Brahmin Cookies: ಬಿಸ್ಕೆಟ್ ನಲ್ಲಿ ಬ್ರಾಹ್ಮಣರ ಚಿತ್ರ, ಏನಿದು ಹೊಸ ವಿವಾದ!
ಇತ್ತೀಚಿಗೆ ಜಾತಿ ಧರ್ಮಗಳ ಕುರಿತಾದ ವಿವಾದ ಪ್ರಕರಣಗಳು ಕೊನೆಯಿಲ್ಲದಂತೆ ಹೆಚ್ಚಾಗುತ್ತಲೇ ಇವೆ. ಸದಾ ಇವು ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಅದರಲ್ಲೂ ಈಗೀಗ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ ವಿರುದ್ಧ ಅನಾವಶ್ಯಕವಾಗಿ ಕೆಲವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಲವು ಚರ್ಚೆಗಳಾಗುತ್ತಿವೆ. ಇಂದು ಕೂಡ ಈ ‘ಬ್ರಾಹ್ಮಣ’ ರ ವಿಷಯ ಮುನ್ನಲೆಗೆ ಬಂದಿದ್ದು, ಈಗಾಗಲೇ ಜಾಲತಾಣಗಳೆಲ್ಲೆಡೆ ಬ್ರಾಹ್ಮಣರಿಗೆ ಅವಮಾನ ಮಾಡುತ್ತಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಲಿದೆ. ಆದ್ರೆ ಈ ರೀತಿ ಇದ್ದಕ್ಕಿದ್ದಂತೆ ಬ್ರಾಹ್ಮಣರ ವಿಚಾರ ಸುದ್ಧಿಯಾಗುತ್ತಿರುವುದು ಕೇವಲ ಒಂದು ಬಿಸ್ಕೆಟ್ ನಿಂದ ಅಂದರೆ ನಂಬುತ್ತೀರ? ಹೌದು, ಇದೀಗ ಬಿಸ್ಕೆಟೊಂದು ಬ್ರಾಹ್ಮಣರನ್ನು ಅವಮಾನಿಸುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಆ ಬಿಸ್ಕೆಟ್’ನಲ್ಲಿ ಏನಿದೆ ಗೊತ್ತಾ? ಈ ಬಿಸ್ಕೆಟ್ ಮಾಡಲು ಹೇಳಿದವರು ಯಾರೆಂಬುವುದು ನಿಮಗೆ ಗೊತ್ತಾದರೆ ಖಂಡಿತ ಅಚ್ಚರಿ ಪಡುತ್ತೀರಾ. ಹಾಗಾದ್ರೆ ಬನ್ನಿ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಇತ್ತೀಚೆಗೆ ಬೇಕಿಂಗ್ ಸ್ಟುಡಿಯೋವೊಂದು ಖಾಸಗಿ ಸಮಾರಂಭಕ್ಕಾಗಿ ಬ್ರಾಹ್ಮಣ ಬಿಸ್ಕೆಟ್ಗಳನ್ನು ತಯಾರಿಸಿದೆ. ಇದರ ಹೆಸರಲ್ಲೇ ಇರುವಂತೆ, ಆ ಕುಕ್ಕೀಗಳಲ್ಲಿ ಬ್ರಾಹ್ಮಣರು ಜನಿವಾರವನ್ನು ಧರಿಸಿರುವಂತೆ ಬಿಸ್ಕತ್ ಅನ್ನು ರಚಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಇದೇ ರೀತಿಯ ಕುಕ್ಕೀಗಳನ್ನು ತಯಾರಿಸುತ್ತಾರೆ ಎಂದು ಕಂಪನಿಯು ಹೇಳಿದೆ. ಈ ಬಿಸ್ಕೆಟ್ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ.
ಖಾಸಗಿ ಸಮಾರಂಭಕ್ಕೆ ಇವುಗಳನ್ನು ಸಿದ್ಧಪಡಿಸಿದ್ದರೂ ಕೂಡಾ ಇದು ನೇರವಾಗಿ ಜಾತಿಗೆ ಸಂಬಂಧಿಸಿದೆ ಎಂಬ ದೊಡ್ಡ ಗಲಾಟೆಯೇ ಎದ್ದಿತ್ತು. ಸೋಶಿಯಲ್ಸ್’ಗಳು ಟ್ವಿಟರ್ನಲ್ಲಿ ಟ್ವೀಟ್’ಗಳ ಸುರಿಮಳೆಯನ್ನೆ ಸುರಿಸಿದ್ದಾರೆ. ಒಬ್ಬ ಬಳಕೆದಾರನು “ಜಾತಿ ಪ್ರಾಬಲ್ಯವನ್ನು ತೋರಿಸಲು ಅವರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ” ಎಂದು ಆಕ್ಷೇಪಿಸಿದರೆ, ಮತ್ತೊಬ್ಬನು ” ನೋಡಲು ತೆನಾಲಿ ರಾಮಕೃಷ್ಣನಂತೆ ಕಾಣುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಬಿಸ್ಕೆಟ್ಗಳನ್ನು ತಯಾರಿಸಿದ ಬೇಕಿಂಗ್ ಸ್ಟುಡಿಯೋ ವಿರುದ್ಧ ಕೆಲವರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಜಾತಿಯನ್ನು ಮಧ್ಯೆ ತಂದು ದುಡ್ಡು ಮಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಆದರೆ, ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ಅದೇನಂದ್ರೆ, ಆಗಲೇ ತಿಳಿಸಿದಂತೆ ಬ್ರಾಹ್ಮಣ ಮಾದರಿಯ ಕುಕಿಯನ್ನು, ಬೇಕಿಂಗ್ ಸ್ಟುಡಿಯೋ ವಿಶೇಷ ಸಮಾರಂಭಗಳಿಗೆ ಮಾತ್ರ ತಯಾರಿಸುತ್ತಾರಂತೆ. ಈ ರೀತಿಯ ಬಿಸ್ಕೆಟ್ಗಳನ್ನು ಮಾಡುವಂತೆ ಹೇಳಿದ್ದು ಒಬ್ಬ ಬ್ರಾಹ್ಮಣರಂತೆ!! ಉಪನಯ ಕಾರ್ಯಕ್ರಮವಿದ್ದರಿಂದ ಈ ಮಾದರಿಯ ಬಿಸ್ಕೆಟ್’ಅನ್ನು ಸಿದ್ಧ ಪಡಿಸಲು ಹೇಳಿದ್ದಾರೆ. ಈ ರೀತಿ ಬ್ರಾಹ್ಮಣರೇ ಬಿಸ್ಕೆಟ್ ಮಾಡಿಸಿರುವುದರಿಂದ ಆಕ್ರೋಶವು ಮತ್ತಷ್ಟು ಬೆಳೆದು, ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಬ್ರಾಹ್ಮಣರ ವಿಷಯವಾಗಿ ಈಗಾಗಲೇ ಅನೇಕ ಚರ್ಚೆಗಳು ನಡೆಯುತ್ತಿದ್ದು, ಇದೀಗ ಬ್ರಾಹ್ಮಣ ಬಿಸ್ಕೆಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲಿದೆ. ಬ್ರಾಹ್ಮಣ ಬಿಸ್ಕೆಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ‘ಬ್ರಾಹ್ಮಣ ಬಿಸ್ಕೆಟ್’ ನ ಸವಿಯನ್ನು ಸವಿಯುತ್ತೀರಾ ಅಥವಾ ಪಕ್ಕಕ್ಕೆ ಸರಿಸಿ ಜಾತಿಯ ಬಗ್ಗೆ ಚಿಂತಿಸುತ್ತೀರಾ??