ಸದ್ಯದಲ್ಲೇ ಡಿಕೆಶಿಯ ಸಿಡಿ, ಗರ್ಲ್ ಫ್ರೆಂಡ್ ಎಲ್ಲವನ್ನೂ ಬಹಿರಂಗ ಮಾಡ್ತೀನಿ ಎಂದ ಜಾರಕೀಹೊಳಿ! ರಾಜ್ಯದಲ್ಲಿ ಮತ್ತೆ ಶುರುವಾಯ್ತು ಸಿಡಿ ಸಮರ!!
ರಾಜ್ಯದಲ್ಲಿ ರಾಜಕಾರಣಿಗಳ ವಿಚಾರವಾಗಿ ಜಾಸ್ತಿ ಸುದ್ದಿ ಮಾಡೋದು, ಅವರೆಲ್ಲರಿಗೂ ಭಯ ಹುಟ್ಟಿಸೋದು ಎಂದರೆ ಅದು ಸಿ.ಡಿ ವಿಷಯ. ಇಷ್ಟು ದಿನ ತಣ್ಣಗಾಗಿದ್ದ ಈ ಸಿ ಡಿ ವಿಚಾರವೀಗ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮತ್ತೆ ಹೊಗೆಯಾಡಲು ಶುರುಮಾಡಿದೆ. ಅದೂ ಕೂಡ ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಓರ್ವ ‘ವಿಷಕನ್ಯೆ’ ಯಿಂದ ಕಾಂಗ್ರೆಸ್ ಪಕ್ಷ ಹಾಳಾಗ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು, ಆಕೆಗಾಗಿ ಡಿಕೆಶಿ ಬರೋಬ್ಬರಿ 40 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಡಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡುವುದಾಗಿ ಸ್ಟೋಟಕ ಹೇಳಿಕೆ ನೀಡುವುದರೊಂದಿಗೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ವಿರುದ್ಧವೂ ಕಿಡಿಕಾರಿದ್ದಾರೆ.
ಅಲ್ಲದೆ ತಮ್ಮನ್ನು ಸಾಕಷ್ಟು ಮುಜುಗರಕ್ಕೆ ತಳ್ಳಿದ್ದ ಸಿಡಿ ವಿಚಾರವಾಗಿ ಮಾತಾಡಿದ ಅವರು, ನನ್ನ ವಿರುದ್ಧ 40 ಕೋಟಿ ರೂ. ನೀಡಿ ಸಿಡಿ ಷಡ್ಯಂತ್ರ ಮಾಡಿದ್ದು ಡಿಕೆ ಶಿವಕುಮಾರ್ ಅವರೆ. ನನ್ನ ಸಿಡಿ ಮಾತ್ರವಲ್ಲದೇ ನೂರಾರು ಜನರ ಸಿಡಿ ಮಾಡಿದ್ದಾರೆ. ಸಾಕಷ್ಟು ಅಧಿಕಾರಿಗಳು ಅವರ ಜಾಲದಲ್ಲಿ ಸಿಲುಕಿದ್ದಾರೆ. ಇದು ಗಂಭೀರವಾದ ವಿಷಯ. ರಾಜ್ಯ ಸರ್ಕಾರ ತಕ್ಷಣ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಇರಲು ನಾಲಾಯಕ್. ಎಲ್ಲಾ ಆಯಾಮದಲ್ಲೂ ತನಿಖೆ ಆಗಬೇಕು. ಜೊತೆಗೆ ನನ್ನ ವಿರುದ್ಧ ಸಿಡಿಗೆ ಸಹಕರಿಸಿದ ಯುವತಿಯನ್ನೂ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನ ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಹಾಗಾಗಿ ಮುಂದೆ ಯಾವುದೇ ಪರಿಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ವೈಯಕ್ತಿಕ ವಿಚಾರವನ್ನು ನಾನು ಮಾತನಾಡಬೇಕಾಗುತ್ತೆ. ಸಿ.ಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಅಮಿತ್ ಶಾ ಅವರಿಗೆ ಮಾತಾಡಿದ್ದೇನೆ, ಸಿ.ಡಿ ಕೇಸ್ನಲ್ಲಿ ಯಾರ ಯಾರ ಕೈವಾಡ ಇದೆ ಅನ್ನೋದಕ್ಕೆ ಸಾಕ್ಷಿ ಇವೆ. ಇದರ ಕುರಿತಾದ ಒಂದು ಆಡಿಯೋ ನನ್ನ ಬಳಿಯಿದ್ದು ಅದರಲ್ಲಿ ‘ನಲವತ್ತು ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ. ರಮೇಶ್ ಜಾರಕಿಹೊಳಿ ನನ್ನ ಮಿತ್ರ. ಸಿಡಿ ವಿಚಾರ ಇಟ್ಟುಕೊಂಡು ಅವನ ಬುಡಕ್ಕೆ ಸರಿಯಾಗಿ ಇಡುತ್ತೇನೆ’ ಎಂದು ಮಹಾನಾಯಕ ಒಬ್ಬ ಮಾತಾಡಿರುವ ಸಂಭಾಷಣೆ ಇದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಿಡಿ ಬಿಡುಗಡೆ ಮಾಡಿದ ಬಳಿಕವೂ ನನ್ನೊಂದಿಗೆ ರಾಜಿಯಾಗಲು ಮುಂದಾಗಿದ್ದರು. ಆದರೆ ನಾನು ಒಪ್ಪಲಿಲ್ಲ. ಈಗ ಡಿಕೆ ಶಿವಕುಮಾರ್ ತಮ್ಮ ಗರ್ಲ್ಫ್ರೆಂಡ್ ಜೊತೆಗೆ `ನನ್ನ ಹತ್ತಿರ ದುಬೈನಲ್ಲಿ, ಲಂಡನ್‌ನಲ್ಲಿ ಮನೆಯಿದೆ. ಸಾವಿರಾರು ಕೋಟಿ ಹಣ ಇದೆ’ ಎಂದು ಹೇಳಿಕೊಂಡಿರುವ ಆಡಿಯೋ ನನ್ನ ಬಳಿಯಿದೆ. ಇದೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸುತ್ತೇನೆ ಎಂದ ಅವರು ಇದರೊಂದಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಮೂಲಕ ಡಿಕೆಶಿ ಬ್ಲ್ಯಾಕ್ ಆಂಡ್ ವೈಟ್ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು ‘ನನ್ನ ವಿರುದ್ಧ ಅಶ್ಲೀಲ ವೀಡಿಯೋನಲ್ಲಿ ಮಾಡಿದ್ದ ಯುವತಿ ಬೆಂಗಳೂರಿನ ಕಾಂಗ್ರೆಸ್ ಮಹಿಳಾ ಪದಾಧಿಕಾರಿಯ ಮನೆಯಲ್ಲಿ ಇದ್ದಾಳೆ. ಮುಂದಿನ ಚುನಾವಣೆ ನನ್ನ ಕೊನೆ ಚುನಾವಣೆಯಾಗಲಿದ್ದು, 5 ವರ್ಷದಲ್ಲಿ ಡಿಕೆಶಿ ಅವರನ್ನ ಮುಗಿಸುತ್ತೇನೆ, ಅರೆಸ್ಟ್ ಮಾಡಿಸುತ್ತೇನೆ ಎಂದು ಶಪಥ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ. ಎಲ್ಲಾ ದಾಖಲೆಗಳು ನನ್ನ ಜೊತೆ ಇದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ. ಎಲ್ಲಾ ದಾಖಲೆಗಳನ್ನು ನಾನು ಸಿಬಿಐಗೆ ನೀಡುತ್ತೇನೆ’ ಎಂದು ಈ ವೇಳೆ ತಿಳಿಸಿದರು.