Smartphone: ಜಬರ್ ದಸ್ತ್ ಫೀಚರ್ ಹೊಂದಿರುವ 20,000ದ ಒಳಗಿನ ಬೆಸ್ಟ್ ಸ್ಮಾರ್ಟ್ ಫೋನ್ ಡೀಟೇಲ್ಸ್ ಇಲ್ಲಿದೆ

ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಕ್ಯಾಮೆರಾ ಮತ್ತು ಅಧಿಕ ಬ್ಯಾಟರಿ ಪವರ್ ಹೊಂದಿರುವ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ . ಹಾಗಾದ್ರೆ ನೀವು 20,000 ರೂ. ಒಳಗಡೆ ಖರೀದಿಸಬಹುದಾದ 108 ಮೆಗಾಫಿಕ್ಸೆಲ್​ನ ಅತ್ಯುತ್ತಮ ಸ್ಮಾರ್ಟ್​​ಫೋನ್​ಗಳ ಬಗ್ಗೆ ಇಲ್ಲಿ ತಿಳಿಯಿರಿ.

ಸ್ಮಾರ್ಟ್ ಫೋನ್ ಗಳು ಇಂತಿವೆ :

  • ರಿಯಲ್ ಮಿ 9: ಇದರ ಬೆಲೆ 18,999 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.4 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 680 6nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 12 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ಮೋಟೋ ಎಡ್ಜ್ 20 ಫ್ಯೂಶನ್: ಇದರ ಬೆಲೆ 18,999 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮನ್ಸಿಟಿ 800U ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಮುಖ್ಯವಾಗಿ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್​ ಮತ್ತು 2 ಮೆಗಾಫಿಕ್ಸೆಲ್​ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ರೆಡ್ಮಿ ನೋಟ್ 11 ಪ್ರೊ ಪ್ಲಸ್: ಇದರ ಬೆಲೆ 19,999 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 695 8nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ರೆಡ್ಮಿ ನೋಟ್ 11 ಪ್ರೊ: ಇದರ ಬೆಲೆ 17,999 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಮುಖ್ಯವಾಗಿ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್, 2 ಮೆಗಾಫಿಕ್ಸೆಲ್​​ನ 2 ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ರೆಡ್ಮಿ ನೋಟ್ 10ಪ್ರೊ ಮ್ಯಾಕ್ಸ್ : ಇದರ ಬೆಲೆ 19,999 ರೂ. ಆಗಿದ್ದು ಸ್ಮಾರ್ಟ್​​ಫೋನ್ ಕೂಡ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 732G 8nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 5020mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+5 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ಮೋಟೋ G60: ಇದರ ಬೆಲೆ 15,689 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.8 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 732G ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು, 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.
  • ರೆಡ್ಮಿ ನೋಟ್ 10S: ಇದರ ಬೆಲೆ 17,499 ರೂ. ಆಗಿದ್ದು ಈ ಸ್ಮಾರ್ಟ್​​ಫೋನ್ 6.43 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 12nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತಿದ್ದು 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.

ಹೌದು ಈ ಮೇಲಿನಂತೆ ಮಾರ್ಕೆಟ್​ನಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್​​ಫೋನ್​ಗೆ ಭರ್ಜರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಕೆಲ ಕಂಪನಿಗಳು ದೇಶದಲ್ಲಿ ಬಜೆಟ್ ಬೆಲೆಗೆ 108MP ಸಾಮರ್ಥ್ಯದ ಸೆನ್ಸಾರ್​​ನಲ್ಲಿ ಫೋನ್ ರಿಲೀಸ್ ಮಾಡುತ್ತಿದೆ. ಆದ್ದರಿಂದ ನೀವು 20,000 ರೂ. ಒಳಗಡೆ ಇರುವ ಈ ಮೇಲೆ ಪಟ್ಟಿ ಮಾಡಲಾಗಿರುವ ಸ್ಮಾರ್ಟ್​​ಫೋನ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.