Good News : ಪೊಲೀಸ್ ಹುದ್ದೆಯಲ್ಲಿರುವವರಿಗೆ ಸಿಹಿ ಸುದ್ದಿ!
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಡ್ಡಾಯ ವಾರದ ರಜೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಕಡ್ಡಾಯವಾಗಿ ಪೊಲೀಸರಿಗೆ ವಾರದ ರಜೆ ನೀಡಲು ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ. ರಜೆ ಮತ್ತು ವೇತನದಿಂದ ವಂಚಿತರಾದರೆ ಮಾನಸಿಕ ಹಿಂಸೆಗೆ ಒಳಪಟ್ಟು ಪೊಲೀಸರು ಶ್ರದ್ಧೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ಇರುವ ಹಿನ್ನೆಲೆ ಇದಕ್ಕಾಗಿ ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂದು ತಿಳಿಸಲಾಗಿದೆ.
ನಗರ ಪೊಲೀಸ್ ಕಮಿಷನರೇಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾನ್ಸ್ಟೇಬಲ್ ನಿಂದ ಪಿಎಸ್‌ಐ ವರೆಗಿನ ಅಧಿಕಾರಿಗಳು, ಸಿಬ್ಬಂದಿಗೆ ವಿಶೇಷ ಕರ್ತವ್ಯ ಹೊರತುಪಡಿಸಿ ಕಡ್ಡಾಯ ವಾರದ ರಜೆ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ಪೊಲೀಸರು ಯಾವುದೇ ರೀತಿಯ ಮಾನಸಿಕ ಒತ್ತಡ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗದ ರೀತಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ, ನೌಕರರ ಬೇಡಿಕೆಗಳನ್ನು ಆಲಿಸಿ ಕುಂದು ಕೊರತೆಗಳ ನಿವಾರಣೆಗೆ ಸ್ಪಂದಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿ ಆಡಳಿತ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಈ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಒಂದು ದಿನ ರಜೆ ಹಾಗೂ ರಜೆ ದಿನ ಕೆಲಸ ಮಾಡಿದ ಸಲುವಾಗಿ ನೀಡಬೇಕಾದ ವೇತನ ಒದಗಿಸಬೇಕು. ದೈನಂದಿನ ಕೆಲಸದ ಸಂದರ್ಭದಲ್ಲಿ 12 ಗಂಟೆಯ ಬದಲಿಗೆ 8 ಗಂಟೆ ಮಾತ್ರ ಕರ್ತವ್ಯಕ್ಕೆ ನಿಯೋಜಿಸುವಂತೆ ಆದೇಶ ನೀಡಬೇಕೆಂದು ಅನಾಮಧೇಯ ಪತ್ರ ತಲುಪಿದೆ ಎನ್ನಲಾಗಿದೆ. ಈ ಕುರಿತಂತೆ ಕ್ರಮಕೈಗೊಂಡಿರುವ ಪ್ರತಾಪ್ ರೆಡ್ಡಿ 2017ರಲ್ಲಿ ಪೋಲಿಸ್ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಕಡ್ಡಾಯವಾಗಿ ವಾರದ ರಜೆ ಕುರಿತು ಹೊರಡಿಸಿದ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸದ ನಡುವೆ ಒಮ್ಮೆ ರಜೆ ಸಿಕ್ಕರೆ ಸಾಕು ಎಂದು ಅಂದುಕೊಳ್ಳುವವರೆ ಹೆಚ್ಚು. ಕೆಲಸದ ನಡುವೆ ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವವರೇ ಹೆಚ್ಚು. ಇದೀಗ, ಪೋಲಿಸ್ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ಯೊಂದು ಹೊರಬಿದ್ದಿದೆ.