ನಾನೇನು ಮಾಡುವುದಾದರೂ ಕುಮಾರಸ್ವಾಮಿಯನ್ನು ಕೇಳಿಯೇ ಮಾಡುವುದು! ತಮ್ಮನನ್ನು ಬಿಟ್ಟು ಏನೂ ಮಾಡುವುದಿಲ್ಲ ಎಂದು ಹಾಸನದ ಗೊಂದಲಕ್ಕೆ ತೆರೆ ಎಳೆದ ರೇವಣ್ಣ!
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಾಸನದ ಟಿಕೇಟ್ ವಿಚಾರ ರಾಜ್ಯದಲ್ಲೆಡೆ ಸದ್ದು ಮಾಡುತ್ತಿದೆ. ಭವಾನಿ ರೇವಣ್ಣನವರು ತಾವೇ ಹಾಸನದ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಾಗಿನಿಂದ ಗರಿಗೆದರಿದ ಈ ವಿಚಾರ ಕುಮಾರಸ್ವಾಮಿ ಹೇಳಿಕೆಗಳಿಂದ ಇನ್ನೂ ಹೆಚ್ಚು ರಂಗೇರಿತು. ನಂತರ ದೇವೇಗೌಡರು ಮಧ್ಯ ಪ್ರವೇಶಿಸುವುದಾಗಿ ತಿಳಿಸಿದರು. ಇದರ ಬೆನ್ನಲ್ಲೇ ಪ್ರಜ್ವಲ್, ಸೂರಜ್ ರೇವಣ್ಣನವರು ಕೂಡ ತಮ್ಮ ಅಸಮಧಾನವನ್ನು ತೋರಿದರು. ಆದರೀಗ ರೇವಣ್ಣನವರು ಈ ವಿಚಾರದಲ್ಲಿ ಎಂಟ್ರಿ ಕೊಟ್ಟಿದ್ದು, ಅವರ ಹೇಳಿಕೆ ಮಕ್ಕಳ ಬಾಯಿಯನ್ನು ಮುಚ್ಚಿಸಿದಂತಿದೆ.
ನಾನು ಹೆಚ್.ಡಿ ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ಅವರಿಗೆ ಟಿಕೆಟ್ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ಕುಮಾರಸ್ವಾಮಿ ಮತ್ತು ಹೆಚ್.ಡಿ ದೇವೇಗೌಡರು ಏನ್ ತೀರ್ಮಾನ ಮಾಡ್ತಾರೋ ಅದೇ ಅಂತಿಮ ಎಂದು ಹಾಸನದ ಟಿಕೆಟ್ ಗೊಂದಲದ ಚರ್ಚೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತೆರೆ ಎಳೆದಿದ್ದಾರೆ.
ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದ ಅಧ್ಯಕ್ಷರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡ್ತಾರೆ ಅದೇ ಅಂತಿಮ. ನಾನು ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲಾ. ಕೆಲವರು ಭವಾನಿ ಅವರಿಗೆ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ ಮಾತ್ರ ಎಂದಿದ್ದಾರೆ.
ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತೆ. ಕುಮಾರಸ್ವಾಮಿ ಮತ್ತೆ ದೇವೇಗೌಡರು ಇಬ್ರಾಹಿಂ ಸಾಹೇಬ್ರು ಜಿಲ್ಲೆಯ ಶಾಸಕರು ನಮ್ಮ ಏಳು ಸೀಟ್ ತೀರ್ಮಾನ ಮಾಡ್ತಾರೆ. ನಮ್ಮದು ಜಿಲ್ಲೆಯ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ, ದೇವೇಗೌಡರ ತೀರ್ಮಾನವೇ ಅಂತಿಮ. ಕುಮಾರಸ್ವಾಮಿ ಮತ್ತು ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದ್ರು ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಅದು ಭ್ರಮೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.