ಐಫೋನ್ ಬಳಕೆದಾರರಿಗೆ ಅದ್ಭುತ ಫೀಚರ್ ಗಳು ಲಭ್ಯ | ವಾಟ್ಸಾಪ್ ಬಿಡುಗಡೆ ಮಾಡಿದೆ ಅಚ್ಚರಿಯ ಫೀಚರ್ !!
ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ವಾಟ್ಸಾಪ್ ಕೂಡ ಒಂದು. ಈ ಅಪ್ಲಿಕೇಶನ್ ಇತ್ತೀಚೆಗೆ ತನ್ನ ಬಳಕೆದಾರರಿಗೆ ಸಾಕಷ್ಟು ಅಪ್ಡೇಟ್ಗಳನ್ನು ನೀಡುತ್ತಲೇ ಬರುತ್ತಿದೆ. ಸದ್ಯ ವಾಟ್ಸಾಪ್ ಬಳಕೆದಾರರು ದೇಶದಲ್ಲಿ 500 ಮಿಲಿಯನ್ಗೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೊಸ ಹೊಸ ಅಪ್ಡೇಟ್ಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಇದೀಗ ವಾಟ್ಸಪ್ ತನ್ನ iphone ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಹಾಗಾದ್ರೆ ಆ ಹೊಸ ಫೀಚರ್ ಯಾವುದು? ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಈ ಫೀಚರ್ ನ ಹೆಸರು ಇನ್ ಆ್ಯಪ್ ಬ್ಯಾನರ್ ಎಂದಾಗಿದೆ. ಈ ಇನ್ ಆ್ಯಪ್ ಬ್ಯಾನರ್ ಮೂಲಕ ಐಓಎಸ್ ಬಳಕೆದಾರರು ಅನೌನ್ಸ್ಮೆಂಟ್ ವಾಟ್ಸಾಪ್ ಗ್ರೂಪ್ನಲ್ಲಿ ಬಂದ ಮೆಸೇಜ್ಗಳಿಗೆ ಎಮೋಜಿ ರಿಯಾಕ್ಷನ್ ಅನ್ನು ಮಾಡಬಹುದು. ಈ ಇನ್ ಆ್ಯಪ್ ಬ್ಯಾನರ್ ಫೀಚರ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ಈ ಫೀಚರ್ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಈ ಫೀಚರ್ ಅನ್ನು ಪಡೆಯಬೇಕಾದರೆ ಐಓಎಸ್ ಬಳಕೆದಾರರು ಆ್ಯಪ್ ಸ್ಟೋರ್ಗೆ ಭೇಟಿ ನೀಡಿ, ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕು. ನಂತರ ಇನ್ ಆ್ಯಪ್ ಬ್ಯಾನರ್ ಫೀಚರ್ ಐಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.
ವಾಟ್ಸಾಪ್ ಇತ್ತೀಚೆಗೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಸರ್ಚ್ ಬೈ ಡೇಟ್ ಎಂಬ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ಈ ಫೀಚರ್ ನಿಂದ ಯಾವುದೇ ಹಳೆಯ ಮೆಸೇಜ್ ಅನ್ನು ನೋಡ್ಬೇಕು ಅಂದ್ರೆ ನೀವು ಆ ದಿನದ ಚಾಟ್ ನ ದಿನಾಂಕವನ್ನು ನಮೂದಿಸಿದರೆ ಸಾಕು, ಹಳೆಯ ಮೆಸೇಜ್ ಬೇಗನೆ ಸಿಗುತ್ತದೆ. ಈ ಹಿಂದೆ ಯಾವುದೇ ಹಳೆಯ ಮೆಸೇಜ್ ಅನ್ನು ನೋಡ್ಬೇಕಾದ್ರೂ ಚಾಟ್ ಅನ್ನು ಸ್ಕ್ರಾಲ್ ಮಾಡಿ ನೋಡಬೇಕಿತ್ತು. ನಂತರದ ಈ ಸರ್ಚ್ ಬೈ ಡೇಟ್ ಫೀಚರ್ ನಿಂದ ಬಳಕೆದಾರರಿಗೆ ಅನುಕೂಲವಾಗಿದೆ.
ಹಾಗೇ ವಾಟ್ಸಾಪ್ ಮತ್ತೊಂದು ಫೀಚರ್ ಅನ್ನು ಪರಿಚಯಿಸಿದ್ದು, ಅದರ ಹೆಸರು ಫೋಟೋ ಶೇರಿಂಗ್ ಫೀಚರ್ ಎಂದಾಗಿದೆ. ಇದರಿಂದ ವಾಟ್ಸಾಪ್ ಬಳಕೆದಾರರು ಇನ್ನೊಬ್ಬರಿಗೆ ಫೋಟೋವನ್ನು ಶೇರ್ ಮಾಡುವಾಗ ಅದರ ಗುಣಮಟ್ಟ ಬದಲಾಗೋದಿಲ್ಲ. ಈ ಹಿಂದೆ ಫೋಟೋವನ್ನು ಇನ್ನೊಬ್ಬರಿಗೆ ಶೇರ್ ಮಾಡಬೇಕಾದರೆ ಅದರ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತಿತ್ತು. ಇನ್ಮುಂದೆ ಬಳಕೆದಾರರು ಯಾವುದೇ ಫೋಟೋವನ್ನು ಶೇರ್ ಮಾಡುವಾಗ ಅವರಿಗೆ ಬೇಕಾದ ಗುಣಮಟ್ಟವನ್ನು ಆಯ್ಕೆ ಮಾಡಬಹುದಾಗಿದೆ. ಇದಂತು ಬಳಕೆದಾರರಿಗೆ ಅನುಕೂಲಕರವಾಗಿದೆ.