Budget 2023: ತೆರಿಗೆ ಪಾವತಿದಾರರಿಗೆ ಈ ಬಾರಿಯ ಬಜೆಟಿನಲ್ಲಿ ಸಿಗಲಿದೆ ಭರ್ಜರಿ ಸಿಹಿ ಸುದ್ದಿ

ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಹಲವಾರು ಬದಲಾವಣೆ ಆಗುವ ಸಾಧ್ಯತೆಗಳಿವೆ. ಇದೀಗ ಫೆಬ್ರವರಿ 1 ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಹಣಕಾಸು ಸಚಿವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C, 80CCC ಮತ್ತು 80CCD ಅಡಿಯಲ್ಲಿ ವಿನಾಯಿತಿಯನ್ನು ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಮೂಲಗಳು ವರದಿ ಮಾಡಿವೆ. 2023-24ನೇ ಸಾಲಿನ ಆರ್ಥಿಕ ಆಯವ್ಯಯ ಮಂಡನೆ ಕೆಲವೇ ದಿನಗಳಲ್ಲಿ ಆಗಲಿದೆ. ಸದ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸುವ ನಿಯಮಗಳಿಗೆ ಜನರು ಕಾತುರದಿಂದ ಕಾಯುತ್ತಿದ್ದಾರೆ.

ಸದ್ಯ ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆಯ ನಿಬಂಧನೆಗಳಲ್ಲಿ ಬದಲಾವಣೆಯಾಗಬಹುದು ಎಂಬ ಗೊಂದಲಗಳು ಇವೆ. ಈ ಬಾರಿಯ ಬಜೆಟ್ ನಲ್ಲಿ ಮೋದಿ ಸರ್ಕಾರವು ಆದಾಯ ತೆರಿಗೆಯ ಸ್ಲ್ಯಾಬ್ 80C ನಲ್ಲಿ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ನಿರೀಕ್ಷಿಸಲಾಗುತ್ತದೆ. ಈ ಮೇಲಿನ ಬದಲಾವಣೆ ಆದಲ್ಲಿ ನೀವು ಈ ಕೆಳಗಿನಂತೆ ಹಣ ಉಳಿತಾಯ ಮಾಡಬಹುದಾಗಿದೆ.

ಆದಾಯ ತೆರಿಗೆಯ ಸ್ಲ್ಯಾಬ್ 80Cನ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಹೆಚ್ಚಿನ ಹೂಡಿಕೆ ಮಾಡುವ ಮೂಲಕ ತಮ್ಮ ತೆರಿಗೆಯನ್ನು ಉಳಿಸಲು ಸಾಧ್ಯವಾಗಲಿದೆ. ಇದರಲ್ಲಿ ಸರ್ಕಾರ ವಿನಾಯಿತಿ ನೀಡಿದರೆ ಮಧ್ಯಮ ವರ್ಗದ ಜನರಿಗೆ ಕೊಂಚ ಸಮಾಧಾನ ಆಗಲಿದೆ. ಪ್ರಸ್ತುತ 80ಸಿ ಅಡಿಯಲ್ಲಿ ರೂ 1.5 ಲಕ್ಷ ರಿಯಾಯಿತಿ ಪಡೆಯಬಹುದು . ಈ ವಿನಾಯಿತಿ ಮಿತಿಯನ್ನು ಸರ್ಕಾರ 2 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಅಭಿಪ್ರಾಯ ಇದೆ. ಈ ರೀತಿ ಸಂಭವಿಸಿದರೆ 5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಜನರು ತೆರಿಗೆ ವಿನಾಯಿತಿ ಪಡೆಯಲಿದ್ದಾರೆ.

ನಿಮ್ಮ ಆದಾಯವು 5 ಲಕ್ಷ ರೂಪಾಯಿಗಳಾಗಿದ್ದರೆ ನೀವು ಹೂಡಿಕೆ ಮಾಡದೆಯೇ ನಿಮ್ಮ ತೆರಿಗೆಯನ್ನು ಉಳಿಸಬಹುದು, ಆದರೆ ನಿಮ್ಮ ಆದಾಯವು 5 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅನ್ನು ಬಳಸಬಹುದು. ಪ್ರಸ್ತುತ ಇದರ ಅಡಿಯಲ್ಲಿ 1.50 ಲಕ್ಷ ರೂ. ವರೆಗೆ ವಿನಾಯ್ತಿ ಪಡೆಯಬಹುದಾಗಿದೆ. ಈ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸಿದರೆ, ನೀವು ವರ್ಷಕ್ಕೆ ತೆರಿಗೆ ರೂಪದಲ್ಲಿ 2500 ರೂಪಾಯಿಗಳನ್ನು ಉಳಿತಾಯ ಮಾಡಬಹುದು.

ಸದ್ಯ ಆದಾಯ ತೆರಿಗೆಯಲ್ಲಿ 80C ಅಡಿಯಲ್ಲಿ ವಿನಾಯಿತಿ ಪಡೆಯಲು ಬಯಸಿದರೆ, ನೀವು ಹಲವು ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ ನೀವು ಮ್ಯೂಚುವಲ್ ಫಂಡ್, ಫಿಕ್ಸೆಡ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಲ್ಲಿ ಹೂಡಿಕೆ ಮಾಡಬಹುದು. ಇದರ ಹೊರತಾಗಿ, ಸೆಕ್ಷನ್ 80 CCC ಅಡಿಯಲ್ಲಿ ನೀವು ಕೆಲವು ಪಾಲಿಸಿಗಳಿಂದ ವಿನಾಯಿತಿ ಪಡೆಯಬಹುದು.

ಹೌದು ಸದ್ಯದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸುವ ತೆರಿಗೆ ನಿಯಮಗಳಲ್ಲಿ ಹಲವಾರು ಬದಲಾವಣೆ ಆಗುವ ಸಾಧ್ಯತೆ ಇದೆ.

Leave A Reply

Your email address will not be published.