂ ವೃದ್ಧಿಸುತ್ತದೆ. ಇದರಲ್ಲಿರುವ ಕ್ಯಾಟೆಚಿನ್ ಎಂಬ ಪೋಷಕಾಂಶ ಜನನಾಂಗಗಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ರಕ್ತನಾಳಗಳ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಆದರೆ ಹಸಿರು ಟೀ ಪ್ರಮಾಣ ದಿನಕ್ಕೆರಡು ಕಪ್ ಮೀರಬಾರದು, ಮೀರಿದರೆ ಇದರ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು.
- ಕೇಸರಿಯು ನಿಮ್ಮ ಸಂವೇದನಾ ಅಂಗಗಳಿಗೆ ಮಾತ್ರವಲ್ಲದೆ ನಿಮ್ಮ ಹೊಟ್ಟೆ ಮತ್ತು ಲೈಂಗಿಕ ಜೀವನಕ್ಕೆ ಸಂತೋಷವನ್ನು ನೀಡುತ್ತದೆ. ಗ್ವೆಲ್ಫ್ ವಿಶ್ವವಿದ್ಯಾಲಯದ ಸಂಶೋಧಕರು ಕೇಸರಿ ಲೈಂಗಿಕ ಕ್ರಿಯೆಯನ್ನು ವರ್ಧಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ಕೇಸರಿಯ ದಳಗಳನ್ನು 15 ನಿಮಿಷಗಳ ಕಾಲ ಕುದಿಯುವ ಹಾಲು ಅಥವಾ ನೀರಿನಲ್ಲಿ ನೆನೆಸಿಟ್ಟು ನಂತರ ಅದನ್ನು ಕುಡಿಯುವುದು ಉತ್ತಮ.
- ಪಾಲಕ್ ಮತ್ತು ಬಸಲೆ ಸೊಪ್ಪುಗಳಲ್ಲಿ ಕಬ್ಬಿಣ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ರಕ್ತದ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಅಂತೆಯೇ ಮಹಿಳೆಯರಲ್ಲಿ ಇದು ಜನನಾಂಗಗಳಿಗೆ ಹರಿಯುವ ರಕ್ತಪರಿಚಲನೆಯನ್ನು ಹೆಚ್ಚಿಸಿ ಹೆಚ್ಚಿನ ದ್ರವ್ಯತೆ ಹಾಗೂ ಲೈಂಗಿಕ ಕ್ರಿಯೆಯನ್ನು ಹೆಚ್ಚು ಖುಷಿಯಾಗಿರಿಸಲು ನೆರವಾಗುತ್ತದೆ.
- ಕಾಮಾಸಕ್ತಿಯನ್ನು ತಕ್ಷಣವೇ ಹೆಚ್ಚಿಸಲು ಒಂದು ಲೋಟ ಕೆಂಪು ವೈನ್ ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಆದರೆ ಈ ಪ್ರಮಾಣ ಒಂದು ಲೋಟಕ್ಕಿಂತ ಹೆಚ್ಚಾಗಬಾರದು. ಹೆಚ್ಚಾದರೆ ಇದರ ಪರಿಣಾಮ ವ್ಯತಿರಿಕ್ತವಾಗಬಹುದು. ಅಂದರೆ ಕಾಮಾಸಕ್ತಿ ಹೆಚ್ಚಿಸುವ ಬದಲು ಇದ್ದ ಕೊಂಚ ಕಾಮಾಸಕ್ತಿಯನ್ನೂ ಕುಗ್ಗಿಸಬಹುದು. ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತವೆ. ಇವು ರಕ್ತನಾಳಗಳನ್ನು ಸಡಿಲಿಸಿ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.
- ಮಹಿಳೆಯರಲ್ಲಿ ಕೆಲವೊಮ್ಮೆ ಕಾಮಾಸಕ್ತಿ ಕಡಿಮೆಯಾಗಲು ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಆದ್ದರಿಂದ ಕಬ್ಬಿಣದ ಅಂಶವನ್ನು ಹೆಚ್ಚಿಸುವ ಆಹಾರಗಳಾದ ಯಕೃತ್, ಕೆಂಪು ಮಾಂಸ, ಹಸಿರು ತರಕಾರಿ ಮೊದಲಾದವುಗಳನ್ನು ಸೇವಿಸಬೇಕು. ಇವುಗಳ ಸೇವನೆಯಿಂದ ಕಬ್ಬಿಣದ ಅಂಶದ ಕೊರತೆ ನೀಗುತ್ತದೆ. ಆದರೆ ಈ ಅಹಾರಗಳಲ್ಲಿರುವ ಕಬ್ಬಿಣವನ್ನು ದೇಹ ಹೀರಿಕೊಳ್ಳುವಂತಾಗಲು ಸಾಕಷ್ಟು ಮೊಸರನ್ನೂ ಪ್ರತಿಬಾರಿ ಸೇವಿಸಬೇಕು.
- ಲವಂಗವನ್ನು ನೀವು ಪುಲಾವ್, ಬಿರಿಯಾನಿ, ಅಥವಾ ಚಹಾಕ್ಕೂ ಸೇರಿಸಬಹುದು, ಇಲ್ಲವಾದರೆ ಹಾಗೆನೇ ಜಗಿಯಬಹುದು. ಲವಂಗವು ಬಾಯಿಯ ದುರ್ವಾಸನೆ, ಕೆಟ್ಟ ಉಸಿರಾಟವನ್ನು ಗುಣಪಡಿಸುವುದಲ್ಲದೆ ಕಾಮೋತ್ತೇಜಕವಾಗಿಯೂ ಕೆಲಸ ಮಾಡುತ್ತದೆ.
- ಸಾಲ್ಮನ್, ಬೂತಾಯಿ, ಬಂಗಡೆ, ಟ್ಯೂನಾ ಮೊದಲಾದ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹಾಗೂ ಮೀನಿನೆಣ್ಣೆ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವೆಲ್ಲವೂ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವನ್ನು ಹೆಚ್ಚಿಸುತ್ತವೆ. ಈ ರಾಸಾಯನಿಕ ನರಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ತನ್ಮೂಲಕ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.
- ಪೈನ್ ಒಣಫಲ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಕಾಮಾಸಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದರಲ್ಲಿರುವ ಸತು ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ಕಾಮಾಸಕ್ತಿಯ ಕೊರತೆ ಇದ್ದರೆ ಸತು ಹೆಚ್ಚಿನ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಬೇಕು.
- ಕಪ್ಪು ಚಾಕಲೇಟ್ ಸೇವಿಸಿ. ಹೌದು ಕಪ್ಪು ಚಾಕಲೇಟಿನಲ್ಲಿರುವ ಪ್ಲೇವನಾಯ್ಡುಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತವೆ. ಇದರ ಪರಿಣಾಮವಾಗಿ ಜನನಾಂಗಗಳಿಗೆ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಲೈಂಗಿಕ ಕ್ರಿಯೆಯನ್ನು ಆಹ್ಲಾದಕರವಾಗಿಸುತ್ತದೆ. ಅಷ್ಟೇ ಅಲ್ಲ, ಮಹಿಳೆಯರ ಸೊಂಟದ ಸುತ್ತ ತುಂಬಿರುವ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ ಹಾಗೂ ಇನಿಯನಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳಲೂ ನೆರವಾಗುತ್ತದೆ.
- ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸಲು, ನಿಮ್ಮ ಸಲಾಡ್‌ನಲ್ಲಿ ಅಥವಾ ನಿಮ್ಮ ಸಾಮಾನ್ಯ ಊಟದ ಪಕ್ಕದಲ್ಲಿ ಸ್ವಲ್ಪ ವಿಟಮಿನ್ ಸಿ-ಭರಿತ ಬ್ರೊಕೊಲಿಯನ್ನು ಸೇವಿಸಿ. ಇದನ್ನು ನೀವು ನಿಮಗೆ ಯಾವ ರೀತಿ ಇಷ್ಟವೋ ರೀತಿ ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಬ್ರೊಕೊಲಿಯು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮವಾದ ಆಹಾರವಾಗಿದೆ.
- ಕಾಮಸಕ್ತಿ ಹೆಚ್ಚಿಸುವಲ್ಲಿ ಅಂಜೂರ ಸಹ ಒಂದು. ಅಂಜೂರವನ್ನು ಉತ್ತಮ ಫೆರೋಮೋನ್ ಸ್ರವಿಸುವಿಕೆ ವರ್ಧಕಗಳು ಮತ್ತು ಫಲವತ್ತತೆ ವರ್ಧಕಗಳು ಎಂದು ಪರಿಗಣಿಸಲಾಗುತ್ತದೆ. ಕಾಮಾಸಕ್ತಿಯನ್ನು ಹೆಚ್ಚಿಸುವ ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳು ಅಂಜೂರದಲ್ಲಿ ಕಂಡುಬರುತ್ತವೆ.
- ಮೊಟ್ಟೆಯಲ್ಲಿ ವಿಟಮಿನ್ ಬಿ5 ಮತ್ತು ಬಿ6 ಹೇರಳವಾಗಿರುತ್ತದೆ. ಅವು ಹಾರ್ಮೋನ್ ಸಮತೋಲನ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಆರೋಗ್ಯಕರ ಕಾಮಾಸಕ್ತಿಗೆ ಅವಶ್ಯಕವಾಗಿದೆ. ಮೊಟ್ಟೆಗಳು ಫಲವತ್ತತೆಯನ್ನು ಪ್ರತಿನಿಧಿಸುತ್ತವೆ. ಲೈಂಗಿಕ ಕ್ರಿಯೆಗೆ ಮುಂಚೆಯೇ ಹಸಿ ಕೋಳಿ ಮೊಟ್ಟೆಗಳನ್ನು ತಿನ್ನುವುದು ಕಾಮ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಮೇಲಿನ ಆಹಾರಗಳು ಮಹಿಳೆಯರಲ್ಲಿ ಕುಸಿದಿದ್ದ ಕಾಮಾಸಕ್ತಿಯನ್ನು ತಕ್ಷಣವೇ ನೈಸರ್ಗಿಕವಾಗಿ ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಂದರವಾಗಿಸುತ್ತವೆ.