ಒಂದೇ ಮೊಬೈಲ್ ನಲ್ಲಿ ಎರಡು ಸಿಮ್ ಬಳಕೆ ಮಾಡುತ್ತಿದ್ದರೆ ಗಮನಿಸಿ: ನಿಮ್ಮ ಬ್ಯಾಂಕ್ ಖಾತೆ ಆಗ್ಬೋದು ಖಾಲಿ
ಇಡೀ ಜಗತ್ತು ಡಿಜಿಟಲೀಕರಣ ಹೊಂದುತ್ತಿದ್ದು, ಎಲ್ಲಾ ವ್ಯಾಪಾರ ವಹಿವಾಟುಗಳು ಮೊಬೈಲ್ ನಲ್ಲೆ ನಡೆಯುತ್ತಿದೆ. ಬ್ಯಾಂಕಿಗೆ ಸಂಬಂಧಿಸಿದಂತೆ, ಹಣ ಜಮೆ ಮಾಡುವುದರಿಂದ ಹಿಡಿದು ಹಣ ವಿತ್-ಡ್ರಾ ಮಾಡುವವರೆಗೂ ಟೆಕ್ನಾಲಜಿಯು ಮುಂದುವರಿದಿದೆ. ಈ ಕ್ರಮದಲ್ಲಿ ಹಣಕಾಸಿನ ವಹಿವಾಟುಗಳಿಗೆ UPI ಪ್ಲಾಟ್ಫಾರ್ಮ್ಗಳನ್ನು ಕೂಡ ಬಳಸಲಾಗುತ್ತಿದೆ. ಕೆಲವರು ಅನುಕೂಲಕ್ಕಾಗಿ ಎರಡು ಅಥವಾ ಹೆಚ್ಚಿನ ಸಿಮ್’ಕಾರ್ಡ್ ಬಳಸುತ್ತಾರೆ. ಆದರೆ ಎಲ್ಲಾ ಸಿಮ್ ಕಾರ್ಡ್ ಗೆ ರಿಚಾರ್ಜ್ ಮಾಡಲು ಮರೆಯುತ್ತಾರೆ. ನೀವು ಏನಾದ್ರೂ ರಿಚಾರ್ಜ್ ಮಾಡಲು ಮರೆತಿದ್ದೀರಾ? ಹಾಗಾದ್ರೆ, ನಿಮ್ಮ ಅಕೌಂಟ್’ನಲ್ಲಿರುವ ಎಲ್ಲಾ ಹಣ ಗುಳುಂ ಆಗೋದು ಗ್ಯಾರಂಟಿ! ಎಚ್ಚರ!!!
ಹೌದು, ತಂತ್ರಜ್ಞಾನ ಎಷ್ಟೇ ಮುಂದುವರಿಯುತ್ತಿದ್ದರು ಸೈಬರ್ ಕಳ್ಳರು ತಮ್ಮ ಖದೀಮ ಪ್ರವೃತ್ತಿಯನ್ನು ಬಿಡುವುದಿಲ್ಲ. ನಾವು ಒಂದು ಹೆಜ್ಜೆ ಮುಂದೆ ಎಂಬಂತೆ ಯೋಚಿಸುತ್ತಿರುತ್ತಾರೆ. ನಿಮ್ಮ ಫೋನ್ನಲ್ಲಿರುವ ಎರಡನೇ ಸಿಮ್’ಗೆ ರೀಚಾರ್ಜ್ ಮಾಡಲು ಮರೆಯುವುದು ದೊಡ್ಡ ತಲೆನೋವಾಗಿದೆ. ನಿಮ್ಮ ಈ ತಪ್ಪೇ ಸೈಬರ್ ಕಳ್ಳರಿಗೆ ದಾರಿಯಾಗಬಹುದು. ಈ ಸಣ್ಣ ನಿರ್ಲಕ್ಷ್ಯವು ಜೀವಿತಾವಧಿಯ ಉಳಿತಾಯದ ನಷ್ಟಕ್ಕೆ ಕಾರಣವಾಗಬಹುದು. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡನೇ ಸಿಮ್ ರೀಚಾರ್ಜ್ ಮಾಡದೇ ಸೈಬರ್ ಕ್ರಿಮಿನಲ್’ಗಳಿಂದ ಅನೇಕರು ಮೋಸ ಹೋಗುತ್ತಿದ್ದಾರೆ. ನಕಲಿ ಕೆವೈಸಿ ಮೂಲಕ ಸಿಮ್ ಖರೀದಿಸಿ ವಂಚನೆ ಮಾಡಲಾಗುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ.
ರಿಚಾರ್ಜ್ ಆಗದ ಸಿಮ್ ಕಾರ್ಡ್ ಇಟ್ಟುಕೊಂಡು ಇವರು ಮೋಸ ಮಾಡೋದು ಹೇಗೆ ಗೊತ್ತಾ?
ಈ ಸೈಬರ್ ಕ್ರಿಮಿನಲ್ಗಳು ಮೊದಲು ನಕಲಿ ಐಡಿಯೊಂದಿಗೆ ಲಾಕ್ ಮಾಡಿದ ಸಿಮ್ ಖರೀದಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ಸಿಮ್ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ನಿಮ್ಮ ಹಳೆಯ 10 ಅಂಕಿಯ ಸಂಖ್ಯೆಗಳನ್ನ ಖರೀದಿಸಿ ಮತ್ತು ಅವರ ಬ್ಯಾಂಕ್ ಖಾತೆ ಮತ್ತು ಇಮೇಲ್ ಐಡಿಯನ್ನು ತಿಳಿದುಕೊಳ್ಳುತ್ತಾರೆ. ನಂತರ ಈ ಖದೀಮರು ಹಣಕಾಸು ವ್ಯವಹಾರಗಳ ಫ್ಲಾಟ್’ಫಾರ್ಮ್ ಆಗಿರುವ BHIM-UPI, Paytm, Phonepay ಅಥವಾ Google Pay ನಂತಹ ಯಾವುದೇ ಅಪ್ಲಿಕೇಶನ್ಗೆ ನಿಮ್ಮ ಸಿಮ್ ಮೂಲಕ ಲಾಗ್ ಇನ್ ಆಗುತ್ತಾರೆ. ಇವುಗಳನ್ನ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಇಮೇಲ್ ಐಡಿಗೆ ಲಗತ್ತಿಸಲಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನು ತೆಗೆದುಕೊಂಡ ನಂತ್ರ ಈ ದುಷ್ಕರ್ಮಿಗಳು ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ವೆಬ್ಸೈಟ್ಗೆ ಹೋಗಿ, ಅಲ್ಲಿ ‘ಪಾಸ್ವರ್ಡ್ ಮರೆತು ಹೋಗಿದೆ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾರೆ. ಖಾತೆ ಸಂಖ್ಯೆ, ಇಮೇಲ್ ಮತ್ತು ನೋಂದಾಯಿತ ಫೋನ್ ಸಂಖ್ಯೆಯನ್ನ ನಮೂದಿಸಲು ಬ್ಯಾಂಕ್ನ ವೆಬ್ಸೈಟ್ ನಿಮ್ಮನ್ನು ಕೇಳುತ್ತದೆ. ನಂತರ ಬ್ಯಾಂಕ್ನಲ್ಲಿ ನೋಂದಾಯಿಸಲಾದ ಹಳೆಯ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ ಇಂಟರ್ನೆಟ್ ಬ್ಯಾಂಕಿಂಗ್ ಐಡಿ ಪಡೆಯುತ್ತಾರೆ.
ಈ ಪ್ರಕ್ರಿಯೆಯಲ್ಲಿ ಅಪರಾಧಿಗಳು ‘ಪಾಸ್ವರ್ಡ್ ಮರೆತು ಹೋಗಿದೆ’ ಆಯ್ಕೆಯನ್ನ ಬಳಸಿಕೊಂಡು ಹೊಸ ಪಾಸ್ವರ್ಡ್ ಅನ್ನು ಸೃಷ್ಟಿಸುತ್ತಾರೆ. ನಂತರ ಅವರು ಖಾತೆಯನ್ನು ತೆರೆದು ಮೊತ್ತವನ್ನೆಲ್ಲಾ ಎಗರಿಸುತ್ತಾರೆ. ನೀವು ಎರಡನೇ ಸಿಮ್ ಬಳಸದೇ ಇರುವುದರಿಂದ ವಹಿವಾಟಿಗೆ ಸಂಬಂಧಿಸಿದ ಸಂದೇಶಗಳು ನಿಮಗೆ ತಿಳಿಯುವುದಿಲ್ಲ.