of your HTML document.

ಬರೀ 9000ರೂಪಾಯಿಗೆ ಮನೆಗೆ ತನ್ನಿ ; ಜಬರ್ದಸ್ತ್ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್

ಆಕ್ಟಿವಾ ಎಂದರೆ ಎಲ್ಲರಿಗೂ ಇಷ್ಟವೇ ತಾನೇ. ಇತ್ತೀಚಿಗೆ ಜನರು ಅತಿಯಾಗಿ ಮೆಚ್ಚಿ ಹೆಚ್ಚು ಪ್ರಸಿದ್ಧಿ ಯಲ್ಲಿರುವ ಹೋಂಡಾ ಆಕ್ಟಿವಾ ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ಹೌದು ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಹೋಂಡಾ ಆಕ್ಟಿವಾ ನೆನಪಿಗೆ ಬರುತ್ತೆ. ನೀವು ಕೂಡ ಹೊಸ ಆಕ್ಟಿವಾ ಸ್ಕೂಟರ್ ನ್ನು ಇದೀಗ ಕಡಿಮೆ ಮೊತ್ತದಲ್ಲಿ ಮನೆಗೆ ತರಬಹುದು.ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇತ್ತೀಚೆಗೆ ತನ್ನ ಹೊಸ ಆಕ್ಟಿವಾ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಗೆ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಎಂದು ಹೆಸರಿಸಲಾಗಿದೆ. ಅದಲ್ಲದೆ ಸ್ಕೂಟರ್ ಗೆ ಕಾರಿನಂತೆ ಸ್ಮಾರ್ಟ್ ಕೀ ನೀಡಲಾಗಿದೆ. ಈ ಕೀಯಿಂದ ಸ್ಕೂಟರ್ ಅನ್ನು ಲಾಕ್ ಅನ್ಲಾಕ್ ಆಗುತ್ತದೆ. ಈ ಕೀಯನ್ನು ಹಾಕದೆಯೇ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಾಗಿದೆ. ಕೀ 2 ಮೀಟರ್ ವ್ಯಾಪ್ತಿಯಿಂದ ಹೊರಗಿದ್ದರೆ ಸ್ಕೂಟರ್ ಲಾಕ್ ಆಗಿ ಬಿಡುತ್ತದೆ. ಈ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಬರುತ್ತದೆ. ಕೇವಲ 9000 ರೂಪಾಯಿಗಳಲ್ಲಿ ಈ ಸ್ಕೂಟರ್ ಮನೆಗೆ ತರಬಹುದು.ಹೊಸ ಹೋಂಡಾ ಆಕ್ಟಿವಾ ಖರೀದಿಸಲು ಯೋಜನೆ ಇದ್ದರೆ ಸ್ಕೂಟರ್‌ನ ರೂಪಾಂತರ-ವಾರು ಆನ್-ರೋಡ್ ಬೆಲೆ ಮತ್ತು ಕಂತಿನ ಮೊತ್ತವನ್ನು ತೋರಿಸುವ ಟೇಬಲ್ ಇಲ್ಲಿದೆ. ಇಲ್ಲಿ 9000 ರೂಪಾಯಿ ಮುಂಗಡ ಪಾವತಿ ಮಾಡಬೇಕು ಮತ್ತು 3 ವರ್ಷಗಳ ಸಾಲದ ಅವಧಿ ಮತ್ತು 10% ಬಡ್ಡಿದರವನ್ನು ಇರಿಸಲಾಗಿದೆ. ಸಾಲದ ಅವಧಿ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿಯೂ ಆಯ್ಕೆ ಮಾಡಬಹುದು. ಬ್ಯಾಂಕ್ ಬಡ್ಡಿ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ನಿಯಮ ಅನುಸಾರ ಬದಲಾಗುತ್ತದೆ.ಹೋಂಡಾ ಆಕ್ಟಿವಾ ಸ್ಕೂಟರ್ ಆನ್ ರೋಡ್ ಬೆಲೆ 85,298 ರೂಪಾಯಿಯಿಂದ 93,238 ವರೆ ರೂಪಾಯಿವರೆಗೆ ಇರುತ್ತದೆ. ಹೋಂಡಾ ಸ್ಕೂಟರ್‌ನ ಟಾಪ್-ಎಂಡ್ H-ಸ್ಮಾರ್ಟ್ ರೂಪಾಂತರದ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 80,537 ರೂ. ಆಗಿರುತ್ತದೆ. 93,238 ರೂ.ಗಳ ಅಂದಾಜು ಆನ್ ರೋಡ್ ಬೆಲೆಯಲ್ಲಿ 9,000 ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ 84,238 ರೂಪಾಯಿ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮೊತ್ತಕ್ಕೆ 3 ವರ್ಷಗಳವರೆಗೆ 2,718 ರೂಪಾಯಿ EMI ಪಾವತಿಸಬೇಕಾಗುತ್ತದೆ.ಸದ್ಯ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಬಿಡುಗಡೆ ಆಗಿದ್ದು ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಹೆಚ್-ಸ್ಮಾರ್ಟ್. ಸ್ಮಾರ್ಟ್ ಕೀ ವೈಶಿಷ್ಟ್ಯವು H-Smart ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಆನ್-ರೋಡ್ ಬೆಲೆ ಸ್ಟ್ಯಾಂಡರ್ಡ್ ರೂಪಾಂತರಕ್ಕೆ 85,298 ರೂ., ಡಿಲಕ್ಸ್ 88,027 ರೂ. ಮತ್ತು ಹೆಚ್-ಸ್ಮಾರ್ಟ್ ರೂಪಾಂತರಕ್ಕೆ 93,238 ರೂ. ಎಂದು ಕಂಪನಿ ತಿಳಿಸಿದೆ.

Leave A Reply

Your email address will not be published.