WhatsApp update: ಹೊಸ ಫೀಚರ್ ಪರಿಚಯಿಸಿದ ವಾಟ್ಸಪ್

ಜನಪ್ರಿಯ ಮೊಬೈಲ್​ ಅಪ್ಲಿಕೇಶನ್​ಗಳಲ್ಲಿ ವಾಟ್ಸಾಪ್​ ಕೂಡ ಒಂದು. ಇದೊಂದು ಬೆಸ್ಟ್ ಮೆಸೇಜಿಂಗ್ ಫ್ಲಾಟ್ ಫಾರ್ಮ್ ಎಂದೇ ಹೇಳಬಹುದು. ಇತ್ತೀಚೆಗೆ ತನ್ನ ಬಳಕೆದಾರರಿಗೆ ಸಾಕಷ್ಟು ಅಪ್​ಡೇಟ್​​ಗಳನ್ನು ನೀಡುತ್ತಲೇ ಬರುತ್ತಿದ್ದು, ಸದ್ಯ ವಾಟ್ಸಾಪ್ ಬಳಕೆದಾರರು ದೇಶದಲ್ಲಿ 500 ಮಿಲಿಯನ್​ಗೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೊಸ ಹೊಸ ಅಪ್ಡೇಟ್ಗಳ ಮೂಲಕ ಜನರನ್ನು ಸೆಳೆಯುತ್ತಿರುವ ಈ ಅಪ್ಲಿಕೇಶನ್ ಇದೀಗ ಐಮ್ಯಾಕ್​ ಬಳಕೆದಾರರಿಗಾಗಿ ಹೊಸದೊಂದು ಫೀಚರ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಆ ಹೊಸ ಫೀಚರ್ ಯಾವುದು? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

 

ಹಿಂದಿನ ವರ್ಷವೇ ಮೆಟಾವು ವಾಟ್ಸಾಪ್​ ಅನ್ನು ಮ್ಯಾಕ್​ ನಲ್ಲಿ ಅಭಿವೃದ್ಧಿ ಪಡಿಸುವ ಯೋಚನೆಯನ್ನು ನಿರ್ಧರಿಸಿತ್ತು.ಇದೀಗ ವಾಟ್ಸಾಪ್​ ಅನ್ನು ಮ್ಯಾಕ್​ನಲ್ಲಿ ಬಳಕೆ ಮಾಡಲು ಹೊಸ ಆ್ಯಪ್​ ಅನ್ನು ಪರಿಚಯಿಸಿದೆ. ಮ್ಯಾಕ್​ಓಎಸ್​ ಎಂಬ ಅಪ್ಲಿಕೇಶನ್​ ಆಗಿದ್ದು, ಈ ಮೂಲಕ ಸುಲಭವಾಗಿ ವಾಟ್ಸಾಪ್​ ಅನ್ನು ಮ್ಯಾಕ್​​ನಲ್ಲಿ ಬಳಸಬಹುದಾಗಿದೆ. ಮ್ಯಾಕ್‌ ಡಿವೈಸ್‌ಗಳನ್ನು ಬೆಂಬಲಿಸುವ ವಾಟ್ಸಾಪ್‌ ಮ್ಯಾಕ್‌ಒಎಸ್‌ ಅಪ್ಲಿಕೇಶನ್ ಅನ್ನು ವಾಟ್ಸಾಪ್‌ ನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಇದರ ಮೂಲಕ ನೀವು ಮ್ಯಾಕ್‌ನಲ್ಲಿ ವಾಟ್ಸಾಪ್‌ ಅನ್ನು ಸುಲಭದಲ್ಲಿ ಬಳಸಲು ಸಾಧ್ಯವಾಗಲಿದೆ. ಇದು ಹೊಸ ಯೂಸರ್‌ ಇಂಟರ್‌ಫೇಸ್‌ ಅನ್ನು ಹೊಂದಿದೆ. ಇದರಲ್ಲಿ ರಿಸರ್ವಡ್‌ ಅಪ್ಲಿಕೇಶನ್ ಸೈಡ್‌ಬಾರ್ ಅನ್ನು ಕಾಣಬಹುದಾಗಿದ್ದು, ಜೊತೆಗೆ ಡಿವೈಸ್‌ನಿಂದ ಚಾಟ್‌ಗಳಿಗೆ ಫೈಲ್‌ಗಳನ್ನು ಡ್ರ್ಯಾಗ್‌ ಮಾಡುವ ಮತ್ತು ಡ್ರಾಪ್‌ ಮಾಡುವ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ.

ಈ ಹಿಂದೆ ಮ್ಯಾಕ್​ ಡಿವೈಸ್​ಗಳಲ್ಲಿ ವಾಟ್ಸಾಪ್ ಅನ್ನು ಬಳಸಬೇಕಾದರೆ, ವಾಟ್ಸಾಪ್​​ ವೆಬ್​ ಆವೃತ್ತಿ ಮೂಲಕ ಮಾತ್ರ ಬಳಸಬಹುದಾಗಿತ್ತು. ಆದರೆ ಈ ವೆಬ್​ ಆವೃತ್ತಿ ಮೂಲಕ ಬಳಸುವುದು ಎಲ್ಲಾ ಬಳಕೆದಾರರಿಗೂ ಅಷ್ಟೊಂದು ಉತ್ತಮ ಅನುಭವವನ್ನು ನೀಡಿಲ್ಲ. ಇದನ್ನು ಅರಿತ ವಾಟ್ಸಾಪ್​ ಇದೀಗ ಮ್ಯಾಕ್ ಬಳಕೆದಾರರಿಗಾಗಿಯೇ ಮ್ಯಾಕ್​ಓಎಸ್​ ಎಂಬ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದು, ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಪ್ರಯತ್ನಿಸಿದೆ.

ಈ ಹಿಂದೆ ವೆಬ್​ ವರ್ಷನ್​ನಲ್ಲಿರುವ ಬಳಕೆ ಮಾಡುತ್ತಿರುವವರಿಗೆ ವಾಟ್ಸಾಪ್​ನಲ್ಲಿ ಬಂದ ಹೊಸ ಹೊಸ ಅಪ್ಡೇಟ್​​ಗಳು ಲಭ್ಯವಾಗುತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಹೊಸ ಅಪ್ಲಿಕೇಶನ್​ ಮೂಲಕ ವಾಟ್ಸಾಪ್​ನ ಎಲ್ಲಾ ಫೀಚರ್​​ಗಳನ್ನು ಪಡೆಯಬಹುದಾಗಿದೆ.

ಹಾಗೇ ವಾಟ್ಸಾಪ್ ಕೆಲ ದಿನಗಳ ಹಿಂದೆ ಮತ್ತೊಂದು ಫೀಚರ್ ಅನ್ನು ಪರಿಚಯಿಸಿದ್ದು, ಅದರ ಹೆಸರು ಫೋಟೋ ಶೇರಿಂಗ್ ಫೀಚರ್​ ಎಂದಾಗಿದೆ. ಇದರಿಂದ ವಾಟ್ಸಾಪ್​ ಬಳಕೆದಾರರು ಇನ್ನೊಬ್ಬರಿಗೆ ಫೋಟೋವನ್ನು ಶೇರ್ ಮಾಡುವಾಗ ಅದರ ಗುಣಮಟ್ಟ ಬದಲಾಗೋದಿಲ್ಲ. ಈ ಹಿಂದೆ ಫೋಟೋವನ್ನು ಇನ್ನೊಬ್ಬರಿಗೆ ಶೇರ್ ಮಾಡಬೇಕಾದರೆ ಅದರ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿತ್ತು. ಇನ್ಮುಂದೆ ಬಳಕೆದಾರರು ಯಾವುದೇ ಫೋಟೋವನ್ನು ಶೇರ್ ಮಾಡುವಾಗ ಅವರಿಗೆ ಬೇಕಾದ ಗುಣಮಟ್ಟವನ್ನು ಆಯ್ಕೆ ಮಾಡಬಹುದಾಗಿದೆ. ಇದಂತು ಬಳಕೆದಾರರಿಗೆ ಅನುಕೂಲಕರವಾಗಿದೆ.

Leave A Reply

Your email address will not be published.