ನೀವು ಅತಿಯಾಗಿ ಟೊಮೆಟೊ ತಿನ್ನುತ್ತೀರಾ? ಹಾಗಾದ್ರೆ ಇಂದೇ ನಿಲ್ಲಿಸಿ, ಇಲ್ಲವಾದ್ರೆ ಈ ಸಮಸ್ಯೆಗಳು ಎದುರಾಗುತ್ತೆ!!
ಸಾಮಾನ್ಯವಾಗಿ ಎಲ್ಲರ ಮನೆಗೂ ತರಕಾರಿಯ ಜೊತೆಗೆ ಟೊಮೆಟೊ ತಂದೇ ತರುತ್ತಾರೆ. ಟೊಮೆಟೊದಲ್ಲಿ ಹುಳಿ ಮತ್ತು ಸಿಹಿಯ ಮಿಶ್ರಣ ಇರುವುದರಿಂದ ಆಹಾರದ ರುಚಿಯೂ ಅದ್ಭುತವಾಗಿರುತ್ತದೆ. ಸರಿ ಸುಮಾರು ಎಲ್ಲಾ ಆಹಾರಗಳಲ್ಲೂ ಇದರ ಬಳಕೆ ಹೆಚ್ಚಾಗಿ ಇರುತ್ತದೆ. ಈ ಟೊಮೆಟೊ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ರಂಜಕ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ವಿಟಮಿನ್‌ಗಳಿವೆ. ಆದರೆ ಈ ಟೊಮೆಟೊವನ್ನು ಅತಿಯಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. ಹಾಗಾದ್ರೆ ಟೊಮೆಟೋ ತಿಂದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತೆ ಅಂತ ನೋಡೋಣ.
ಕಿಡ್ನಿ ಸ್ಟೋನ್‌ಗೆ ಕಾರಣ :
ಅತಿಯಾಗಿ ಟೊಮೆಟೊ ತಿನ್ನೋದ್ರಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಟೊಮೆಟೊಗಳಂತಹ ಆಮ್ಲೀಯ ಆಹಾರಗಳು ಮೂತ್ರಕೋಶಕ್ಕೆ ಹಾನಿ ಮಾಡುತ್ತದೆ. ಇದರಿಂದ ಮೂತ್ರದ ಅಸಂಯಮಕ್ಕೆ ಕಾರಣವಾಗಬಹುದು. ಟೊಮ್ಯಾಟೋಸ್ ಗಾಳಿಗುಳ್ಳೆಯ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಇದರಲ್ಲಿನ ಕ್ಯಾಲ್ಸಿಯಂ ಮತ್ತು ಒಕ್ಸಲೇಟ್‌ಗಳ ಪೋಷಕಾಂಶಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಈ ಪೋಷಕಾಂಶಗಳು ಸರಿಯಾಗಿ ಪಚನಗೊಳ್ಳದೆ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳಿದುಕೊಂಡು ಕಿಡ್ನಿ ಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅತಿಯಾಗಿ ಟೊಮೆಟೊ ಸೇವನೆ ಮಾಡದಿರುವುದೇ ಉತ್ತಮ.
ಚರ್ಮಕ್ಕೆ ಅಪಾಯಕಾರಿ :
ಟೊಮೆಟೊದಲ್ಲಿ ‘ ಹಿಸ್ಟಮೈನ್ ‘ ಎಂಬ ಅಂಶವು ಹೆಚ್ಚಾಗಿದ್ದು, ಇದು ಚರ್ಮದ ಮೇಲೆ ಅಲರ್ಜಿ ಮತ್ತು ಕಲೆಗಳನ್ನು ಉಂಟುಮಾಡುತ್ತದೆ. ಟೊಮೆಟೊದ ಅತಿಯಾದ ಸೇವನೆಯಿಂದ ಚರ್ಮದ ದದ್ದುಗಳು ಅಥವಾ ಅಲರ್ಜಿಗಳು ಉಂಟಾಗುವುದಲ್ಲದೆ, ಇದು ನಿಮ್ಮ ಬಾಯಿ, ನಾಲಿಗೆ ಮತ್ತು ಗಂಟಲಿನ ಸೋಂಕನ್ನು ಸಹ ಉಂಟುಮಾಡಬಹುದು. ಆಹಾರದಲ್ಲಿ ಇದನ್ನು ಹೆಚ್ಚಾಗಿ ಬಳಸಿ, ಸೇವನೆ ಮಾಡಿದರೆ ಬಾಯಿ, ಮುಖ ಮತ್ತು ನಾಲಿಗೆ ಭಾಗ ಊದಿಕೊಂಡು ವಿಪರೀತ ಸೀನುವಿಕೆ ಮತ್ತು ಗಂಟಲಿನ ಕಿರಿಕಿರಿ ಉಂಟಾಗುತ್ತದೆ ಎಂದು ಹೇಳಲಾಗಿದೆ.
ಕೀಲು ನೋವು :
ಟೊಮೆಟೊ ಸೇವನೆಯಿಂದ ಕೀಲು ನೋವು ಸಮಸ್ಯೆ ಉಂಟಾಗುತ್ತದೆ. ಟೊಮೆಟೊದಲ್ಲಿ ಕೀಲು ನೋವು ಮತ್ತು ಊತವನ್ನು ಹೆಚ್ಚಿಸುವ ಸೋಲನೈನ್ ಇದೆ. ಹಿಸ್ಟ್‌ಮಿನ್ ಮತ್ತು ಸೋಲನೈನ್ ವೈರಾಣು ದೇಹದಲ್ಲಿ ಕ್ಯಾಲ್ಸಿಯಂ ಅಂಗಾಂಶಗಳನ್ನು ನಿರ್ಮಿಸುತ್ತದೆ. ಇದು ಕೀಲುಗಳ ಊತಕ್ಕೆ ಕಾರಣವಾಗುತ್ತದೆ. ಹಾಗೇ ಅತಿಯಾದ ಟೊಮೆಟೊ ಸೇವನೆಯಿಂದ ಬರುವ ಈ ಕೀಲು ನೋವು ಸಂಧಿವಾತಕ್ಕೆ ಕಾರಣವಾಗುತ್ತದೆ.
ಅಜೀರ್ಣ :
ಟೊಮೆಟೋ ಸೇವನೆಯಿಂದ ಅಜೀರ್ಣದ ಸಮಸ್ಯೆ ಕಾಡುತ್ತದೆ. ಇದರಲ್ಲಿ ಆಮ್ಲ ಅಧಿಕವಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸೋದ್ರಿಂದ ಗ್ಯಾಸ್ಟ್ರಿಕ್ ಆಮ್ಲವು ಹೆಚ್ಚಾಗುತ್ತದೆ. ಆಗ ಎದೆಯುರಿ ಉಂಟಾಗಬಹುದು. ಟೊಮೆಟೊದಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆಗೆ ಹಾನಿಕಾರಕವಾಗಿದೆ. ಹಾಗಾಗಿ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಟೊಮೆಟೊ ಸೇವನೆಯನ್ನು ನಿಲ್ಲಿಸಿ.