ಜಿಯೋ ಬಿಡುಗಡೆ ಮಾಡಿದೆ ಅತ್ಯಾಕರ್ಷಕ ರಿಚಾರ್ಜ್ ಪ್ಲ್ಯಾನ್ | ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನ ಪಡೆದಿರುವ ಜಿಯೋ ರಿಲಯನ್ಸ್, ಗ್ರಾಹಕರ ಮನಸೆಳೆಯಲು ಹೊಚ್ಚ ಹೊಸ ಆಫರ್’ಗಳೊಂದಿಗೆ ಪ್ರತಿ ಬಾರಿಯು ಬರುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನು ನೀಡುತ್ತಿವೆ. ಇದೀಗ ಹೊಸ ಪ್ರೀಪೇಯ್ಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದೂ, ಅವುಗಳಲ್ಲಿ ಮುಖ್ಯವಾಗಿ ಪ್ರತಿದಿನ 2.5GB ಡೇಟಾದ ಕೆಲವು ಪ್ಲಾನ್‌ಗಳು ಹೆಚ್ಚು ಗಮನ ಸೆಳೆದಿವೆ. ನೀವು ಜಿಯೋ ಗ್ರಾಹಕರಾ? ಹಾಗಾದರೆ ಈ ಬೆಸ್ಟ್ ಪ್ರೀಪೇಯ್ಡ್ ಯೋಜನೆಗಳನ್ನು ತಿಳಿದುಕೊಳ್ಳೋಣ ಬನ್ನಿ.

ಜಿಯೋ 349ರೂ. ಪ್ರೀಪೇಯ್ಡ್ ಪ್ಲಾನ್:- ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯಬಹುದಾಗಿದೆ. ಇದರಲ್ಲಿ ಪ್ರತಿದಿನ 100 ಎಸ್ಎಮ್‌ಎಸ್ ಮತ್ತು 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 75GB ಡೇಟಾ ಸಿಗಲಿದೆ. ಈ ಸೌಲಭ್ಯದ ಜೊತೆಗೆ ವೇಗದ ಇಂಟರ್ನೆಟ್, ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ವಾಯಿಸ್ ಕರೆ ಲಭ್ಯವಿದೆ ಇದರೊಂದಿಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 899ರೂ.ಪ್ರೀಪೇಯ್ಡ್ ಪ್ಲಾನ್:- ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 225GB ಡೇಟಾ ಸಿಗಲಿದೆ. ಜೊತೆಗೆ 100 ಎಸ್ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ. ಹಾಗೆಯೇ, ಅನ್’ಲಿಮಿಟೆಡ್ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ವಾಯಿಸ್ ಕರೆ ಲಭ್ಯವಿದೆ. ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 2023ರೂ. ಪ್ರೀಪೇಯ್ಡ್ ಪ್ಲಾನ್:- ಈ ಯೊಜನೆಯಿಂದ ಗ್ರಾಹಕರು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಆನಂದಿಸಬಹುದು. ಪ್ರತಿದಿನ 100 ಸಂದೆಶಗಳು ಮತ್ತು 2.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಈ ಯೋಜನೆಯಿಂದ ಒಟ್ಟು 630 GB ಡೇಟಾ ಸಿಗಲಿದೆ. ಜೊತೆಗೆ ಅನ್’ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 2999ರೂ. ಪ್ರೀಪೇಯ್ಡ್ ಪ್ಲಾನ್:- ಈ ಪ್ರೀಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿದಿನ 100 ಸಂದೇಶಗಳು ಜೊತೆಗೆ 2.5 GB ಡೇಟಾ ಪ್ರಯೋಜನಗಳು ಲಭ್ಯವಾಗಲಿವೆ. ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯವಿದೆ. ಜೊತೆಗೆ ಹೆಚ್ಚುವರಿ ಜಿಯೋ ಆಪ್ ಲಭ್ಯವಾಗುತ್ತವೆ.

Leave A Reply

Your email address will not be published.